TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆಯ ಅಭಿವೃದ್ಧಿ ಪರ ವಿಶೇಷ ಗಮನ ಹರಿಸಿರುವ, ಸರ್ಕಾರದಿಂದ ಬಂದಿರುವ ಪತ್ರದ ಆಧಾರದ ಮೇಲೆ, ಒಂದು ಸಮಿತಿ ರಚಿಸಿ, ಪ್ರಥಮ ಸಭೆ ನಡೆಸುತ್ತಿರುವ ತಮಗೆ ಹೃದಯ ಪೂರ್ವಕ ಅಭಿನಂದನೆಗಳು.ಈ ವಿಚಾರದಲ್ಲಿ ‘ತುಮಕೂರು ವಿಶ್ವ ವಿದ್ಯಾನಿಲಯ ವಿಶ್ವಕ್ಕೆ ಮಾದರಿ’ ಯಾಗಲಿದೆ.
ದಿನಾಂಕ:15.09.2023 ರಂದು ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ವಿಸಿಯವರಾದ ಶ್ರೀ ವೆಂಕಟೇಶ್ವರಲು ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಚರ್ಚೆ ಮಾಡಲು ಸಲಹೆ ನೀಡಿರುವ ಪ್ರಮುಖ ಅಂಶಗಳು
- ರಾಜ್ಯ ಸರ್ಕಾರದಿಂದ ಬಂದಿರುವ ಪತ್ರ ಹಾಗೂ ನಮ್ಮ ದೇಶದ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರ ಪರಿಕಲ್ಪನೆಯಂತೆ 2047 ಇಸವಿ ವೇಳೆಗೆ ‘ವಿಶ್ವ ಗುರು’ ಹಾಗೂ ನಮ್ಮ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಪರಿಕಲ್ಪನೆಯಂತೆ ‘ಕರ್ನಾಟಕ ರಾಜ್ಯ ಏಷ್ಯಾದಲ್ಲಿ ನಂಬರ್-1’ ಮಾಡಲು ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ಆಯ್ಕೆ ಮಾಡಲು ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಗೆ ಪ್ರಸ್ತಾವನೆ ಸಲ್ಲಿಸುವುದು
- ತುಮಕೂರು ಜಿಲ್ಲೆಯ ಗ್ರಾಮವಾರು, ಅವರು ದೇಶದ ಯಾವುದೇ ಕಾಲೇಜುಗಳಲ್ಲಿ ಓದುತ್ತಿದ್ದರೂ 6 ನೇ ತರಗತಿಯಿಂದ ಯಾವುದೇ ತರಗತಿಗಳ ವಿದ್ಯಾರ್ಥಿಗಳಾದರೂ ಮಾಹಿತಿ ಸಂಗ್ರಹ ಮಾಡಿ, ಆಯಾ ಗ್ರಾಮದ ಊರಿಗೊಂದು ಪುಸ್ತಕ ಬರೆಯಲು ವಿದ್ಯಾರ್ಥಿಗಳ ತಂಡ ರಚಿಸುವುದು. ಅವರ ಪ್ರಾಜೆಕ್ಟ್ ವರ್ಕ್, ಆಕ್ಟಿವಿಟಿ ಪಾಯಿಂಟ್, ಪಿ.ಹೆಚ್.ಡಿ ವಿಷಯವಾಗಿ ಪರಿಗಣಿಸಲು ಸರ್ಕಾರಿ ಆದೇಶ ಮಾಡಿಸುವುದು. ಆಯಾ ಬಡಾವಣೆಯ/ಗ್ರಾಮದ ಕೇಂದ್ರ ಸರ್ಕಾರದ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಆಗಿ ಘೋಶಿಸಲು ಸರ್ಕಾರಿ ಆದೇಶ ಮಾಡಿಸುವುದು.
- ತುಮಕೂರು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳವಾರು/ ಬಡಾವಣೆವಾರು ವಿದ್ಯಾರ್ಥಿಗಳ ಮಾಹಿತಿ ಆಯಾ ಬಡಾವಣೆಗೊಂದು ಪುಸ್ತಕ ಬರೆಯಲು, ಅವರು ದೇಶದ ಯಾವುದೇ ಕಾಲೇಜುಗಳಲ್ಲಿ ಓದುತ್ತಿದ್ದರೂ 6 ನೇ ತರಗತಿಯಿಂದ ಯಾವುದೇ ತರಗತಿಗಳ ವಿದ್ಯಾರ್ಥಿಗಳದಾರೂ ತಂಡ ರಚಿಸುವುದು. ಅವರ ಪ್ರಾಜೆಕ್ಟ್ ವರ್ಕ್, ಆಕ್ಟಿವಿಟಿ ಪಾಯಿಂಟ್, ಪಿ.ಹೆಚ್.ಡಿ ವಿಷಯವಾಗಿ ಪರಿಗಣಿಸಲು ಸರ್ಕಾರಿ ಆದೇಶ ಮಾಡಿಸುವುದು. ಆಯಾ ಬಡಾವಣೆಯ/ಗ್ರಾಮದ ಕೇಂದ್ರ ಸರ್ಕಾರದ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಆಗಿ ಘೋಶಿಸಲು ಸರ್ಕಾರಿ ಆದೇಶ ಮಾಡಿಸುವುದು.
- ತುಮಕೂರು ಜಿಲ್ಲೆಯ ಗ್ರಾಮಪಂಚಾಯಿತಿವಾರು ಕಾಲೇಜುಗಳ ಮಾಹಿತಿ ಸಂಗ್ರಹ ಮಾಡಿ, ಅವರು ಇಚ್ಚಿಸುವ ಗ್ರಾಮಪಂಚಾಯಿತಿವಾರು ಉಸ್ತುವಾರಿ ನೀಡುವುದು.
- ತುಮಕೂರು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳವಾರು/ ಬಡಾವಣೆವಾರು ಕಾಲೇಜುಗಳ ಮಾಹಿತಿ ಸಂಗ್ರಹ ಮಾಡಿ, ಅವರು ಇಚ್ಚಿಸುವ ಬಡಾವಣೆವಾರು ಉಸ್ತುವಾರಿ ನೀಡುವುದು.
- ತುಮಕೂರು ವಿಶ್ವ ವಿದ್ಯಾನಿಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆದ್ಯಾಪಕ ವೃಂದ ಮತ್ತು ನೌಕರ ವೃದಂದದ ವಾಸಿಸುತ್ತಿರುವ/ಹುಟ್ಟೂರು ಗ್ರಾಮವಾರು/ಬಡಾವಣೆವಾರು ಮಾಹಿತಿ ಸಂಗ್ರಹ ಮಾಡಿ ಅವರು ಇಚ್ಚಿಸುವ ಗ್ರಾಮವಾರು/ಬಡಾವಣೆವಾರು ಪುಸ್ತಕ ಬರೆಯಲು ಉಸ್ತುವಾರಿ ನೀಡುವುದು.
- 94 ಕಾಲೇಜುಗಳ ವಿವಿಧ ವಿಭಾಗವಾರು, ಗ್ರಾಮ ಪಂಚಾಯಿತಿವಾರು/ಬಡಾವಣೆವಾರು ಪುಸ್ತಕ ಬರೆಯುವವರ ತಂಡದ ಉಸ್ತುವಾರಿ ನೀಡುವುದು.
- ತುಮಕೂರು ಜಿಲ್ಲೆಯ ಗ್ರಾಮವಾರು/ಬಡಾವಣೆವಾರು ಒಬ್ಬೊಬ್ಬರೂ ಡಾಟಾ ಮಿತ್ರರನ್ನು ಗುರುತಿಸುವುದು. ಅವರು ಸೋಶಿಯಲ್ ಮೀಡಿಯಾದಲ್ಲಿ ನಿಪುಣರಾಗಿದ್ದರೆ ಅರ್ಹತೆ ಉಳ್ಳವರಾಗಿರಾತ್ತಾರೆ. ಅವರು ಮೊದಲು ಊರಿಗೊಂದು/ಬಡಾವಣೆಗೊಂದು ವಾಟ್ಸ್‍ಅಫ್ ಗ್ರೂಪ್ ರಚಿಸುವುದು.ಕಾಲ ಕಾಲಕ್ಕೆ ಕೇಳುವ ಯೋಜನೆಗಳ ಫೋಟೋ ಸಹಿತ ಮಾಹಿತಿ ನೀಡುವ ಸಾಮಥ್ರ್ಯ ಇರಬೇಕು. ಅವರು ಅದೇ ಗ್ರಾಮ/ಬಡಾವಣೆಯಲ್ಲಿ ಕಡ್ಡಾಯವಾಗಿ ವಾಸಿಸುತ್ತಿರಬೇಕು. ಡಾಟಾ ಮಿತ್ರರು ಆಯಾ ಸ್ಥಳೀಯ ಸಂಸ್ಥೆಗಳವಾರು ಇರುವ ಬಯೋಡೈವರ್ಸಿಟಿ ಮ್ಯಾನೇಜ್‍ಮೆಂಟ್ ಕಮಿಟಿಯ ಸದಸ್ಯರಾಗಿ ನೇಮಕ ಮಾಡಲು ಸರ್ಕಾರಿ ಆದೇಶ ಮಾಡಿಸುವುದು.
- ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಇರುವ ಅಧ್ಯಯನ ಪೀಠಗಳಿಗೆ ಮತ್ತು ವಿಭಾಗಗಳಿಗೆ ತುಮಕೂರು ಜಿಲ್ಲೆಯ 11 ವಿಧಾನಸಭಾ ಸದಸ್ಯರ, 4 ಜನ ವಿಧಾನಸಭಾ ಸದಸ್ಯರ, ಮೂರು ಜನ ಲೋಕಸಭಾ ಸದಸ್ಯರ, ಒಬ್ಬರು ರಾಜ್ಯಸಭಾ ಸದಸ್ಯರ, ಒಬ್ಬರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಒಬ್ಬ ಜಿಲ್ಲಾಧಿಕಾರಿ ಮತ್ತು ಒಬ್ಬ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರ ಪರಿಕಲ್ಪನೆ ಮಾಹಿತಿ ಸಂಗ್ರಹಿಸಲು ಮತ್ತು ಅವರವರ ಕಾರ್ಯಕ್ಷೇತ್ರದ ಹೋಣೆಗಾರಿಕೆ ವಹಿಸಿ ಕೊಳ್ಳುವುದು.
- ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ವರದಿಯಲ್ಲಿನ ಅಂಶಗಳ ಮೇರೆಗೆ, ಅಂತಿಮ ವರದಿಯನ್ನು ಸಿದ್ಧಪಡಿಸಲು, ತುಮಕೂರು ಜಿಲ್ಲೆಯ ಫೈಲಟ್ ಯೋಜನೆಯ ಲೈವ್ ಮಾಹಿತಿ ಸಂಗ್ರಹಿಸಲು, ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ ಹಾಗೂ ಶಕ್ತಿಪೀಠ ಫೌಂಡೇಷನ್ ಸಂಸ್ಥಾಪಕರಾದ ಕುಂದರನಹಳ್ಳಿ ರಮೇಶ್ ಮತ್ತು ಸಿಇಓ ಕೆ.ಆರ್.ಸೋಹನ್ ರವರಿಗೆ ಸಂಪೂರ್ಣ ಸಹಕಾರ ನೀಡುವುದು ಹಾಗೂ ತುಮಕೂರು ವಿಶ್ವ ವಿದ್ಯಾನಿಲಯಕ್ಕೆ ಕೇಂದ್ರ, ರಾಜ್ಯ ಸರ್ಕಾರದ ಅನುದಾನ ಮಂಜೂರು ಮಾಡಿಸಲು, ಅಗತ್ಯವಿರುವ ಯೋಜನೆಗಳಿಗೆ ಸರ್ಕಾರಿ ಭೂಮಿ ಮಂಜೂರು ಮಾಡಿಸಲು, ಶಾಲಾ ಕಾಲೇಜುಗಳಲ್ಲಿ ಮತ್ತು ಗ್ರಾಮ/ಬಡಾವಣೆವಾರು ಜನ ಜಾಗೃತಿ ಮೂಡಿಸಲು, ನಾಲೇಡ್ಜ್ ಬ್ಯಾಂಕ್-2047 ಸ್ಥಾಪಿಸಲು ಮತ್ತು ಅಗತ್ಯವಿರುವ ಸರ್ಕಾರಿ ಆದೇಶಗಳನ್ನು ಮಾಡಿಸಲು ಶ್ರಮಿಸಲು ‘ಎಂ.ಓ.ಯು’ ಮಾಡಿಕೊಳ್ಳುವುದು.
- ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ವರದಿಯಲ್ಲಿನ ಅಂಶಗಳ ಬಗ್ಗೆ ಆಶುಭಾಷಣ ಸ್ಪರ್ಧೆ, ಪ್ರಭಂದ ಸ್ಪರ್ದೆ, ಚರ್ಚಾ ಸ್ಪರ್ದೆ, ಸಂವಾದ, ಉಪನ್ಯಾಸ ಹೀಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ನಡೆಸುವುದು.
- ಫಿಸಿಕಲ್ ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ ಮತ್ತು ಹ್ಯೂಮನ್ ಗ್ರಂಥಾಲಯ ಸ್ಥಾಪಿಸುವುದು.
- ಊರಿಗೊಂದು/ಬಡಾವಣೆಗೊಂದು ಪುಸ್ತಕದ ಟೆಂಪ್ಲೇಟ್ ಸಿದ್ಧಪಡಿಸಲು ಉಪ ಸಮಿತಿ ರಚಿಸುವುದು.
- ‘ಒಂದೇ ದಿವಸ ಏಕಕಾಲದಲ್ಲಿ’ ತುಮಕೂರು ಜಿಲ್ಲೆಯ ಎಲ್ಲಾ ಗ್ರಾಮಗಳ/ಬಡಾವಣೆಗಳ ಸಮಿತಿಗಳನ್ನು ಮಾನ್ಯ ಪ್ರಧಾನ ಮಂತ್ರಿಯವರು ಆನ್ ಲೈನ್ ನಲ್ಲಿ ಹಾಗೂ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು, ಉಪಮುಖ್ಯ ಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು ಸೇರಿದಂತೆ ಕೇಂದ್ರದ, ರಾಜ್ಯದ, ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳನ್ನು ಆಹ್ವಾನಿಸುವುದು.
- ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ವರದಿಯಲ್ಲಿನ ಅಂಶಗ¼ ಬಗ್ಗೆ ಟೆಂಪ್ಲೇಟ್ ಮತ್ತು ರ್ಯಾಂಕಿಂಗ್ ನೀಡಲು ಪಟ್ಟಿ ಸಿದ್ಧಪಡಿಸಲು ವಿಷಯವಾರು ವಿವಿಧ ಉಪ ಸಮಿತಿ ರಚಿಸುವುದು.
–ಕುಂದರನಹಳ್ಳಿ ರಮೇಶ್, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.