22nd June 2024
Share

TUMAKURU:SHAKTHIPEETA FOUNDATION

ನಮ್ಮ ಸಂಸ್ಕøತಿಯಲ್ಲಿ ಯಾವುದೇ ಮನೆ, ದೇವಾಲಯ ಕಟ್ಟಡಗಳ ಪೂಜೆ ಆದ ನಂತರ 48 ದಿವಸಗಳ ಕಾಲ ಸಂಜೆ ದೀಪ ಹಚ್ಚಿ ಪೂಜೆ ಮಾಡುವುದು ಸಂಪ್ರದಾಯ.

  ಶಕ್ತಿಭವನ ದಲ್ಲಿ ಜ್ಞಾನಿಗಳ ಅನುಭವದ ದಾಖಲೆಗಳ ಮತ್ತು ವಿವಿಧ ಸರ್ಕಾರಿ ಯೋಜನೆಗಳ ನಿಖರವಾದ ಡಾಟಾ ಸಂಗ್ರಹದ ಆರಂಭೋತ್ಸವ ದಿನಾಂಕ:10.05.2024 ರಂದು ಬಸವ ಜಯಂತಿ ದಿವಸ ಆರಂಭವಾಗಲಿದೆ.

  48 ದಿವಸಗಳ ಕಾಲದ ಪೂಜೆ ಜೊತೆಗೆ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ನುಡಿಮುತ್ತಿನ ಹಿನ್ನಲೆಯಲ್ಲಿ, 108 ದಿವಸಗಳ ಕಾಲ, ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ  ದಾಖಲೆಗಳ ಸಂಗ್ರಹದ ಪಟ್ಟಿ ಮಾಡಲು ಚಿಂತನೆ ನಡೆಸಲಾಗಿದೆ. ಪಟ್ಟಿ ಬೆಳೆಯುತ್ತಲೇ ಇರುತ್ತದೆ.

 ಕೇಂದ್ರ ಸರ್ಕಾರಕ್ಕೆ 545 ಅಧ್ಯಯನ ಪೀಠಗಳ ಪ್ರಸ್ತಾವನೆ ಸಲ್ಲಿಸುವ, ಯೋಜನೆ ರೂಪುರೇಷೆ ಸಿದ್ಧಪಡಿಸಲು ಗುರಿ ಹೊಂದಲಾಗಿದೆ. ಈ ಪ್ರಸ್ತಾವನೆಗೆ ಅಗತ್ಯವಿರುವ ಸಂವಾದಗಳನ್ನು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಡೆಸಲು ರೋಡ್ ಮ್ಯಾಪ್ ಸಿದ್ಧಪಡಿಸಲು ಯೋಚಿಸಲಾಗಿದೆ. 545 ಅಧ್ಯಯನ ಪೀಠಗಳ ಸ್ಥಳUಳ ಜಿ.ಐ.ಎಸ್. ಲೇಯರ್ ಸಹಿತ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು.

ರಾಜ್ಯದ 545 ಧರ್ಮ/ಜಾತಿ/ಉಪಜಾತಿಗಳ/ ಕ್ಲಸ್ಟರ್‍ಗಳ  ಸಂಘ ಸಂಸ್ಥೆಗಳ ಪ್ರಮುಖರನ್ನು ಭೇಟಿಯಾಗಿ, ಒಂದೊಂದು ಅಧ್ಯಯನ ಪೀಠದ ನಿರ್ವಹಣೆ/ ಹೊಣೆಗಾರಿಕೆಯ ಜವಾಬ್ಧಾರಿ ಪಡೆಯಲು ಸಮಾಲೋಚನೆ ನಡೆಸಲಾಗುವುದು.

545 ಅಧ್ಯಯನ ಪೀಠಗಳ ಅಧ್ಯಕ್ಷತೆ ವಹಿಸುವವರನ್ನು ಬೇಟಿ ಮಾಡಲು ಚಿಂತನೆ ನಡೆಸಲಾಗಿದೆ. ರಾಜ್ಯಾಧ್ಯಂತ ಸಾವಿರಾರು ಜನರು ಶ್ರಮಿಸಬೇಕಿದೆ.

108 ಶಕ್ತಿಪೀಠಗಳ ಸಕ್ರ್ಯೂಟ್ ಗೆ ಮತ್ತು 545 ಅಧ್ಯಯನ ಪೀಠಗಳಿಗೆ, ಕೇಂದ್ರ ಸರ್ಕಾರದ ಇನ್ ಪ್ರಿನ್ಸಿಪಲ್ ಅಪ್ರೂವಲ್ ದೊರಕಿದ ನಂತರ, ಶಕ್ತಿಭವನ ಲೋಕಾರ್ಪಣೆ ಯಾಗಲಿದೆ.

ದಿನಾಂಕ:10.05.2024 ರಂದು ‘ಬಸವ ಜಯಂತಿ’  ದಿವಸ, ಈ ಕಾರ್ಯದ ಆರಂಬೋತ್ಸವ ಮಾಡಿ ಮುಂದಿನ 108 ದಿವಸಗಳವರೆಗೂ ನಿರಂತರವಾಗಿ, ಈ ಆಂದೋಲನ ಕಾರ್ಯಕ್ರಮ ನಡೆಯಲಿದೆ.   

545 ಶಕ್ತಿಪೀಠ ಲಾಕರ್ಸ್ ಮಾಡಿಸಲಾಗುವುದು, ಆರಂಭದಲ್ಲಿ 35  ಶಕ್ತಿಪೀಠ ಲಾಕರ್ಸ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ, ಅದರಲ್ಲಿ ತಾವೂ ಒಂದು ಕಡತ ಇಟ್ಟು ಅಥವಾ ಕಡತ ಮುಟ್ಟುವ ಮೂಲಕ ಆಶಿರ್ವದಿಸ ಬನ್ನಿ