12th April 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್ ವತಿಯಿಂದ ದಿನಾಂಕ:15.10.2023 ರಿಂದ ಆರಂಭವಾಗುವ ಜಲಪೀಠ ವಿಭಾಗದ ಜಲಗ್ರಂಥ ಕ್ಕೆ ಅಗತ್ಯವಿರುವ ರಾಜ್ಯದ 7 ಬೇಸಿನ್‍ಗಳಿಂದ ರಾಜ್ಯದಲ್ಲಿ ಬಳಸುತ್ತಿರುವ, ಬಳಸಲು ಉದ್ದೇಶಿರುವ, ಬಳಸಲು ಹರಿಕಥೆ ಹೇಳುತ್ತಿರುವ ನೀರಿನ ಮತ್ತು ಕೇಂದ್ರ ಸರ್ಕಾರದ ನದಿಜೋಡಣೆಯಿಂದ ಕರ್ನಾಟಕ ರಾಜ್ಯಕ್ಕೆ  ದೊರೆಯುವ ನದಿ ನೀರಿನ ನಕ್ಷೆಗಳನ್ನು, ಉಚಿತವಾಗಿ ನೀಡುವುದಾಗಿ ಎಂ.ಟೆಕ್. ವಿಧ್ಯಾರ್ಥಿ ಶ್ರೀ ಸಂದೇಶ್ ಕೃಷ್ಣಮೂರ್ತಿಯವರು ಘೋಶಿಸಿದ್ದಾರೆ.

ಅವರು ದಿನಾಂಕ:09.09.2023 ರಂದು ದೆಹಲಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರ ತಂದೆಯವರೊಂದಿಗೆ ಉದ್ದೇಶಿತ ಶಕ್ತಿಭವನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಶ್ರೀ ಸತ್ಯಾನಂದ್ ರವರು ಇದ್ದರು.

  ನಕ್ಷೆಯಲ್ಲಿ 1997 ರಿಂದ ನೀರಾವರಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ  ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಪರಿಕಲ್ಪನೆ ಸೇರಿದಂತೆ, ರಾಜ್ಯದ ವಿವಿಧ ನೀರಾವರಿ ತಜ್ಞರವಾರು ಯೋಜನೆಗಳನ್ನು ನಕ್ಷೆಯಲ್ಲಿ ನಮೂದಿಸಲಾಗುವುದು.

   ಆಸಕ್ತ ನೀರಾವರಿ ತಜ್ಞರಿಗೆ ವಸತಿ ಊಟದ ವ್ಯವಸ್ಥೆಯೊಂದಿಗೆ, ಶಕ್ತಿಭವನದಲ್ಲಿಯೇ ಅವರ ಕುಟುಂಬ ಸಮೇತ ತಂಗಲು ಎಲ್ಲಾ ವ್ಯವಸ್ಥೆ ಇರಲಿದೆ.  ನಾವು ಸಹ ಅವರೊಂದಿಗೆ ಉಳಿದುಕೊಂಡು ಅವರ ಜ್ಞಾನವನ್ನು ರಾಜ್ಯದ ಜನರಿಗೆ ಮನವರಿಕೆ ಮಾಡಲು ಉದ್ದೇಶಿಸಲಾಗಿದೆ.

ಬಸವರಾಜ್‍ರವರು ಏನು ಹೇಳತ್ತಾರೋ ಅದೆಲ್ಲವೂ ಇಲ್ಲಿ ಇರಲಿದೆ. ಅವುಗಳ ಜಾರಿಗೆ ಶಿಸ್ತು ಬದ್ಧವಾದ ಕಾನೂನು ಹೋರಾಟಕ್ಕೆ ಮುನ್ನುಡಿ ಬರೆಯಲಾಗುವುದು.

ಯಾವುದೇ ಕಾರಣಕ್ಕೂ, ರಾಜ್ಯದ 224 ವಿಧಾನ¸ಭಾÀ ಕ್ಷೇತ್ರದ ವ್ಯಾಪ್ತಿಯಲ್ಲೂ ಅನ್ಯಾವಾಗದಂತೆ ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಯಡಿ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಶ್ರಮಿಸಲಾಗುವುದು.

ಆಸಕ್ತರು ಕೈಜೋಡಿಸಬಹುದು.