14th July 2024
Share

  ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ವರದಿಯಲ್ಲಿನ ಪ್ರತಿಯೊಂದು ಪದಗಳ ಸಹಿತ ವಿಶ್ಲೇಷಣೆ ಮಾಡಿ, ಸಾಧಕ-ಭಾದಕಗಳ ವರದಿ ಸಲ್ಲಿಸಲು ಬೆಂಗಳೂರಿನ LIS ACADEMY ಜ್ಞಾನಿಗಳು ಸಹಮತ ವ್ಯಕ್ತ ಪಡಿಸಿದ್ದಾರೆ.

ದಿನಾಂಕ:09.09.2023 ರಂದು ಅವರ ಕಚೇರಿಯಲ್ಲಿ ಅವರ ಸಂಸ್ಥೆಯ ವಿಷನ್ ಮತ್ತು ಮಿಷನ್ ಹಾಗೂ ನಮ್ಮ ಸಂಸ್ಥೆಯ ಉದ್ದೇಶಗಳ ಬಗ್ಗೆ ಸುಧೀರ್ಘ ಸಂವಾದ ನಡೆಯಿತು.

ತುಮಕೂರು ಜಿಲ್ಲೆ ಫೈಲಟ್ ಪ್ರಸ್ಥಾವನೆ ಸಿದ್ಧಪಡಿಸಲು ಪೂರ್ವಭಾವಿಯಾಗಿ ಅಧ್ಯಯನ ಮಾಡಲು, ದಿನಾಂಕ:16.09.2023 ಮತ್ತು 17.09.2023 ರಂದು ಒಂದು ವಿಶೇಷ ತಂಡ ಬರಲಿದೆ. ಅಂದು ಸಾಧ್ಯವಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು, ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣನವರು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಮತ್ತು ಜಿಲ್ಲಾಧಿಕಾರಿರವರು ಯಾರು ಲಭ್ಯವಿರುತ್ತಾರೋ ಅವರ ಜೊತೆ ಸಮಾಲೋಚನೆ ಮಾಡಲಾಗುವುದು.

ನಂತರ ಅವರವರ ಸಮಯ ನಿಗಧಿ ಪಡಿಸಿಕೊಂಡು ಸಮಾಲೋಚನೆ ನಡೆಸಲಾಗುವುದು.

ಮೊದಲ ಹಂತದಲ್ಲಿ  ಭೇಟಿ ಮಾಡಲು ಉದ್ದೇಶಿರುವ ಸ್ಥಳಗಳು.

 1. ಅಜ್ಜಗೊಂಡನಹಳ್ಳಿ ಘನ ತ್ಯಾಜ್ಯ ವಸ್ತು ಘಟಕ.
 2. ಶಕ್ತಿಭವನ.
 3. ತುಮಕೂರು ನಗರ ಗ್ರಂಥಾಲಯ.
 4. ಎಂಪ್ರೆಸ್ ಕಾಲೇಜು ಆವರಣ.
 5. ಮಹಾತ್ಮ ಗಾಂಧಿ ಸ್ಟೇಡಿಯಂ
 6. ಐ.ಸಿ.ಸಿ.ಸಿ.
 7. ಸರ್ಕಾರಿ ಜೂನಿಯರ್ ಕಾಲೇಜಿನ ಆವರಣ.
 8. ತುಮಕೂರು ಅಮಾನಿಕೆರೆಯಲ್ಲಿರುವ ಡಾಟಾ ಸೆಂಟರ್.
 9. ಗಂಗಸಂದ್ರ ಅಮಾನಿಕರೆ ಪಕ್ಕ ಅಧ್ಯಯನ ಕೇಂದ್ರಕ್ಕೆ ಮೀಸಲಿಟ್ಟ ಜಮೀನು.
 10. ವಂಸತ ನರಸಾಪುರ ಕೈಗಾರಿಕಾ ವಲಯ.
 11. ಶಿರಾ ತಾಲ್ಲೋಕು ಕರ್ನಾಟಕ ಹೆರಿಟೇಜ್ ಹಬ್.
 12. ಹಿರಿಯೂರು ತಾಲ್ಲೂಕು ಬಗ್ಗನಡು ಕಾವಲ್ ಶಕ್ತಿಪೀಠ ಕ್ಯಾಂಪಸ್.
 13. ಕುಂದರನಹಳ್ಳಿ ಡಾ.ಶ್ರೀ. ಶ್ರೀ ಶಿವಕುಮಾರ ಸ್ವಾಮೀಜಿ ತಪೋವನ.
 14. ಚಿಕ್ಕನಾಯಕನಹಳ್ಳಿ ತಾ. ತೀರ್ಥರಾಮೇಶ್ವರ ವಜ್ರ.
 15. ಸಂಸದರ ಆದರ್ಶ ಗ್ರಾಮಗಳು.

ಇವುಗಳಲ್ಲಿ ಎಷ್ಟು ಸಾದ್ಯವೋ ಅಷ್ಟು ಕಡೆ ಸುತ್ತಾಡಲಾಗುವುದು. ಆಸಕ್ತರು ಜೊತೆ ಸೇರಬಹುದು.

ಈ ಸಭೆಯಲ್ಲಿ ಡಾ.ಕೊಣ್ಣೂರ್ ರವರು, ಡಾ.ಶಿವರಾಮ್‍ರವರು, ಡಾ.ಕೆ.ಆರ್.ಮುಲ್ಲಾರವರು, ಡಾ.ಅರುಣ್ ರವರು, ಡಾ.ರವೀಂದ್ರ ಒಡೆಯರ್‍ರವರು, ಡಾ.ಪಿ.ವೈ ರಾಜೇಂದ್ರಕುಮಾರ್ ರವರು, ಡಾ.ಎಸ್.ಎಲ್. ಕಾಡುದೇವರ ಮಠ್ ರವರು ಮತ್ತು ಡಾ.ರಾಘವೇಂದ್ರರವರು ಇದ್ದರು.