16th September 2024
Share

TUMAKURU:SHAKTHIPEETA FOUNDATION

  ಶಕ್ತಿಪೀಠ ಫೌಂಡೇಷನ್, ವಿಶ್ವದ 108 ಶಕ್ತಿಪೀಠಗಳ ಪಾರ್ಕ್ ಸ್ಥಾಪಿಸಲು 2019 ರಿಂದಲೂ ನಿರಂತರವಾಗಿ ಅಧ್ಯಯನ ಮಾಡುತ್ತಿದೆ.

 ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು, ಜೆಜಿಹಳ್ಳಿ ಹೋಬಳಿ, ಗೌಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಗ್ಗನಡು ಕಾವಲ್ ನಲ್ಲಿ ಸುಮಾರು 12 ಎಕರೆ 15 ಗುಂಟೆ ಜಮೀನನಲ್ಲಿ ಸಾಕಷ್ಟು ಪೂರ್ವ ಸಿದ್ಧತೆ ಇಲ್ಲದೆ ನೇರವಾಗಿ ಕಾರ್ಯರಂಭ ಮಾಡಲಾಯಿತು.

ಜಲಪೀಠ, ಅಭಿವೃದ್ಧಿ ಪೀಠ ಮತ್ತು ಶಕ್ತಿಪೀಠ ಗಳ ಅಗತ್ಯಕ್ಕೆ ತಕ್ಕಂತ ಮಾಸ್ಟರ್ ಪ್ಲಾನ್ ಅನ್ನು ನನಗೆ ತೃಪ್ತಿ ಆಗುವ ರೀತಿ, ಜಮೀನನ ಮೇಲೆ ಗುರುತು ಮಾಡಲಾಯಿತು.

ಇನ್ನೂ ಆಳವಾದ ಅಧ್ಯಯನ ಮಾಡಿದ ನಂತರ, ಭೂಮಿಯ ಮೇಲೆ ಇಳಿಸಲು ನಿರ್ಧಾರ ಮಾಡಿದೆವು. ತುಮಕೂರು ನಗರದ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಒಂದು ಎಕರೆ ಜಮೀನನಲ್ಲಿ ಶಕ್ತಿಪೀಠ ಡಾಟಾ ಪಾರ್ಕ್ ಮಾಡಲು ಸಿದ್ಧತೆ ಆರಂಭಿಸಿದೆವು.

ನಂತರ ಶಕ್ತಿದೇವತೆಯ ಆದೇಶದ ಮೇರೆಗೆ, ತುಮಕೂರು ನಗರದಲ್ಲಿ ಶಕ್ತಿಪೀಠ ಮ್ಯೂಸಿಯಂ ಸ್ಥಾಪಿಸಿ, ಜಲಪೀಠ, ಅಭಿವೃದ್ಧಿ ಪೀಠ ಮತ್ತು ಶಕ್ತಿಪೀಠಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ವಿಶ್ವದ ಜ್ಞಾನಿಗಳ ಸಲಹೆ, ಮಾರ್ಗದರ್ಶನ ಪಡೆದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುಮತಿಯೊಂದಿಗೆ  ಶಕ್ತಿಪೀಠ ಡಾಟಾ ಪಾರ್ಕ್ ಮತ್ತು ವಿಶ್ವದ 108 ಶಕ್ತಿಪೀಠಗಳ ಪಾರ್ಕ್ ಆರಂಭಿಸಲು ಧೃಡ ನಿರ್ಧಾರ ಕೈಗೊಳ್ಳಲಾಯಿತು.

 ಸವಾಲಾಗಿ ಸ್ವೀಕರಿಸಲಾಯಿತು. ನಿರಂತರವಾಗಿ ಕುಂದರನಹಳ್ಳಿಯಿಂದವಿಶ್ವಸಂಸ್ಥೆ ಪದಾಧಿಕಾರಿಗಳ ವರೆಗೆ, ಸಮರೋಪಾದಿಯಲ್ಲಿ ಜಾಗೃತಿ ಮೂಡಿಸುವ ಮುಖಾಂತರ ಜ್ಞಾನಿಗಳ ಸಲಹೆಗಳ ಸ್ವೀಕಾರ ಆರಂಭವಾಗಿದೆ.

ದೇಶ ವಿದೇಶಗಳ ಚಿಂತಕರು, ವಿವಿಧ ಧಾರ್ಮಿಕ ಮುಖಂಡರು, ಹಿರಿಯ ಮತ್ತು ಕಿರಿಯ ಉನ್ನತ ಅಧಿಕಾರಿಗಳು, ಜ್ಞಾನಿಗಳ ತಂಡ ಅದ್ಭುತವಾಗಿ ಸ್ಪಂಧಿಸಲು ಆರಂಭಿಸಿದ್ದು ನನಗೆ ಆನೆ ಬಲ ಬಂದಾತಾಗಿದೆ.

ಅಭಿವೃದ್ಧಿ ಪೀಠದ ವತಿಯಿಂದ  ನಂಬರ್ ಒನ್ ಕರ್ನಾಟಕ ಜ್ಞಾನ ದಾನ ಮಾಡಿ ಕರಡು ಪ್ರತಿ ಸುದ್ಧಿ ಮಾಡಲು ಆರಂಭಿಸಿದೆ. ಶಕ್ತಿಪೀಠ ವತಿಯಿಂದ ವಿಶ್ವದ 108 ಶಕ್ತಿಪೀಠಗಳ ಮ್ಯೂಸಿಯಂ ಜ್ಞಾನ ದಾನ ಮಾಡಿ ಮತ್ತು ಜಲಪೀಠದ ವತಿಯಿಂದ ಜಲಗ್ರಂಥ ಜ್ಞಾನದಾನ ಮಾಡಿ ಕರಡು ಪ್ರತಿ ಬಿಡುಗಡೆ ಮಾಡಲು ಸಿದ್ಧತೆ ಆರಂಭವಾಗಿದೆ.

  ದಿನಾಂಕ:05.10.2022 ರಂದು ತುಮಕೂರಿನಲ್ಲಿ ಶಕ್ತಿಭವನದ ನಿರ್ಮಾಣ ಕಾರ್ಯಕ್ಕೆ ನಿರ್ಧಾರ ಮಾಡಿದೆವು. ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಶಕ್ತಿಪೀಠ ಗೆಸ್ಟ್ ಹೌಸ್ ಆರಂಭಿಸಿ, ಇಲ್ಲಿನ ನಿವಾಸಿಗಳಾದ ದೇಶದ ವಿವಿಧ ರಾಜ್ಯದವರು, ಕರ್ನಾಟಕದ ವಿವಿಧ ಜಿಲ್ಲೆಗಳ ಜನರ ಒಡನಾಟ ಸದ್ದು ಗದ್ಧಲವಿಲ್ಲದೆ ಆರಂಭವಾಯಿತು.

ನನಗೆ ಈ ಒಂದು ವರ್ಷದ ಅಧ್ಯಯನ ಸಮಾದಾನ ತರುತ್ತಿದೆ. ಈಗ ದಿನಾಂಕ:17.08.2023 ರಿಂದ 108 ದಿವಸಗಳ ಆಂದೋಲನವನ್ನು ಆರಂಭಿಸಲಾಗಿದೆ.

  1. ದಿನಾಂಕ:17.08.2023 ರಂದು ನನ್ನ ಮೊಮ್ಮಗಳು ಅಕ್ಷರ ಅಮೃತ ಹಸ್ತದಿಂದ ಪೇಪರ್ ತುಣುಕು ಪಡೆಯುವ ಮೂಲಕ ಚಾಲನೆ ನೀಡಲಾಗಿದೆ.
  2. ದಿನಾಂಕ:17.08.2023 ರಿಂದ ದಿನಾಂಕ:15.10.2023 ರವರೆಗೆ 60 ದಿವಸದಲ್ಲಿ ಶಕ್ತಿಭವನದ ಕಾಮಗಾರಿಯನ್ನು ಆದಷ್ಟು ಪೂರ್ಣಗೊಳಿಸಿ, ಶರನ್ನವರಾತ್ರಿ ಪೂಜೆ ಯನ್ನು ಶಕ್ತಿಭವನದಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ.
  3. ದಿನಾಂಕ:16.10.2023 ರಿಂದ ದಿನಾಂಕ:02.12.2023 ರವರೆಗೆ 48 ದಿವಸಗಳ ಅವಧಿಯಲ್ಲಿ ಶಕ್ತಿಭವನದ ಸಂಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ.

108 ದಿವಸಗಳಲ್ಲಿ ಮುಂದಿನ 2047 ರವರೆಗೆ ಕೈಗೊಳ್ಳುವ ಆಂದೋಲನದ ರೂಪುರೇಷೆ ಒಂದು ಹಂತಕ್ಕೆ ಬರಲಿದೆ. ಶಕ್ತಿಭವನದ ಮಾಡೆಲ್ ರಾಜ್ಯದ ಮುಖ್ಯಮಂತ್ರಿಯವರು ಮತ್ತು ದೇಶದ ಪ್ರಧಾನಿಯವರೆಗೂ ತಲುಪಲಿದೆ.

ಶಕ್ತಿಭವನದ ಪರಿಕಲ್ಪನೆ ಯನ್ನು, ಸುಮಾರು 33 ವರ್ಷಗಳಿಂದ ಅಭಿವೃದ್ಧಿ ತಪಸ್ಸಿನ ಆಂದೋಲನದ ಒಡನಾಡಿ, ಹಿರಿಯ ರಾಜಕಾರಣಿ,  ಅವರಿಂದ ಪ್ರಭಾವಿತನಾಗಿರುವ ನಮ್ಮ ಕುಟುಂಬ, ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಸಮರ್ಪಣೆ ಮಾಡಲು ಚರ್ಚೆ ಆರಂಭವಾಗಿದೆ. ಅವರ ಕುಟುಂಬದವರ ಅನುಮತಿ  ಪಡೆಯುವುದು ಅಗತ್ಯವಾಗಿದೆ.

ಜೊತೆಗೆ ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮದ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪ್ರತಿಯೊಂದು ಬಡಾವಣೆಯ ಜ್ಞಾನಿಗಳ ಸಲಹೆ, ಮಾರ್ಗದರ್ಶನ ಪಡೆಯವುದು ಸೂಕ್ತವಾಗಿದೆ.

ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ಸಂದೇಶಗಳ ಜೊತೆಗೆ, ಧಾರ್ಮಿಕ ಮುಖಂಡರು, ದೇಶದ ಮಾಜಿ ಪ್ರಧಾನಿಯವರು, ರಾಜ್ಯದ ಎಲ್ಲಾ ಮಾಜಿ ಮುಖ್ಯ ಮಂತ್ರಿಯವರು, ಸರ್ವಪಕ್ಷಗಳ ಅಧ್ಯಕ್ಷರು, ಜಾತಿ ಸಂಘಟನೆಗಳ ಅಧ್ಯಕ್ಷರು ಸೇರಿದಂತೆ, ವಿವಿಧ ಗಣ್ಯರ ಅಭಿಪ್ರಾಯಗಳನ್ನು ಸಂಗ್ರಹ ಮಾಡುವುದು ಅಗತ್ಯವಾಗಿದೆ.

   ಪ್ರತಿ ದಿನ ಒಂದೊಂದು ಶಕ್ತಿಪೀಠದ ಆರಾಧನೆ ಮಾಡುವ ಮೂಲಕ, 108 ದಿವಸಗಳ ಆಂದೋಲವನ್ನು ಯಶ್ವಸ್ವಿ ಮಾಡಲು ಮಾರ್ಗದರ್ಶನ ಮಾಡಲು ಬಹಿರಂಗ ಮನವಿ.