27th July 2024
Share

TUMAKURU: SHAKTHIPEEAT FOUNDATION

   ಇಂಡಿಯಾ @ 100 ಅಂಗವಾಗಿ  ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಅನ್ನು ಸಿದ್ಧಪಡಿಸುವ ಸಲುವಾಗಿ,ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ರತಿಯಲ್ಲಿ ಬರುವ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿಶ್ವ ವಿದ್ಯಾನಿಲಯಗಳ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ(ಪತ್ರದಲ್ಲಿ ಸೂಚಿತವಾದ ವಿಭಾಗಗಳ) ವಿದ್ಯಾರ್ಥಿಗಳನ್ನು ಉಪಯೋಗಿಸಿಕೊಂಡು, ರಾಜ್ಯದ ಪ್ರತಿ ಗ್ರಾಮದ ಅಭಿವೃದ್ಧಿ ಯೋಜನೆಗಳ ಮಾಹಿತಿಗಳನ್ನು ಕ್ರೋಡೀಕರಿಸಲು ಮತ್ತು ಜನಜಾಗೃತಿ ಮೂಡಿಸಲು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ, ಈ ಕಾರ್ಯಕ್ರಮ ರೂಪುರೇಷೆಯನ್ನು ರೂಪಿಸುವ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ, ತಮ್ಮ ಅಭಿಪ್ರಾಯದ ವರದಿಯನ್ನು ಸರ್ಕಾರಕ್ಕೆ  ಸಲ್ಲಿಸುವಂತೆ ತಮ್ಮನ್ನು ಕೋರಲು ನಿರ್ದೇಶಿತನಾಗಿದ್ದೇನೆ.

ದಿನಾಂಕ:06.04.2023 ರಂದು ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಾದ ಶ್ರೀ ಎಸ್.ಆರ್.ಉಮಾಶಂಕರ್ ರವರು ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಕುಲಪತಿಗಳು/ಕುಲಸಚಿವರುಗಳಿಗೆ ಪತ್ರ ಬರೆದು ಮಾಹಿತಿ ಕೇಳಿರುವದಕ್ಕೆ ತಮ್ಮ ಉತ್ತರ ಏನು ಸಾರ್ ? ಎಂಬ ಬಗ್ಗೆ ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀ ವೆಂಕಟೇಶ್ವರಲು ರವರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಅವರು ತಮ್ಮ ಸಿಬ್ಬಂಧಿಯನ್ನು ಕರೆದು, ಈ ಪತ್ರ ಎಲ್ಲಿದೆ, ಏನು ವರಧಿ ನೀಡಲಾಗಿದೆ ಎಂಬ ಮಾಹಿತಿ ನೀಡುವುದರ ಜೊತೆಗೆ, ಈ ವಿಷಯದ ಬಗ್ಗೆ ಒಂದು ಸಮಿತಿ ರಚಿಸಿ ಒಂದು ಅಧ್ಯಯನ ವರದಿ ನೀಡಲು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದರು.

ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಪುಸ್ತಕವನ್ನು ನೀಡಿ, ತುಮಕೂರು ವಿಶ್ವ ವಿಧ್ಯಾನಿಲಯ, ಈ ವಿಚಾರದಲ್ಲಿ ದೇಶದ ಗಮನ ಸೆಳೆಯುವ ಕೆಲಸ ಮಾಡಲು ಮನವಿ ಮಾಡಲಾಯಿತು. ಅವರ ಅನುಭವವನ್ನು ಎಳೆ, ಎಳೆಯಾಗಿ ವಿವರಿಸುವ ಮೂಲಕ ತಾವು ಕೈಗೊಳ್ಳುವ ಕ್ರಮಗಳ ಬಗ್ಗೆ ವಿವರಿಸಿದರು.

ಒಂದು ವಿಶ್ವ ವಿದ್ಯಾನಿಲಯ ಮನಸ್ಸು ಮಾಡಿದರೆ ಏನೇನು ಮಾಡಬಹುದು ಎಂಬುದನ್ನು ಮಾಡಿ ತೋರಿಸುವ ಛಲ ಅವರಲ್ಲಿ ಕಂಡು ಬಂತು. ಅವರು ಇದೂವರೆಗೂ ಕೈಗೊಂಡಿರುವ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ನನಗೂ ಒಂದು ‘ವಿಶಿಷ್ಟ’ ಎನಿಸಿತು. ಈ ಬಗ್ಗೆ ಒಂದು ಪುಸ್ತಕ ಬರೆಯ ಬೇಕೆನಿಸಿತು.

ನೀವೂ ಹಿಂದೆ ನಾನು ರಿಜಿಸ್ಟಾರ್ ಆಗಿದ್ದಾಗ ಹೇಳುತ್ತಿದ್ದ ಎಲ್ಲಾ ಯೋಜನೆಗಳ ಜಾರಿ ನನ್ನ ಕನಸು ಆಗಿದೆ. ಎಂಬ  ಒಂದು ಮಾತು ಹೇಳಿದ್ದು ನನಗೆ ತೃಪ್ತಿ ತಂದಿತು.

ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೂ ಭೇಟಿ ನೀಡಲಾಗುತ್ತಿದೆ.

ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯರಾದ ಶ್ರೀ ಟಿ.ಆರ್.ರಘೋತ್ತಮರಾವ್ ರವರು ಇದ್ದರು.