22nd November 2024
Share

TUMAKURU:SHAKTHIPEETA FOUNDATION

  ನಮ್ಮ ಅನೂಕೂಲಕ್ಕೆ ತಕ್ಕಂತೆ, ಅಗತ್ಯಕ್ಕೆ ತಕ್ಕಂತೆ, ಆದಷ್ಟೂ ವಾಸ್ತು, ಆಯಾ, ಸೆಟ್ ಬ್ಯಾಂಕ್ ನಿಯಮಗಳನ್ನು ಅನುಸರಿಸಿ  ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠ ಮ್ಯೂಸಿಯಂ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.

ಹಿಂದೆ ಪೋಸ್ಟ್ ಆಫೀಸ್, ನಬಾರ್ಡ್ ಇಲಾಖೆ ಅಧಿಕಾರಿಗಳು, ಆಫೀಸ್ ಕಮ್ ರೆಸಿಡೆನ್ಸ್ ಮಾದರಿಯಲ್ಲಿ ವಾಸ ಇರುತ್ತಿದ್ದರು. ನಾನು ಸುಮಾರು 18 ವರ್ಷಗಳ ಕಾಲ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಚೇರಿಯಲ್ಲಿಯೇ ವಾಸವಿದ್ದೆ.ಈಗಲೂ ನಾನು ಅದೇ ಮಾದರಿಯಲ್ಲಿ ಕಟ್ಟಡನಿರ್ಮಾಣ ಮಾಡಿದ್ದೇನೆ. ಮುಂದೆ ರಾಜ್ಯದ 31 ಜಿಲ್ಲೆಗಳಲ್ಲೂ ಇದೇ ಮಾದರಿಯ ಪಿಪಿಪಿ ಕಟ್ಟಡಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ.

ಆಸಕ್ತರನ್ನು 30 ಜಿಲ್ಲೆಗಳಲ್ಲೂ ಹುಡುಕುತ್ತಿದ್ದೇನೆ. ಜನರು ಹೇಳುತ್ತಿರುವುದು ಕಮರ್ಷಿಯಲ್ ಆಗಿರಬೇಕು, ಬರೀ ಸಮಾಜ ಸೇವೆ ನಡೆಯುವುದಿಲ್ಲ, ನಮ್ಮ ಕಟ್ಟಡದ ಬಾಡಿಗೆ ನೀಡಿದರೆ ನಾವು ನಿಮಗೆ ಬೇಕಾದ ಮಾದರಿಯಲ್ಲಿ ಕಟ್ಟಡ ನಿರ್ಮಾಣ ಮಾಡುತ್ತೇವೆ, ನಮಗೆ ವೇತನ ಖರ್ಚು ವೆಚ್ಚ ನೀಡಿದರೆ, ನಾವೇ ನಡೆಸಿಕೊಂಡು ಹೋಗುತ್ತೇವೆ, ಎಂಬ ಅನಿಸಿಕೆಗಳನ್ನು ನೀಡುತ್ತಿದ್ದಾರೆ.

ಆದ್ದರಿಂದ ಕಟ್ಟಡದ ಒಂದು ಇಂಚು ಸ್ಥಳವೂ ವ್ಯರ್ಥವಾಗದಂತೆ, ನಮ್ಮ ಬಳಕೆಗೆ ಪೂರಕವಾಗಿ ಇಂಟಿರಿಯರ್, ಎಕ್ಸ್‍ಟಿರಿಯರ್  ಮಾಡಲು ಆಸಕ್ತಿ ಇರುವ ನಿಪುಣರು ಸಂಪರ್ಕಿಸಲು ಮನವಿ.  ಒಂದು ವೇಳೆ ನಮಗೆ ಇಷ್ಟವಾದರೆ ಮಾತ್ರ ನಿಮ್ಮಿಂದಲೇ ಕೆಲಸ ಮಾಡಿಸಲಾಗುವುದು. ಇಲ್ಲದೇ ಇದ್ದಲ್ಲಿ ತಮ್ಮ ಸಂಭಾವನೆ ನೀಡಲಾಗುವುದು.

ಕಟ್ ಅಂಡ್ ಪೇಸ್ಟ್ ಪಿಪಿಟಿ ಬೇಡ, ಆಕ್ಚುಯಲ್ ಪಿಪಿಟಿ ಬೇಕು. ನಿವೇಶನದಿಂದ ಆರಂಭಿಸಿ ಟೆರ್ರೆಸ್‍ವರಿಗೂ ನನ್ನ ಪರಿಕಲ್ಪನೆ ಆಧಾರದ ಮೇಲೆ ಇರಬೇಕು.