16th September 2024
Share

TUMAKURU:SHAKTHIPEETA FOUNDATION

ವಿಷ್ಣುವಿನ ಸುದರ್ಶನ ಚಕ್ರದಿಂದ ಶಿವನ ಪತ್ನಿ ಸತಿಯ ದೇಹ ಛಿದ್ರ, ಛಿದ್ರವಾಗಿ  ಬಿದ್ದ ಸ್ಥಳಗಲ್ಲಿ, ರಾಕ್ಷಸರು ಸತಿಯ ಅಂಗವನ್ನು ನಾಶಮಾಡಲು ಮುಂದಾದರಂತೆ, ತಕ್ಷಣ ಶಿವನು ತನ್ನ ಅಂಶದಿಂದ ಬೈರವರನ್ನು ಸೃಷ್ಠಿ ಮಾಡಿದರಂತೆ. ಒಬ್ಬೊಬ್ಬ ಬೈರವ, ವಿವಿಧ ಸ್ಥಳಗಳಲ್ಲಿ ಬಿದ್ದ ಒಂದೊಂದು ಸತಿಯ ಅಂಗಗಳನ್ನು ರಕ್ಷಣೆ ಮಾಡಿದರಂತೆ. ಆದ್ದರಿಂದ ಎಲ್ಲಾ ಶಕ್ತಪೀಠಗಳಲ್ಲಿ ಭೈರವ ದೇವಾಲಯ ಇದ್ದೇ ಇರುತ್ತದೆ ಎಂದು ಹಲವಾರು ಜನ ಹಲವಾರು ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ.

 ಅಧ್ಯಯನ ಮತ್ತು ಸಂಶೋಧನೆ ನಂತರ ನಿಖರವಾದ ಮಾಹಿತಿಗಳನ್ನು, ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯ ನ್ಯಾಷನಲ್ ಮಿಷನ್ ಫಾರ್ ಮ್ಯಾನ್‍ಸ್ಕ್ರಿಪ್ಟ್ ನಲ್ಲಿ ಹಾಗೂ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿ ದಾಖಲೆ ಮಾಡುವ ಮೂಲಕ ಪಕ್ಕಾ ಮಾಡಲು ನಿರ್ಧಿಷ್ಟ ಗುರಿ ಹೊಂದಲಾಗಿದೆ.

ಹೆಚ್ಚಿನ ಮಾಹಿತಿಗಳಿದ್ದಲ್ಲಿ ಜ್ಞಾನದಾನ ಮಾಡಲು ಮನವಿ.