30th April 2024
Share

TUMAKURU:SHAKTHIPEETA FOUNDATION

ಊರಿಗೊಂದು ಕೆರೆ ಕೆರೆಗೆ ನದಿ ನೀರು ಮೂಲಕ ರಾಜ್ಯದ ಪ್ರತಿಯೊಂದು ಗ್ರಾಮಗಳಿಗೂ ನದಿ ನೀರಿನ ಅಲೋಕೇಷನ್ ಮಾಡಬೇಕು, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ನೀಡಬೇಕು, ಎಂಬ ಹೋರಾಟ ಬಹಳ ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ.

ತುಮಕೂರಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ, ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಅದಕ್ಕೊಂದು ಅಧಿಕೃತ ಮುದ್ರೆ ಒತ್ತಿ ವಿವರವಾದ ಯೋಜನೆ ಸಿದ್ಧಪಡಿಸಲು ಚಾಲನೆ ನೀಡಿದ್ದು ಇತಿಹಾಸ.

 ಕಾಕತಾಳೀಯವೆಂದರೆ ಯೋಜನೆಯ ವರದಿ ರೂಪುರೇಷೆ ಕೈಗೊಳ್ಳಲು, ಅಂದಿನ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀ ಕೆ.ಜೈಪ್ರಕಾಶ್ ರವರನ್ನು ಸಂಚಾಲಕರನ್ನಾಗಿ ಸರ್ಕಾರದಿಂದ ನೇಮಕ ಮಾಡಲಾಗಿತ್ತು.

ಕಾರಣಾಂತರಗಳಿಂದ ಅಧ್ಯಯನ ನನೆಗುದಿಗೆ ಬಿದ್ದಿತ್ತು. ಪ್ರಸ್ತುತ ಮಾನ್ಯ ಉಪಮುಖ್ಯಮಂತ್ರಿಯವರು ಹಾಗೂ ಜಲಸಂಪನ್ಮೂಲ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಶ್ರೀ ಕೆ.ಜೈಪ್ರಕಾಶ್ ರವರನ್ನು ಸಲಹೆಗಾರರಾಗಿ ನೇಮಿಸಿ ಕೊಂಡಿದ್ದಾರೆ. ಇದರಿಂದ ಮತ್ತೆ ಈ ಯೋಜನೆಗೆ ಚಾಲನೆ ದೊರಕಲಿದೆ ಎಂಬ ಆಶಾ ಭಾವನೆ ನನ್ನದಾಗಿದೆ.

ಶ್ರೀ ಡಿ.ಕೆ.ಶಿವಕುಮಾರ್ ರವರು ಹಟಗಾರ, ಛಲಗಾರ ದೇವರು ಅವರಿಗೆ ನೀಡಿರುವ ಒಂದು ಅವಕಾಶ ಸದುಪಯೋಗ ಪಡಿಸಿಕೊಂಡು, ರಾಜ್ಯದ ನೀರಾವರಿಯಲ್ಲಿ ಒಂದು ಮೈಲಿಗಲ್ಲು ಸ್ಥಾಪಿಸುವರೇ ಕಾದುನೋಡಬೇಕಿದೆ.

ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಯೋಜನೆಯ ಅನುಷ್ಠಾನಕ್ಕೆ ಸಹಕಾರ ನೀಡುವ ಭರವಸೆ ಇದೆ. ಯೋಜನೆ ಜಾರಿ ಆರ್ಥಿಕ ಸಂಪನ್ಮೂಲಕ್ಕೆ ಅನುಗುಣವಾಗಿ ಜಾರಿಗೊಂಡರೂ, ಇಂಥಹ ಗ್ರಾಮಕ್ಕೆ ಇಂತಹ ನದಿ ನೀರು ನೀಡುತ್ತೇವೆ ಎಂಬ ಅಲೋಕೇಷನ್ ಮಾಡಲು, ಒಂದು ಸುವರ್ಣ ಅವಕಾಶ ದೊರಕಿದೆ.

ರಾಜ್ಯದಲ್ಲಿರುವ ನದಿ ನೀರಿನ ಸಮರ್ಪಕ ಬಳಕೆ, ಪ್ಲಡ್ ಇರ್ರಿಗೇಷನ್ ಬದಲಿಗೆ ಮೈಕ್ರೋ ಇರ್ರಿಗೇಷನ್, ರಾಜ್ಯದ ನದಿ ಜೋಡಣೆ ಮತ್ತು ಕೇಂದ್ರ ಸರ್ಕಾರದ ನದಿ ಜೋಡಣೆ ಮೂಲಕ, ಈ ಯೋಜನೆಗೆ ಮುನ್ನುಡಿ ಬರೆಯ ಬೇಕಿದೆ.

ಬಿ.ಎಸ್.ವೈ ರವರೇ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಈಗಾಗಲೇ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆಯನ್ನು, ಕೇಂದ್ರಕ್ಕೆ ಸಲ್ಲಿಸ ಬೇಕಿದೆ. ಬಿಜೆಪಿಯ 25 ಜನ ಸಂಸದರ ತಾಕತ್ತು ಪರೀಕ್ಷೆಯ ಕಾಲಕ್ಕೆ ಪಕ್ಷವಾಗಲಿದೆ ಈ ಯೋಜನೆ