12th September 2024
Share

TUMAKURU:SHAKTHIPEETA FOUNDATION

  ನಮ್ಮ ಸಂಸ್ಕøತಿಯಲ್ಲಿ ಯಾವುದೇ ಕಟ್ಟಡದ ಅದಿಪೂಜೆ, ಭೂಮಿಪೂಜೆ, ಬಾಗಿಲು ಇಡುವ ಪೂಜೆ ಮತ್ತು ಅಂತಿಮವಾಗಿ  ಗೃಹಪ್ರವೇಶವನ್ನು ಮಾಡುವುದು ಸಂಪ್ರದಾಯ. ಇವೆಲ್ಲದಕ್ಕೂ ರಾಜಯೋಗ ದ ದಿವಸ ಹುಡುಕಿ ಮಾಡುತ್ತಾರೆ.

ಈ ವರ್ಷದ ಶರನ್ನವರಾತ್ರಿ ಪೂಜೆ ಅಥವಾ ದಸರಾ ಮಹೋತ್ಸವ ದಿನಾಂಕ:15.10.2023 ರಿಂದ 24.10.2023 ರವರೆಗೆ ನಡೆಯುತ್ತದೆ. ನಾವೂ ಇದುವರೆಗೂ ಅಂದರೆ, ದಿನಾಂಕ:20.08.2004 ರಿಂದ ಸುಮಾರು 18 ವರ್ಷ, ತುಮಕೂರಿನ ಜಯನಗರ ಪೂರ್ವದ, ಒಂದನೇ ಮುಖ್ಯರಸ್ತೆಯಲ್ಲಿದ್ದ ಪಾರ್ವತಿ ನಿಲಯದಲ್ಲಿ, ಪ್ರತಿ ನಿತ್ಯ ‘ದೇವಿಪುಸ್ತಕ ಪಾರಾಯಣ ವರ್ಷಕ್ಕೊಮ್ಮೆ  ಶರನ್ನವರಾತ್ರಿ ಪೂಜೆ ಮನೆಯಲ್ಲಿ ಇದ್ದ ದಿವಸ ಅಗ್ನಿಹೋತ್ರ ಹೋಮ ಮಾಡುವುದು ಕಡ್ಡಾಯ.

  ಕಳೆದ ವರ್ಷ ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಶಕ್ತಿಪೀಠ ಗೆಸ್ಟ್ ಹೌಸ್ ಮಾಡಿದ್ದರೂ, ನನ್ನ ಧರ್ಮ ಪತ್ನಿ, ನಾನು ಈ ಮನೆಯಲ್ಲಿಯೇ ಶರನ್ನವರಾತ್ರಿ ಪೂಜೆ ಮಾಡಲೇ ಬೇಕು. ಈ ವರ್ಷ ಅಲ್ಲ ನಾನೂ ಬದುಕಿರುವವರೆಗೂ, ಇದೇ ಮನೆಯಲ್ಲಿ ಶರನ್ನವರಾತ್ರಿ ಪೂಜೆ ಮಾಡುವುದು. ಇದಕ್ಕೆ ಮಾತ್ರ ನಿಮ್ಮ ಸಹಕಾರ ಬೇಕು ಎಂದು ಷರತ್ತು ವಿಧಿಸಿದರು.

  ನಾನೂ ಸಹ ಶಕ್ತಿದೇವತೆಯ ಆರಾಧಕ’ ನಾಗಿರುವುದರಿಂದ ಇದಕ್ಕಿಂತ ದೊಡ್ಡ ಕೆಲಸ ಇನ್ನೇನಿದೆ ಒಪ್ಪಿದೆ. ನಂತರ ಈ ಮನೆಯನ್ನು ಕೆಡವಿ ಶಕ್ತಿಭವನ ನಿರ್ಮಾಣ ಮಾಡುವ ಪ್ರಸ್ತಾಪ ಬಂದಾಗ ಮತ್ತೆ ನನ್ನ ಧರ್ಮ ಪತ್ನಿ ನೀವು ಎಷ್ಟೇ ಮನೆ ಕಟ್ಟಿ, ಹೇಗೆ ಕಟ್ಟಿ, ಮುಂದಿನ ವರ್ಷದ ‘ಶರನ್ನವರಾತ್ರಿ ಪೂಜೆ ಇದೇ ಮನೆಯಲ್ಲಿ ಮಾಡುವುದಾದರೆ, ಈ ಮನೆ ಕೆಡವಿ, ಇಲ್ಲವಾದರೆ ಇದೇ ಮನೆ ಸಾಕು ಎಂದು ಖಡಕ್ ಆಗಿ ಹೇಳಿದಾಗ, ನಾನೂ ವಿಧಿಯಿಲ್ಲದೆ ಒಪ್ಪಿದೆ.

 ಈ ಮಾತಿಗೆ ಬದ್ಧನಾಗಿ ಕಟ್ಟಡ ನಿರ್ಮಾಣ ಮಾಡಲು ಕಾಲಮಿತಿ ಹಾಕಿಕೊಂಡೆ. ಮನೆ ಎಂದರೆ ಗೋಡೆಗಳ ನಿರ್ಮಾಣ ಮಾಡಿ, ಬಾಗಿಲು ಮತ್ತು ಕಿಟಕಿ ಮುಚ್ಚುವಂತಿರಬೇಕಂತೆ. ಉಳಿದ ಯಾವುದೇ ಕೆಲಸ ಬಾಕಿಯಿದ್ದರೂ ಪರವಾಗಿಲ್ಲ ಎಂಬ ಮಾತು ಪುರೋಹಿತರಿಂದ ತಿಳಿದು ಕೊಂಡೆ.

  ಆದರೇ ರಾಜಯೋಗ’ ತಲೇ ನೋವು. ಈ ಬಗ್ಗೆ ಹಲವಾರು ಪುರೋಹಿತರ ಬಳಿ ಚರ್ಚೆ ನಡೆಸಿದಾಗ, ಎಲ್ಲಾ ಕಾಲದಲ್ಲಿಯೂ ರಾಜಯೋಗ ಇರುತ್ತದೆಯಂತೆ. ಕೆಲವು ದಿನಗಳು ಮಾತ್ರ ಶೇ 50 ರಿಂದ 75 ರವರೆಗೂ ಚೆನ್ನಾಗಿ ಇರುತ್ತದೆ ಎಂಬ ಜ್ಞಾನ ದೊರೆಯಿತು.

ಶರನ್ನವರಾತ್ರಿ ಪೂಜೆಯ  ದಿವಸಗಳಲ್ಲೂ ರಾಜಯೋಗ ಶೇ 30 ಕ್ಕಿಂತ ಹೆಚ್ಚಿಗೆ ಇರುತ್ತದೆ. ಆದರೇ ನೀವೂ ‘ಶರನ್ನವರಾತ್ರಿ ಪೂಜೆ ಮಾಡುವುದರಿಂದ, ಆ ಒಂಭತ್ತು ದಿವಸಗಳ ಪೂಜೆಯ ಫಲ ಶೇ 100 ರಾಜಯೋಗಕ್ಕಿಂತ ಅಧಿಕವಾಗಿರುತ್ತದೆ. ಆದ್ದರಿಂದ ನೀವೂ ಪೂಜೆ ಮಾಡಿ ತಪ್ಪಿಲ್ಲ ಎಂಬ ಸಲಹೆ ನೀಡಿದ್ದಾರೆ.

ರಾಜಯೋಗ ಇದ್ದರೂ ಕರ್ಮಫಲಧಾತ ಏನು ಮಾಡುತ್ತಾನೋ ಅದೇ ಅಂತಿಮ. ಯಮನಂತೂ ಹುಟ್ಟಿದ ದಿವಸವೇ ರಿಟರ್ನ್ ಟಿಕೆಟ್ ನೀಡಿ ಕಾಯುತ್ತಿರುತ್ತಾನೆ. ಅಂದ ಮೇಲೆ ಕಾಯಕ ಮಾಡಲು ಯಾವ ಸಮಯವಾದರೂ, ಒಳ್ಳೆಯದಾಗುವುದಿದ್ದರೆ ಅದೇ ರಾಜಯೋಗ ಎಂಬ ನಿರ್ಧಾರದಿಂದ ಮುಂದುವರೆಯ ಬೇಕಿದೆ.

ಈ ಬಗ್ಗೆ ಜ್ಞಾನಿಗಳು ತಮ್ಮ ಜ್ಞಾನ ವನ್ನು ದಾನ ಮಾಡಿದರೆ ಒಳ್ಳೆಯದು, ಆದರೇ ಪ್ಯಾಕೇಜ್ ಜ್ಞಾನ ನನಗೆ ಕಷ್ಠವಾಗ ಬಹುದು.

  ಅಷ್ಟಕ್ಕೂ ಈ ಕಟ್ಟಡ, ಮನೆಗೆ ಮನೆಯೂ ಅಲ್ಲ, ಮ್ಯೂಸಿಯಂಗೆ ಮ್ಯೂಸಿಯಂ ಅಲ್ಲ, ಆಡಳಿತ ಕಚೇರಿಗೆ ಕಚೇರಿಯೂ ಅಲ್ಲ, ಎಲ್ಲ ಮಿಶ್ರಣದ ಅಭಿವೃದ್ಧಿ ಆಶ್ರಮ ದಂತಿಗೆ. ವಿಶ್ವದ 108 ಶಕ್ತಿದೇವತೆಗಳೇ ಇಲ್ಲಿಗೆ ಬರುವುದರಿಂದ ಎಲ್ಲವೂ ಶಕ್ತಿದೇವತೆಆಟವಲ್ಲವೇ?