15th September 2024
Share

TUMAKURU:SHAKTHIPEETA FOUNDATION

ಶಿವ, ಈಶ್ವರ, ಪರಮೇಶ್ವರ, ರಾಮೇಶ್ವರ ಹೀಗೆ ಆನೇಕ ಹೆಸರಿನಲ್ಲಿ ಕರೆಸಿ ಕೊಳ್ಳುವ ಅಘೋಚರ ಶಕ್ತಿಗೆ ಎಷ್ಟು ಜನ ಪತ್ನಿಯರು ಎಂದರೆ, ಒಬ್ಬರೇ ಪತ್ನಿಯಂತೆ, ಒಂದೊಂದು ಜನ್ಮದ ಅವತಾರದಲ್ಲಿ ಒಂದೊಂದು ಹೆಸರಿನಲ್ಲಿ ಪ್ರಖ್ಯಾತಿಯಾಗಿರುವ ಸತಿ’ ದೇವಿಯಂತೆ.

ಈ ಸತಿಯು ಪ್ರಜಾಪ್ರತಿ ದಕ್ಷಬ್ರಹ್ಮನ ಮಗಳಂತೆ.

ದಕ್ಷಬ್ರಹ್ಮನಿಗೆ ಶಿವನಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡಲು ಇಷ್ಟ ಇರಲಿಲ್ಲವಂತೆ. ಹಲವಾರು ಕಾರಣಗಳು ಇವೆಯಂತೆ.

ಪೂರ್ವಜನ್ಮದ ವಿಧಿಯಂತೆ ಸತಿಯು ತಪಸ್ಸು ಮಾಡಿ, ಶಿವನನ್ನು ಒಲಿಸಿಕೊಂಡು ವಿವಾಹವಾದರಂತೆ.

ದಕ್ಷಬ್ರಹ್ಮನು ತನ್ನ ಮಗಳು ಮತ್ತು ಅಳಿಯನಿಗೆ ಅವಮಾನ ಮಾಡಲು ನಿರ್ಧರಿಸಿದನಂತೆ.

ಈ ಹಿನ್ನಲೆಯಲ್ಲಿ ಮಾಹಾನ್ ಯಜ್ಞವನ್ನು ಮಾಡಲು ಯೋಚಿಸಿದನಂತೆ. ಈ ಯಜ್ಞಕ್ಕೆ ತನ್ನ ಅಳಿಯ ಶಿವ ಮತ್ತು ಮಗಳು ಸತಿಯನ್ನು ಆಹ್ವಾನಿಲಿಲ್ಲವಂತೆ.

ಆದರೇ ದೇವಾನ್ ದೇವತೆಗಳೆಲ್ಲರಿಗೂ ಆಹ್ವಾನ ನೀಡಿದ್ದನಂತೆ. ಶಿವನನ್ನು ಹೊರತು ಪಡಿಸಿ ಎಲ್ಲರೂ ಭಾಗವಹಿಸಿದ್ದರಂತೆ.

ಈ ವಿಷಯ ತಿಳಿದ ಸತಿ ತನ್ನ ತಂದೆ ದಕ್ಷಬ್ರಹ್ಮ ಮಾಡುವ ಯಜ್ಞಕ್ಕೆ ಹೋಗಲು ಶಿವನೊಂದಿಗೆ ಪಟ್ಟು ಹಿಡಿದರಂತೆ.

ಶಿವನಿಗೆ ಮುಂದಿನ ಆಗಹೋಗುಗಳು ತಿಳಿದಿದ್ದರೂ ಸತಿಯ ಒತ್ತಡಕ್ಕೆ ಮಣಿದು, ನಾನು ಬರುವುದಿಲ್ಲ, ನಿನೋಬ್ಬಳೇ ಹೋಗು ಎಂದು ಅನುಮತಿ ನೀಡಿದರಂತೆ.

ಸತಿಯು ಬಹಳ ಸಂತೋóದಿಂದ ತನ್ನ ತವರು ಮನೆಯಲ್ಲಿ ನಡೆಯುವ ಯಜ್ಞಕ್ಕೆ ಹೋದರಂತೆ.

ಸತಿಯ ಆಗಮನ ನೋಡಿ ದಕ್ಷಬ್ರಹ್ಮನು ಕೋಪಗೊಂಡನಂತೆ.

ಸತಿಯು ತನ್ನ ಮಗಳು ಎಂದು ನೋಡದೆ. ತನ್ನ ಅಳಿಯ ಶಿವನನ್ನು ಎಲ್ಲರ ಮುಂದೆಯೇ ಬಾಯಿಗೆ ಬಂದ ರೀತಿಯಲ್ಲಿ ಹೀಯಾಳಿಸಿದನಂತೆ.

ತನ್ನ ಪತಿ ಶಿವನನ್ನು ಹಿಯಾಳಿಸಿದ, ತನ್ನ ತಂದೆ ನಡೆಸುವ ಯಜ್ಞಕ್ಕೆ ಭಂಗತರುವುದಾಗಿ ಘೋಷಣೆ ಮಾಡಿ, ಯಜ್ಞಕುಂಡಕ್ಕೆ ಬಿದ್ದರಂತೆ.

ಈ ಯಜ್ಞಕುಂಡವು ಭಾರತ ದೇಶದ, ಉತ್ತರಖಂಡ ರಾಜ್ಯದ, ಹರಿಧ್ವಾರ ಜಿಲ್ಲೆಯ, ಹರಿಧ್ವಾರ ನಗರದಲ್ಲಿರುವ  ಕಂಕಲ್ ಎಂಬ ಸ್ಥಳದಲ್ಲಿ ಈಗಲೂ ಇದೆ. ಪ್ರತಿ ನಿತ್ಯ ಪೂಜೆ ನಡೆಯುತ್ತಿದೆ. ಇಲ್ಲಿ ಪ್ರಜಾಪತಿ ದಕ್ಷ ಬ್ರಹ್ಮನ ದೇವಾಲಯವೂ ಇದೆ.

ಸತಿ ಯಜ್ಞಕುಂಡಕ್ಕೆ ಬಿದ್ದನಂತರ ಸತಿಯ ಆತ್ಮ ಬೇರ್ಪಟ್ಟರೂ, ದೇಹ ಸುಡಲಿಲ್ಲವಂತೆ.

ವಿಷಯ ತಿಳಿದ ಶಿವ ಕೋಪಗೊಂಡನಂತೆ.

ತನ್ನ ಜುಟ್ಟೊಂದನ್ನು ಕಿತ್ತು ಹಾಕಿದನಂತೆ, ಈ ಕೂದಲಿನ ಅಂಶವೇ ವೀರಭಧ್ರನ ಜನ್ಮವಂತೆ.

ಪ್ರಜಾಪತಿ ದಕ್ಷ ಬ್ರಹ್ಮನ ತಲೆ ಕಡಿಯಲು ವೀರಭದ್ರನಿಗೆ ಶಿವನು ಆದೇಶ ಮಾಡಿದನಂತೆ.

ತನ್ನ ತಂದೆ ಶಿವನ ಆದೇಶದಂತೆ, ವೀರಭದ್ರನು ಯಜ್ಞ ನಡೆಯುವ ಸ್ಥಳಕ್ಕೆ ಹೋಗಿ, ಸತಿಯ ದೇಹ ನೋಡಿದ ತಕ್ಷಣ ದಕ್ಷಬ್ರಹ್ಮನ ತಲೆ ಕಡಿದನಂತೆ.

ನಂತರ ಅಲ್ಲಿಗೆ ಬಂದ ಶಿವನು ಸತಿಯ ದೇಹ ಎತ್ತಿಕೊಂಡು ರುದ್ರ ನರ್ತನ ಮಾಡಲು ಆರಂಭಿಸಿದನಂತೆ.

ಶಿವನ ಕೋಪಗೊಂಡ ನರ್ತನಕ್ಕೆ ದೇವಾನ್ ದೇವತೆಗಳು ಹೆದರಿದರಂತೆ. ಅತಳ, ವಿತಳ, ಪಾತಾಳ ಲೋಕಗಳು ಕಂಪಿಸಲು ಶುರುವಾದವಂತೆ.

ದೇವಾನ್ ದೇವತೆಗಳು ವಿಷ್ಣುವಿನ ಮೋರೆ ಹೋಗಿ, ಶಿವನ ಕೋಪ ತಣಿಸಲು ಪ್ರಾರ್ಥಿಸಿದರಂತೆ.

ಸತಿಯ ದೇಹವಿದ್ದರೆ, ಶಿವ ಇನ್ನೂ ಕೋಪಗೊಳ್ಳತ್ತಾನೆ, ಸತಿಯ ದೇಹವನ್ನೆ ಇಲ್ಲದಂತೆ ಮಾಡಲು ವಿಷ್ನು ನಿರ್ಧಾರ ಕೈಗೊಂಡನಂತೆ.

ವಿಷ್ಣು ತನ್ನ ಸುದರ್ಶನ ಚಕ್ರವನ್ನು ಸತಿಯ ದೇºಕ್ಕೆ ಬಿಟ್ಟನಂತೆ.

ಸತಿಯ ದೇಹದ ಭಾಗಗಳು, ಆಭರಣಗಳು, ಛಿಧ್ರ,ಛಿಧ್ರವಾಗಿ ಅಖಂಡ ಭಾರತದ ಏಳು ದೇಶಗಳಲ್ಲಿ ಬಿದ್ದವಂತೆ.

ರೀತಿ ಸತಿಯ ದೇಹದ ಮತ್ತು ಆಭರಣಗಳು ಬಿದ್ದ ಸ್ಥಳಗಳು ಶಕ್ತಿಪೀಠಗಳು ಆಗಿವೆಯಂತೆ.