27th July 2024
Share

TUMAKURU:SHAKTHIPEETA FOUNDATION

  ಭಾರತ ದೇಶದ, ಕರ್ನಾಟಕ ರಾಜ್ಯದ, ತುಮಕೂರು ಜಿಲ್ಲೆಯ, ತುಮಕೂರು ಮಹಾ ನಗರ ಪಾಲಿಕೆಯ, ಜಯನಗರ ಪೂರ್ವದ, ಒಂದನೇ ಮುಖ್ಯ ರಸ್ತೆಯ, ಪಾರ್ವತಿ ನಿಲಯದಲ್ಲಿ ಉದ್ದೇಶಿತ ಶಕ್ತಿಪೀಠ ಮ್ಯೂಸಿಯಂ ಮತ್ತು ಶಕ್ತಿಪೀಠ ಫೌಂಡೇಷನ್ ನ ಪ್ರಮುಖ ಉದ್ದೇಶಗಳಾದ ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಕ್ಕೆ ಸಂಭಂಧಿಸಿದ ಚಟುವಟಿಕೆ ಆರಂಭಿಸಲು, ಕಟ್ಟಡದ ಮಾಲೀಕರಾದ ಶ್ರೀಮತಿ ಬಿ.ಸುಜಾತಕುಮಾರಿರವರಿಂದ 2047 ರವರಿಗೆ ಲೀಸ್ ಕಂ ಬಾಡಿಗೆ ಆಧಾರದಲ್ಲಿ ಶೀಘ್ರವಾಗಿ ಹಸ್ತಾಂತರ ಮಾಡಲಾಗುವುದು.

ಲೋಕೊಪಯೋಗಿ ಇಲಾಖೆ ಅಥವಾ ಕೇಂದ್ರ ಲೋಕಪಯೋಗಿ ಇಲಾಖೆ ನಿಗಧಿ ಪಡಿಸುವ ಬಾಡಿಗೆ ನೀಡಲು ಉದ್ದೇಶಿಸಲಾಗಿದೆ. ಪಾರ್ವತಿ ನಿಲಯ’ದ ಜೊತೆಗೆ ಶಕ್ತಿಭವನÀ ಹೆಸರು ಇಡಲಾಗುವುದು. ಈ ಕಟ್ಟಡದಲ್ಲಿ ಈ ಕೆಳಕಂಡ ಚಟುವಟಿಕೆಗಳು ಆರಂಭವಾಗಲಿದೆ.

ಕೆಳಕಂಡ ಸಂಸ್ಥೆಗಳ ಆಡಳಿತ ಕಚೇರಿ.

  1. ಅಭಿವೃದ್ಧಿ ರೆವೂಲ್ಯೂಷನ್ ಫೋರಂ
  2. ಶಕ್ತಿಪೀಠ ಫೌಂಡೇಷನ್
  3. ಭಾರತ @ 100 ಸ್ವಾತಂತ್ರ್ಯ ಸೇನೆ.(ಬಿ.ಎಸ್.ಎಸ್.)

ಇತರೆ ಅಧೀನ ವಿಭಾಗಗಳು.

  1. ಶಕ್ತಿಪೀಠ
  2. ಜಲಪೀಠ
  3. ಅಭಿವೃದ್ಧಿ ಪೀಠ
  4. ಸೆಂಟರ್ ಆಫ್ ಎಕ್ಸ್‍ಲೆನ್ಸ್ ಕ್ಯಾಪ್ಚರಿಂಗ್ ಗೌವ್ರ್ನಮೆಂಟ್ ಆಫ್ ಇಂಡಿಯಾ ಫಂಡ್ಸ್.
  5. ಭಾರತ @ 100- 2047 ಅಧ್ಯಯನ ಪೀಠ
  6. ವಿಶ್ವ ಗುರು ನಾಲೇಡ್ಜ್ ಬ್ಯಾಂಕ್-2047
  7. ಏಷ್ಯಾದಲ್ಲಿ ನಂಬರ್ ಒನ್ ಕರ್ನಾಟಕ ನಾಲೇಡ್ಜ್ ಬ್ಯಾಂಕ್ – 2047
  8. ಭಾರತ @ 100 ಲೈಬ್ರರಿ
  9. ಭಾರತ @ 100 ಡಿಜಿಟಲ್ ಲೈಬ್ರರಿ
  10. ಭಾರತ @ 100 ಹೂಮನ್ ಲೈಬ್ರರಿ
  11. ಕುಂದರನಹಳ್ಳಿ ರಮೇಶ್ ಯೂಟ್ಯೂಬ್ ಚಾನಲ್
  12. ಇ-ಪೇಪರ್ ಶಕ್ತಿಪೀಠ

 ಪೋಸ್ಟ್ ಆಫೀಸ್, ನಬಾರ್ಡ್ ಕಚೇರಿಗಳ ಮಾದರಿಯಲ್ಲಿ ಸಂಶೋಧಕರು, ಇಲ್ಲಿಯೇ ವಾಸಿಸುವ ಮೂಲಕ ಸಂಶೋಧನೆ ನಡೆಸಲು ಅವಕಾಶವಿರುತ್ತದೆ.  ವಿಶ್ವದ 7 ದೇಶಗಳ ಜನರು ಇಲ್ಲಿಗೆ ಬಂದು ಹೋಗುವ ವ್ಯವಸ್ಥೆ ಮಾಡಲಾಗುವುದು. ಸೂಕ್ತ ಸಲಹೆ ಮಾರ್ಗದರ್ಶನಕ್ಕೆ ಮನವಿ.