21st November 2024
Share

TUMAKURU: SHAKTHIPEEA FOUNDATION

  ಕರ್ನಾಟಕ ರಾಜ್ಯ ಸರ್ಕಾರದ ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣವರು ದೆಹಲಿಯಲ್ಲಿನ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನೆಗೆ ಆಗಮಿಸಿದಾಗ ಮಹತ್ವದ ನಿರ್ಧಾರ ಪ್ರಕಟಿಸಿದರು.

 ದೆಹಲಿಯಲ್ಲಿ ಕರ್ನಾಟಕ ರಾಜ್ಯದ   ಸ್ಪರ್ಧಾತ್ಮಕ ಪರೀಕ್ಷೆಗಳ ವಿದ್ಯಾರ್ಥಿಗಳ ಅನೂಕೂಲಕ್ಕಾಗಿ ಹಾಸ್ಟೆಲ್ ನಿರ್ಮಾಣ ಮಾಡುವ ಮೂಲಕ ಸಹಕಾರ ಇಲಾಖೆ ತನ್ನ ಸದಸ್ಯರ ಮಕ್ಕಳಿಗೆ ಹಾಗೂ ರಾಜ್ಯದ ವಿಧ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಕಾಲಮತಿ ಗಡುವು ಹಾಕಿಕೊಂಡಿದ್ದಾರೆ.

ಕೇಂದ್ರ ಸರ್ಕಾರದಿಂದ ದೆಹಲಿಯಲ್ಲಿ ಜಮೀನು ಮಂಜೂರು ಮಾಡಿಸಿಕೊಳ್ಳುವುದು ಅಥವಾ ಸರ್ಕಾರದಿಂದ ಜಮೀನು ಕೊಂಡುಕೊಳ್ಳುವುದು ಅಥವಾ ಖಾಸಗಿ ಜಮೀನು ಕೊಂಡುಕೊಳ್ಳಲು ಅವಕಾಶವಿದೆ.

ದೆಹಲಿಯಲ್ಲಿ ಯಾವುದೇ ಮೆಟ್ರೋ ಸ್ಟೇಷನ್‍ಗೆ ಸಮೀಪವಿರುವ ಹಾಗೂ ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ಕಡೆ ಹಾಸ್ಟೆಲ್ ನಿರ್ಮಿಸಲು, ಜಮೀನು ಹುಡುಕುಲು ದೆಹಲಿಯಲ್ಲಿ ಇರುವ ಕರ್ನಾಟಕ ರಾಜ್ಯದ ಜನರ ಎಲ್ಲಾ ಸಂಘಸಂಸ್ಥೆಗಳ ಪದಾಧಿಕಾರಿಗಳಿಗೆ ಮತ್ತು ಅಧಿಕಾರಿಗಳಿಗೆ ಬಹಿರಂಗ ಮನವಿ ಮಾಡಿದ್ದಾರೆ.

ಇಂಡಿಯಾ @ 100 ಅಂಗವಾಗಿ, ಕರ್ನಾಟಕ ವಿಷನ್ ಡಾಕ್ಯುಮೆಂಟ್- 2047 ಗೆ ಪೂರಕವಾಗುವಂಥಹ ಸಹಕಾರ @ 100 ಅನ್ನು, ರಾಜ್ಯದ ಪ್ರತಿಯೊಂದು ಗ್ರಾಮದ ಹಾಗೂ ನಗರ ಪ್ರದೇಶಗಳ, ಪ್ರತಿಯೊಂದು ಬಡಾವಣೆಯ ಜನರ ಅನಿಸಿಕೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಸಿದ್ಧಪಡಿಸಿ ವಿಶ್ವಕ್ಕೆ ಮಾದರಿ ಯೋಜನೆ ರೂಪಿಸುವತ್ತಾ ಗಮನ ಹರಿಸಿದ್ದಾರೆ.

ಲೋಕಸಭಾ ಅಧಿವೇಶನ ಮುಗಿದ ನಂತರ, ತುಮಕೂರು ನಗರ ಗ್ರಂಥಾಲಯದಲ್ಲಿ, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆಯಲ್ಲಿ,  ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡುತ್ತಿರುವ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಭೆ ನಡೆಸಿ,  ಅತ್ಯುತ್ತಮವಾದ ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು, ರಾಜ್ಯಾದ್ಯಾಂತ ಒಂದು ಆಂದೋಲನ’ ವನ್ನು ಹಮ್ಮಿಕೊಳ್ಳಲು ನಿರ್ಧಾರ ಮಾಡಲಾಯಿತು.

ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಪುಸ್ತಕವನ್ನು ಸಚಿವರಿಗೆ ನೀಡಲಾಯಿತು. ಮುಂದಿನ 100 ದಿವಸದೊಳಗಾಗಿ ಸಹಕಾರ @ 100 ಮತ್ತು ದೆಹಲಿಯಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಅಡಿಪಾಯ ಹಾಕಲು ಶ್ರಮಿಸಲು, ದೆಹಲಿಯಲ್ಲಿ ಇರುವ  ಕರ್ನಾಟಕದ ಸಂಘ ಸಂಸ್ಥೆಗಳ ಪಧಾಧಿಕಾರಿಗಳು  ಮತ್ತು ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಆಸಕ್ತರು ಮುಂದೆ ಬಂದಿದ್ದಾರೆ.

ಶಕ್ತಿಪೀಠ ಫೌಂಡೇಷನ್ ಸಿ.ಇ.ಓ ಕೆ.ಆರ್.ಸೋಹನ್ ಒಂದು ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಲು ಈಗಾಗಲೇ ಆರಂಭಿಸಿದ್ದಾರೆ. ಜ್ಞಾನಿಗಳು ಜ್ಞಾನದಾನ ಮಾಡಬಹುದು.

1984 ರಲ್ಲಿ ಮೊಟ್ಟಮೊದಲ ಭಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಂಸತ್ತು ಆವರಣದಲ್ಲಿ ವಿಶ್ವ ಮಾನವ ಬಸವಣ್ಣನವರ ಪ್ರತಿಮೆ’ ಹಾಕಲು ಧ್ವನಿಯೆತ್ತಿ ಯಶಶ್ವಿಯಾಗಿದ್ದಾರೆ.

ಈಗ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವ ಬಸವರಾಜ್ ರವರು, ಶ್ರೀ ಕೆ.ಎನ್.ರಾಜಣ್ಣನವರಿಗೆ ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡಲು ಮನವಿ ಮಾಡುತ್ತಾ, ತುಮಕೂರು ಜಿಲ್ಲೆಯಲ್ಲಿ ಅವರಿಬ್ಬರ ರಾಜಕೀಯ ಚದುರಂಗದಾಟಗಳ ಮೆಲುಕು’ ಹಾಕಿದ್ದು ವಿಶೇಷವಾಗಿತ್ತು.