24th July 2024
Share

TUMAKURU:SHAKTHIPEETA FOUNDATION

ಭಾರತ 2047 ಕ್ಕೆ ವಿಶ್ವಗುರು :ಏಷ್ಯಾದಲ್ಲೇ ರಾಜ್ಯ ನಂ.1 ಗುರಿ

  77 ನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಭಾರತ 2047 ಕ್ಕೆ ವಿಶ್ವಗುರು’ ಎಂದು ಘೋಷಣೆ ಮಾಡಿದ್ದಾರೆ. ಅದೇ ರೀತಿ ನಮ್ಮ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ‘ಏಷ್ಯಾದಲ್ಲೇ ರಾಜ್ಯ ನಂ.1 ಗುರಿ’ ಎಂದು ಘೋಷಣೆ ಮಾಡಿದ್ದಾರೆ.

  ಸರ್ಕಾರ ಯಾವುದೇ ಪಕ್ಷದ್ದಾಗಿರಲಿ ‘ನಮ್ಮ ಪ್ರಧಾನಿಯವರ ಮತ್ತು  ಮುಖ್ಯಮಂತ್ರಿಯವರ ಘೋಷಣೆ’ ಎಂದರೆ ಎಲ್ಲರೂ ಒಪ್ಪಲೇ ಬೇಕು.

ಇಂದಿನಿಂದ 2047 ರವರೆಗೂ ಪ್ರತಿ ಯೋಜನೆಗಳ ವಿಶ್ಲೇಷಣೆ, 1947 ರಿಂದ 2023 ರವರೆಗೂ ಜಾರಿಯಾದ ಯೋಜನೆಗಳ ಅವಲೋಕನ ನಮ್ಮ ನಿಮ್ಮ ಗುರಿಯಾಗಬೇಕು. ನಿಷ್ಪಕ್ಷಪಾತವಾಗಿ, ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ರಾಜಕೀಯ ರಹಿತವಾಗಿ ಸರಿ ಎಂಬ ಯೋಜನೆಗಳನ್ನು ಸರಿ ಎನ್ನೋಣ, ತಪ್ಪು ಎಂದರೆ ತಪ್ಪು ಎನ್ನೋಣ’ ಯೋಜನಾವಾರು  ಅಂಥವರ ತಂಡವೇ ನಮ್ಮ ವಿಷನ್ ಗ್ರೂಪ್ ಮತ್ತು ಪ್ರಷರ್ ಗ್ರೂಪ್’ ಗುರಿಯಾಗಿದೆ.

ನಾಲೇಡ್ಜ್ ಬ್ಯಾಂಕ್ – 2047’,ಹ್ಯೂಮನ್ ಲೈಬ್ರರಿ, ಯೂ ಟ್ಯೂಬ್ ಚಾನಲ್‍ನಲ್ಲಿ ಮುಕ್ತ ಚರ್ಚೆ, ದಾಖಲೆಗಳ ಡಿಜಿಟಲೀಕರಣ, ಫಿಸಿಕಲ್ ದಾಖಲೆ ಸಂಗ್ರಹವೇ ಅಭಿವೃದ್ಧಿ ಮ್ಯೂಸಿಯಂ ನ ಪ್ರಮುಖ ಉದ್ದೇಶವಾಗಿದೆ.

ಸರ್ಕಾರಗಳನ್ನು ಸ್ಥಾಪಿಸಲು ಆಗ್ರಹ ಮಾಡುವದರಲ್ಲಿ ಕಾಲಕಳೆದರೆ ಪ್ರಯೋಜನವಿಲ್ಲ, ಶಕ್ತಿಪೀಠ ಫೌಂಡೇಷನ್ ಮೂಲಕ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

  ಮೂರು ಹಂತದಲ್ಲಿ, ಅಂದರೆ ಮೊದಲನೇ ಹಂತದಲ್ಲ, ತುಮಕೂರಿನಲ್ಲಿ 1520 ಚದುರ ಅಡಿ ನಿವೇಶನದ ಕಟ್ಟಡದಲ್ಲಿ, ಎರಡನೇ ಹಂತದಲ್ಲಿ ತುಮಕೂರು ತಾಲ್ಲೋಕು ವಸಂತನರಸಾಪುರದಲ್ಲಿ ಒಂದು ಎಕರೆಯಲ್ಲಿ ಮತ್ತು ಮೂರನೇ ಹಂತದಲ್ಲಿ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು, ಜೆಜಿಹಳ್ಳಿ ಹೋಬಳಿ, ಗೌಡನಹಳ್ಳಿ ಗ್ರಾಮ ಪಂಚಾಯಿತಿಯ ಬಗ್ಗನಡು ಕಾವಲ್ ನಲ್ಲಿ ಸುಮಾರು 12 ಎಕರೆ 15 ಗುಂಟೆ ಜಮೀನಿನನಲ್ಲಿ ವಿಸ್ತರಿಸಲು ಕಾರ್ಯಾರಂಭ ಮಾಡಲಾಗಿದೆ.

 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೂ ‘ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ದೊರೆಯಬೇಕು. 224 ವಿಧಾನಸಭಾ ಕ್ಷೇತ್ರಗಳವ್ಯಾಪ್ತಿಗೂ ‘ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ’ ದೊರೆಯಬೇಕಾದರೆ ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಜಾರಿಯಾಲೇ ಬೇಕು.

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿಗೆ ಅನುದಾನ ಪಡೆಯಲೇ ಬೇಕು. ಇದು ನಮ್ಮ ಅಚಲವಾದ ನಿರ್ಧಿಷ್ಠ ಗುರಿ.ಈ ಯೋಜನೆಗಳಿಗೆ ಪೂರಕವಾಗಿ ಪ್ರಾತ್ಯಾಕ್ಷಿಕೆಗಳ ಸಿದ್ಧತೆ ಆರಂಭವಾಗಿದೆ.

ಮೊದಲನೇ ಹಂತ ಶೀಘ್ರದಲ್ಲಿ ಲೋಕಾರ್ಪಣೆಯಾಗಲಿದೆ.

ತುಮಕೂರು ನಗರದ, ಜಯನಗರಪೂರ್ವದ, ಮೋದಲನೇ ಮುಖ್ಯ ರಸ್ತೆಯಲ್ಲಿರುವ, ಪಾರ್ವತಿ ನಿಲಯ ಕಟ್ಟಡವಿದ್ದ, ಸುಮಾರು 1520 ಚದುರ ಅಡಿ ನಿವೇಶನದಲ್ಲಿ ನಿರ್ಮಾಣ ಮಾಡುತ್ತಿರುವ ‘ಶಕ್ತಿಭವನ’ ದಲ್ಲಿ 

ಶಕ್ತಿಪೀಠ, ಅಭಿವೃದ್ಧಿ ಪೀಠ ಮತ್ತು ಜಲಪೀಠಗಳ ವಿಷುಯಲ್ ಆಟ್ರ್ಸ್ ಪರಿಕಲ್ಪನೆ.

ಶಕ್ತಿಪೀಠ’ ಎಂದರೆ ವಿಶ್ವದ 108 ಶಕ್ತಿಪೀಠಗಳು ಇರುವ, 7 ದೇಶಗಳ ನಕ್ಷೆಯನ್ನು ಭೂಮಿಯ ಮೇಲೆ ಮಾಡಿ, ಆಯಾ ಸ್ಥಳದಲ್ಲಿಯೇ ಪ್ರಾತ್ಯಾಕ್ಷಿಕೆ ಗುರುತು ಮಾಡುವ ಮೂಲಕ, ಭಕ್ತರಿಗೆ ನಿಖರವಾದ ಮಾಹಿತಿ ನೀಡಲು ಸಂಶೋಧನೆ ನಡೆಸುವುದು. ಕೆಂದ್ರ ಸರ್ಕಾರದ ಗಮನ ಸೆಳೆದು ಶಕ್ತಿಪೀಠ ಸಕ್ರ್ಯೂಟ್ ಮಾಡಿಸುವುದು, ನೀರು ಮತ್ತು ಶಕ್ತಿ ದೇವತೆಗಳಿಗಿರುವ ಸಂಭಂದಗಳ ಬಗ್ಗೆ ಅಧ್ಯಯನ ಮಾಡುವುದು.

ಜಲಪೀಠ’ ಎಂದರೆ ಕರ್ನಾಟಕ ರಾಜ್ಯದಲ್ಲಿ ‘ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಘೋಷಣೆಯಡಿ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು, ನದಿ ನೀರಿನ ಹಂಚಿಕೆ ಮಾಡಲು, ರಾಜ್ಯದ ನದಿ ನೀರಿನ ಉತ್ಪತ್ತಿ, ಕೇಂದ್ರ ಸರ್ಕಾರದ ನದಿ ಜೋಡಣೆಯಿಂದ ದೊರೆಯುವ ನೀರು ಮತ್ತು ವಿವಾದವಿಲ್ಲದ ನದಿ ನೀರಿನ ವೈಜ್ಞಾನಿಕ ಬಳಕೆ ಬಗ್ಗೆ ಜಾಗೃತಿ ಮೂಡಿಸುವುದು.

ಅಭಿವೃದ್ಧಿ ಪೀಠ’ ಎಂದರೆ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು, ಇಂಡಿಯಾ @ 100 ಅಂಗವಾಗಿ, ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ರ ವಿಶ್ಲೇಷಣೆ, ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ತರುವ ಕಾರ್ಯತಂತ್ರ ರೂಪಿಸುವುದು. 100 ನೇ ವರ್ಷದ ಸ್ವಾತಂತ್ರ್ಯದ ವೇಳೆಗೆ ನಂಬರ್ ಒನ್ ಕರ್ನಾಟಕ ಮಾಡಲು ಅಧಿಕಾರಿಗಳಿಗೆ, ಚುನಾಯಿತ ಜನಪ್ರತಿನಿಧಿಗಳ ಕಾರ್ಯವೈಖರಿ ಬಗ್ಗೆ ಜನತೆಗೆ ರ್ಯಾಂಕಿಂಗ್ ಸಹಿತ, ಮನವರಿಕೆ ಮಾಡುವುದು.

  1. ನಿವೇಶನದಲ್ಲಿ-ಆವರಣ ಗೋಡೆ, ನೈರುತ್ಯದಲ್ಲಿ ಹೆಚ್ಚುವರಿ ನಿವೇಶನ.
  2. ನೆಲ ಮಹಡಿ- ಶಕ್ತಿಪೀಠ ಲಾಕರ್, ಯೂಟ್ಯೂಬ್ ಚಾನಲ್, ಪಿಪಿಟಿ, ಮೀಟಿಂಗ್ ಹಾಲ್, ಹುಂಡಿ, ಬ್ರಹ್ಮಸ್ಥಾನದಲ್ಲಿವಿಶೇಷತೆ.
  3. ಮೊದಲನೇ ಮಹಡಿ- 545 ಶಕ್ತಿಪೀಠ ಲಾಕರ್, 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಜಿಐಎಸ್ ನಕ್ಷೆಯೊಂದಿಗೆ, ಅಭಿವೃದ್ಧಿ ಪೀಠದ ಪ್ರಾತ್ಯಾಕ್ಷಿಕೆಗಳು, 9 ಜನರು ಕುಳಿತು ಕೊಳ್ಳುವ ಬೋರ್ಡ್ ರೂಂ, ಪಿಪಿಟಿ. 
  4. ಎರಡನೇ ಮಹಡಿ- ಗೆಸ್ಟ್ ಹೌಸ್
  5. ಮೂರನೇ ಮಹಡಿ- ಗೆಸ್ಟ್ ರೂಂ
  6. ಟೆರ್ರೆಸ್- ಸತಿಯ ಅಂಗವಾರು ಶಕ್ತಿಪೀಠಗಳ ಪ್ರಾತ್ಯಾಕ್ಷಿಕೆ. ಮೂರನೇ ಮಹಡಿಯಿಂದ   ಟೆರೆಸ್‍ವರೆಗೆ ಗುಹೆ, ಗಿಡ/ಕಾಡು, ಬೆಟ್ಟ, ಮೋಡ, ನದಿಗಳ ಪ್ರಾತ್ಯಾಕ್ಷಿಕೆ.
  7. ಲಿಪ್ಟ್ ಹೆಡ್- ಪಿರಮಿಡ್ ಮತ್ತು ಸುತ್ತಲೂ 108 ಶಕ್ತಿಪೀಠದ ಪ್ರಾತ್ಯಾಕ್ಷಿಕೆ.
  8. ಸಿಂಟೆಕ್ಸ್ ಕೆಳಭಾಗ- ಜಲಪೀಠ ನಕ್ಷೆ ಮತ್ತು ಜಲಪೀಠದÀ ಪ್ರಾತ್ಯಾಕ್ಷಿಕೆಗಳು.
  9. ಸಿಂಟೆಕ್ಸ್ ಇಡುವ ಜಾಗ- ಸಿಂಟೆಕ್ಸ್ ಮತ್ತು ರೂಪ್ ಟಾಪ್ ಗಾರ್ಡನ್.
  10. ಮೆಟ್ಟಿಲು ಸ್ಥಳದಲ್ಲಿ ಸೂಕ್ತ ಪ್ರಾತ್ಯಾಕ್ಷಿಕೆಗಳು
  11. ಎಲ್ಲಾ ಮಹಡಿಗಳಲ್ಲಿ ಬಾಲ್ಕಾನಿ ಸ್ಥಳದಲ್ಲಿ ಸೂಕ್ತ ಪ್ರಾತ್ಯಾಕ್ಷಿಕೆಗಳು
  12. ಹಿಂಭಾಗದಲ್ಲಿರುವ ಎಡಕಲ್ಲು ಗುಡ್ಡದ ಪಾರ್ಕ್‍ನಲ್ಲಿ ಸೂಕ್ತ ಪ್ರಾತ್ಯಾಕ್ಷಿಕೆಗಳು
  13. 80 ಅಡಿ ಶೆಟ್ಟಿಹಳ್ಳಿ ರಸ್ತೆಯಲ್ಲಿ ಆರ್ಚ್
  14. ಉತ್ತರದಲ್ಲಿ 60 ಅಡಿ ರಸ್ತೆ, ದಕ್ಷಿಣದಲ್ಲಿ 30 ಅಡಿ ರಸ್ತೆ, ಪೂರ್ವದಲ್ಲಿ ಪಕ್ಕದ ಮನೆ ನಂತರ ಇರುವ 30 ಅಡಿ ರಸ್ತೆ ಮತ್ತು ಪಶ್ಚಿಮದಲ್ಲಿ ಎರಡು ಕಟ್ಟಡಗಳ ನಂತರ ಇರುವ ಶೆಟ್ಟಿಹಳ್ಳಿ 80 ಅಡಿ ರಸ್ತೆಗಳ ಅಕ್ಕ-ಪಕ್ಕ ಸೂಕ್ತ ಪ್ರಾತ್ಯಾಕ್ಷಿಕೆಗಳು.

 ಆಸಕ್ತ ಕಲಾವಿದರ ಹುಡುಕಾಟ ಆರಂಭವಾಗಿದೆ. ತುಮಕೂರಿನ ಸರ್ಕಾರಿ ಚಿತ್ರಕಲಾ ಮಹಾ ವಿದ್ಯಾಲಯದ ತಂಡ ಸಂಚಾಲಕತ್ವ ವಹಿಸಲು ಮನವಿ ಮಾಡಲಾಗಿದೆ.

ತಮ್ಮ ಮಾರ್ಗದರ್ಶನ, ಸಲಹೆಗಳಿಗೆ ಬಹಿರಂಗ ಆಹ್ವಾನ.