21st May 2024
Share

TUMAKURU : SHAKTHIPEETA FOUNDATION

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಸದ್ದು ಮಾಡುತ್ತಿದೆ. ಇದರ ಮಧ್ಯೆ ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರವರು ನಿರುದ್ಯೋಗಿಗಳಿಗೆ ದುಡಿಮೆ ಭಾಗ್ಯ ಘೋಷಣೆ ಮಾಡುವ ಮೂಲಕ ರಾಜ್ಯದಲ್ಲಿ ಉದ್ಯೋಗ ಕ್ರಾಂತಿ ಮಾಡಲು ಸಜ್ಜಾಗುತ್ತಿದ್ದಾರಂತೆ.

ರಾಜ್ಯದಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ ಸ್ನೇಹಿ ವಾತಾವಾರಣ ಸೃಷ್ಠಿಸಲು, ಉದ್ಧಿಮೆಗಳನ್ನು ಆರಂಭಿಸಲು ಈಗ ಇರುವ ತೊಡುಕುಗಳನ್ನು ನಿವಾರಣೆ ಮಾಡಲು ದೃಷ್ಠಿ ಹರಸಿದ್ದಾರಂತೆ.

ಬಿಜೆಪಿಯಲ್ಲಿ ಮಾಜಿ ಸಚಿವ ಶ್ರೀ ಮುರುಗೇಶ್ ನಿರಾಣಿಯವರು ಮತ್ತು ಕಾಂಗ್ರೆಸ್ ನಲ್ಲಿ ಮಾಜಿ ಸಚಿವ ಶ್ರೀ ಆರ್.ವಿ.ದೇಶಪಾಂಡೆಯವರು ಅನುಭವಿ ಕೈಗಾರಿಕಾ ಸಚಿವರು ಎಂದರೆ ತಪ್ಪಾಗಲಾರದು.

ಈಗ ಎಲ್ಲಾ  ಭಾಗ್ಯಗಳ ಜೊತೆಗೆ, ದುಡಿಮೆ ಭಾಗ್ಯ ಜಾರಿಗೊಳಿಸಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ತರದಿದ್ದರೆ, ಕರ್ನಾಟಕ ರಾಜ್ಯ ಮುಂದೊಂದು ದಿನ ದಿವಾಳಿಯಾಗಲಿದೆ ಎಂಬ ಅರಿವು ಸ್ವತಃ ಆರ್ಥಿಕ ತಜ್ಞರಾದ ಶ್ರೀ ಸಿದ್ಧರಾಮಯ್ಯನವರಿಗೆ ಮೂಡಿದೆಯಂತೆ.

ನಿರ್ಗತಿPರಿಂದ ಹಿಡಿದು, ಅತ್ಯುತ್ತಮವಾಗಿ ಎಕ್ಸ್ ಪೋರ್ಟ್ ಮಾಡುವರವರೆಗೂ ಏನೇನು ಸೌಲಭ್ಯ ಕಲ್ಪಿಸಬೇಕು ಎಂಬ ಬಗ್ಗೆ ಮಾಹಿತಿ ಕ್ರೋಡಿಕರಿಸಲು ಆರಂಭಿಸಿದ್ದಾರಂತೆ.

ರಾಜ್ಯದ ಪ್ರತಿಯೊಂದು ಗ್ರಾಮ ಮಟ್ಟದಿಂದಲೂ ಲೋಕಲ್ ಉದ್ದೀಮೆದಾರರಿಗೆ ರೆಡ್ ಕಾರ್ಪೇಟ್ ಆಕಬೇಕು, ಸುಲಭವಾಗಿ ಸಾಲ ಮತ್ತು ಮೂಲಭೂತ ಸೌಲಭ್ಯ ಒದಗಿಸಬೇಕು. ಈ ಮೂಲಕ ಉದ್ಯೋಗ ಸೃಷ್ಠಿಸಲು ಭಧ್ರ ಅಡಿಪಾಯ ಹಾಕಬೇಕು ಎಂಬ ಪರಿಕಲ್ಪನೆ ಅವರದ್ದಾಗಿದೆಯಂತೆ.

ಇಷ್ಟೆಲ್ಲಾ ಹೇಳಬೇಕಾದರೆ ಒಂದು ಹಿನ್ನಲೆ ಇರಲೇಬೇಕು.

ಹೌದು ತುಮಕೂರು ವಸಂತನರಸಾಪುರದಲ್ಲಿ ಆರ್ಟಿಸಾನ್ ಮ್ಯೂಸಿಯಂ/ ಶಕ್ತಿಪೀಠ ಡಾಟಾ ಪಾರ್ಕ್ ಸ್ಥಾಪಿಸಿ, ರಾಜ್ಯದ ನಿರುದ್ಯೋಗ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಒಂದೆಡೆ ಬರುವಂತೆ ಮಾಡುವ ಕನಸು ನನ್ನದಾಗಿದೆ.

ಒಬ್ಬ ನಿರುದ್ಯೋಗಿ ಬಂದರೆ, ಇದರಲ್ಲಿ ಯಾವುದಾದರೊಂದು ಉದ್ದಿಮೆ ಆರಂಭಿಸಿ ನಾನು ಬದುಕಬಹುದು ಎಂಬ ಆತ್ಮ ವಿಶ್ವಾಸ ಅವರಿಗೆ ಬರಬೇಕು. ಹಾಗೇಯೇ ಕರ್ನಾಟಕದಲ್ಲಿ ಇಷ್ಟೆಲ್ಲಾ ಸಂಪನ್ಮೂಲ ಇದೆಯಾ, ಇಲ್ಲಿ ನಾವು ಹೂಡಿಕೆ ಮಾqಲೇ ಬೇಕು ಎಂಬ ಭಾವನೆ ಹೂಡಿಕೆದಾರರಿಗೂ ಬರಲೇ ಬೇಕು. ಅಂಥಹ ವಾತಾವರಣ ಸೃಷ್ಠಿ, ಶಕ್ತಿಪೀಠ ಡಾಟಾ ಪಾರ್ಕ್ ಉದ್ದೇಶವಾಗಿದೆ.

ವಿಶ್ವವಿದ್ಯಾನಿಲಯಗಳು ಬರೀ ಸರ್ಟಿಫಿಕೇಟ್ ಕೊಡಬಾರದು, ಉದ್ಯೋಗ ಸೃಷ್ಠಿ ಮಾಡುವ ಕೈಗಾರಿಕೆಗಳಂತಾಗ ಬೇಕು. ವಿದ್ಯಾರ್ಥಿಗಳಲ್ಲಿ ಸ್ವಂತ ದುಡಿಮೆ ಆರಂಭಿಸಲು ಆತ್ಮ ವಿಶ್ವಾಸ ತುಂಬವಂತಾಗಬೇಕು.

ಸುಮಾರು ವರ್ಷಗಳಿಂದಲೂ, ಈ ಕನಸು ಕಾಣುತ್ತಿರುವ ನಾನು, ಈಗ ಪರಿಕಲ್ಪನೆ ವರದಿ ತಯಾರಿಸಲು ಮಾಹಿತಿ ಸಂಗ್ರಹ ಮಾಡಲು ಆರಂಭಿಸಿದಾಗ, ಸಚಿವರÀ ತಂಡದ ಸದಸ್ಯರು ನನಗೆ ಈ ವಿಷಯ ತಿಳಿಸಿದ್ದಾರೆ.

ರಾಜ್ಯದ 31 ಜಿಲ್ಲೆಗಳ ಸದಸ್ಯರ ತಂಡ ರಚಿಸಿ, ಒಂದು ಅತ್ಯತ್ತಮವಾದ ಪರಿಕಲ್ಪನಾ ವರದಿ ತಯಾರಿಸಲು ‘ಜ್ಞಾನ ದಾನಿ’ಗಳು ತಮ್ಮ ಜ್ಞಾನದಾನ ಮಾಡಲು ಮನವಿ ಮಾಡಲಾಗಿದೆ.