13th November 2024
Share

TUMAKURU:SHAKTHIPEETA FUNDATION

 ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಅಪ್ನಾಸ್  ಮತ್ತು ಭಾರತ @ ಸ್ವಾತಂತ್ರ್ಯ ಸೇನೆ (ಬಿಎಸ್‍ಎಸ್) ಸಹಭಾಗಿತ್ವದಲ್ಲಿ ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಕ್ಕೆ ಪೂರಕವಾಗಿ 545 ರೀಸರ್ಚ್ ಪೌಂಡೇಷನ್ ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದೆ. ಎರಡು ಸರ್ಕಾರಗಳ ಸ್ಪಂಧನೆ ನಿಜಕ್ಕೂ ತೃಪ್ತಿ ತಂದಿದೆ.

ಸರ್ಕಾರಗಳಿಗೆ ಮನವಿ ಸಲ್ಲಿಸಿ ಸುಮ್ಮನೆ ಕೂರುವ ವ್ಯವಸ್ಥೆ ನಮ್ಮಲ್ಲಿಲ್ಲ, ಕಡತಗಳ ಅನುಸರಣೆ ಜೊತೆಗೆ, ತುಮಕೂರು ಜಿಲ್ಲೆಯನ್ನು ಪೈಲಟ್ ಜಿಲ್ಲೆಯಾಗಿ  ಆಯ್ಕೆ ಮಾಡಿಕೊಂಡು ಪಿಪಿಪಿ ಮಾದರಿಯಲ್ಲಿ, ನಮ್ಮ ಸಂಸ್ಥೆಗಳು ಸರ್ಕಾದ ಜೊತೆ ವ್ಯವಹರಿಸುತ್ತಿರುವ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠದ ಯೋಜನೆಗಳ ಪ್ರಾಯೋಗಿಕ ಜಾರಿಗೆ ಶ್ರಮಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ.

 ಈ ಹಿನ್ನಲೆಯಲ್ಲಿ ತುಮಕೂರಿನ ಜಯನಗರ ಪೂರ್ವದ, ಒಂದನೇ ಮುಖ್ಯ ರಸ್ತೆಯಲ್ಲಿ ಆರಂಭಿಸಲು ಉದ್ದೇಶಿರುವ ಶಕ್ತಿಪೀಠ ಮ್ಯೂಸಿಯಂನಲ್ಲಿ ‘545 SHAKTHIPEETA LOCKERS ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಲಾಕರ್ಸ್‍ನಲ್ಲಿ ಒಂದೊಂದು ರೀಸರ್ಚ್ ಪೌಂಡೇಷನ್ ಅಧ್ಯಯನದ ಮಾಹಿತಿಗಳನ್ನು ಸಂಗ್ರಹ ಮಾಡುವ ಆಲೋಚನೆ ಇದೆ.

  ನಂತರ ಹಿರಿಯೂರು ಕ್ಯಾಂಪಸ್‍ನಲ್ಲಿ ಒಂದೊಂದು ಕೊಠಡಿಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ 545 ಶಕ್ತಿಪೀಠ ಫ್ಯಾಮಿಲಿಗಳು, ಅತ್ಯಂತ ರಹಸ್ಯವಾಗಿ ಕೈಜೊಡಿಸಲು ಮುಂದೆ ಬಂದಿವೆ. ಇದೊಂದು ನಮಗೆ ಆನೆ ಬಲ ತಂದಿದೆ.

ದಿನಾಂಕ:01.08.1998 ರಂದು ಕುಂದರನಹಳ್ಳಿ ಗಂಗಮಲ್ಲಮ್ಮ ಗ್ರಾಮ ದೇವತೆ ಪೂಜಿಸಿ ಆರಂಭಿಸಿದ ಹೋರಾಟ, ನಮ್ಮೂರಿನಲ್ಲಿ ಹೆಚ್.ಎ.ಎಲ್ ಘಟಕದ ಉದ್ಘಾಟನೆಯೊಂದಿಗೆ ಫಲ ನೀಡಿದೆ.

07.01.1997 ರಂದು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಕ್ಷತೆಯಲ್ಲಿ ಆರಂಭಿಸಿದ್ಧ ಅಪ್ನಾಸ್ ಪಶ್ಚಿಮಘಟ್ಟಗಳ ನೀರನ್ನು ಬಯಲು ಪ್ರದೇಶಕ್ಕೆ ತರಬಹುದು ಎಂಬ ದಾರಿ ತೋರಿಸಿದೆ, ಜೊತೆಗೆ ಎತ್ತಿನಹೊಳೆ ಯೋಜನೆ ಆರಂಭವಾಗಿದೆ. ಹಲವಾರು ಯೋಜನೆಗಳ ಫಲ ನೀಡಿವೆ. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ದೊಡ್ಡ ಸುದ್ಧಿಮಾಡಿದೆ.

04.05.2001 ರಂದು ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ಮಹಾ ಪೋಷಕತ್ವದಲ್ಲಿ ಆರಂಭಿಸಿದ್ಧ ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ತುಮಕೂರು ನಗರ, ತುಮಕೂರು ಜಿಲ್ಲೆ ಅಭಿವೃದ್ಧಿಯಲ್ಲಿ ದಾಖಲೆ ನಿರ್ಮಿಸಿದೆ ಎಂದರೆ ತಪ್ಪಾಗಲಾರದು.

16.08.2019 ರಂದು ಆರಂಬಿಸಿದ್ದ ಶಕ್ತಿಪೀಠ ಫೌಂಡೇಷನ್, ವಿಶ್ವದಲ್ಲಿಯೇ ಒಂದು ಇತಿಹಾಸ ಸೃಷ್ಠಿಸಲಿದೆ, ಎಂಬ ಅಚಲ ದೃಢ ವಿಶ್ವಾಸ ನಮಗಿದೆ.

 2047 ಕ್ಕೆ  ನಂಬರ್ ಒನ್ ಕರ್ನಾಟಕ ಆಗಲೇ ಬೇಕು, ಇದಕ್ಕಾಗಿ ಎಲ್ಲಾ ಹಂತದ ಸಂಶೋಧನೆ ಮತ್ತು ಹೋರಾಟ ನಡೆಯಲೇ ಬೇಕು, ಎಂಬ ಹಿನ್ನಲೆಯಲ್ಲಿ ಆರಂಭಿಸಿರುವÀ ಭಾರತ @ ಸ್ವಾತಂತ್ರ್ಯ ಸೇನೆ (ಬಿಎಸ್‍ಎಸ್) ವ್ಯವಸ್ಥಿತವಾಗಿ ಕಾರ್ಯ ಆರಂಭಿಸಿದೆ.

ಅಭಿವೃದ್ಧಿ ಅಧ್ಯಯನಕ್ಕಾಗಿಯೇ ಒಂದು ಶಕ್ತಿಪೀಠ ಕ್ಯಾಂಪಸ್ ಅನ್ನು, ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು, ಬಗ್ಗನಡು ಕಾವಲ್‍ನಲ್ಲಿ ಸುಮಾರು 12 ಎಕರೆ 15 ಗುಂಟೆ ಜಮೀನಿನಲ್ಲಿ ಆರಂಭಿಸಲು ದಾಪುಗಾಲು ಇಟ್ಟಿದ್ದು, ಅಲ್ಲಿ ಆರಂಭವಾಗುವ ಪ್ರತಿಯೊಂದು ವಿಚಾರಗಳ ಬಗ್ಗೆ ನಿಖರವಾಗಿ ಮಾಹಿತಿ ಸಂಗ್ರಹಿಸುವುದೇ ಶಕ್ತಿಪೀಠ ಮ್ಯೂಸಿಯಂ ಪ್ರಮುಖ ಉದ್ದೇಶ.

ದಿನಾಂಕ:01.08.2023 ರ ಮಂಗಳವಾರ, ಪೌರ್ಣಿಮೆ ದಿನದಂದು, ಶಕ್ತಿಪೀಠ ಮ್ಯೂಸಿಯಂ ಕಟ್ಟಡದಲ್ಲಿ, SHAKTHIPEETA LOCKERS ಕಾಮಗಾರಿ ಆರಂಭಿಸುವ ಮುನ್ನ ವಿಶ್ವದ 108 ಶಕ್ತಿಪೀಠಗಳಿಗೆ ವಿಶೇಷ ಪೂಜೆ ಸಲ್ಲಿಸಿ,  ಆರಂಭಿಸಲು ಉದ್ದೇಶಿಸಿಲಾಗಿದೆ.

ಈ ವಿಶೇಷ ಪೂಜೆಯಲ್ಲಿ, ತುಮಕೂರಿನ ಶ್ರೀ ಡಾ. ನಾಗರಾಜ್ ರಾವ್‍ರವರು, ಶ್ರೀ ಮೋಹನ್ ರವರು, ಶಕ್ತಿಫೀಠಗಳ ಸಂಶೋಧಕರಾದ, ತಮಿಳುನಾಡಿನ ಶ್ರೀ ನಾಗರಾಜ್ ಶರ್ಮರವರು, ಬೆಂಗಳೂರಿನ ಶ್ರೀಮತಿ ಚಂದ್ರಕಲಾ ಅಶೋಕ್ ರವರು ಮತ್ತು ಶ್ರೀ ಎಲ್.ಕೆ. ಅಶೋಕ್ ರವರು ಹಾಗೂ ಶಕ್ತಿಪಿಠಗಳ ಬರಹಗಾರರಾದ ಶ್ರೀಮತಿ ಲಲಿತಾ ಶೇಷಾದ್ರಿ ರವರು ಮಹತ್ತರ ಪಾತ್ರವಹಿಸಲಿದ್ದಾರೆ.

ಇವರ ಜೊತೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಈ ಮಹತ್ತರವಾದ ಕಾರ್ಯಕ್ಕೆ ತಮ್ಮ ಸೂಕ್ತ ಸಲಹೆ ನೀಡಲು ಮನವಿ ಮಾಡಲಾಗಿದೆ.