27th July 2024
Share

TUMAKURU:SHAKTHIPEETA FOUNDATION

     ಕೇಂದ್ರ ಸರ್ಕಾರದ ನೀತಿ ಆಯೋಗ, ಯುಜಿಸಿ, ಮಾನವ ಸಂಪನ್ಮೂಲ ಇಲಾಖೆ ಹಾಗೂ ವಿವಿಧ ಇಲಾಖೆಗಳ ಪತ್ರ ಹಾಗೂ ಶಕ್ತಿಪೀಠ ಫೌಂಡೇಷನ್ ಮನವಿ ಮೇರೆಗೆ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ.ಜಿ.ಎಸ್.ಬಸವರಾಜ್ ರವರು, ತುಮಕೂರು ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಶೀಫಾರಸ್ಸಿನ ಹಿನ್ನಲೆಯಲ್ಲಿ, ರಾಜ್ಯ ಸರ್ಕಾgದಿಂದ ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೆ ಬರೆದÀ ಪತ್ರ.

 ಹಾಗೂ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯ ದಿಶಾ ಸಮಿತಿಯ ಸದಸ್ಯ ಕುಂದರನಹಳ್ಳಿ ರಮೇಶ್ ಮತ್ತು ವಿದ್ಯಾರ್ಥಿ ಕೆ.ಆರ್.ಸೋಹನ್ ರವರು ರಾಜ್ಯ ಸರ್ಕಾರದ ಅನುಮತಿ ಮೇರೆಗೆ ಸಿದ್ಧಪಡಿಸಿದ್ದ ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ಪ್ರತಿಯ ವರದಿಯಲ್ಲಿನ ಅಂಶಗಳ ಆಧಾರದ ಮೇಲೆ,

  ತುಮಕೂರು ವಿಶ್ವ ವಿದ್ಯಾನಿಲಯದ ವಿಸಿಯವರಾದ ಶ್ರೀ ವೆಂಕಟೇಶ್ವರಲುರವರ  ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಊರಿಗೊಂದು/ಬಡಾವಣೆಗೊಂದು ಪುಸ್ತಕ ಹಾಗೂ  ವರದಿಯಲ್ಲಿನ ಅಂಶಗಳ ಆಧಾರದಲ್ಲಿ ತುಮಕೂರು ಜಿಲ್ಲೆಯ ಫೈಲÀಟ್ ಯೋಜನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಯಿತು.

ತುಮಕೂರು ಜಿಲ್ಲೆಯಲ್ಲಿನ ಪ್ರತಿಯೊಂದು ಗ್ರಾಮದ ಮತ್ತು ನಗರ ಪ್ರದೇಶಗಳ ಬಡಾವಣೆವಾರು ಸುಮಾರು 3500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲಿಗೆ ಸಾಕ್ಷಿಯಾಗಲಿದ್ದಾರೆ.

ವಿಶ್ವ ವಿದ್ಯಾಲನಿಲಯದ ವಿಸಿಯವರಿಂದ ಆರಂಬಿಸಿ, ಒಬ್ಬ ಜವಾನನವರಿಗೂ, ಸುಮಾರು 1000 ಜನ ಅಧ್ಯಾಪಕ ವೃಂದ ಮತ್ತು ನೌಕರರಿದ್ದು, ಕನಿಷ್ಟ ಮೂರು ಗ್ರಾಮಗಳ ಅಥವಾ ಬಡಾವಣೆಯ ಹೊಣೆಗಾರಿಕೆ ಹೊರಲಿದ್ದಾರೆ.

ಇವರಿಗೆ ಜಿಲ್ಲೆಯ ವಿವಿಧ ವರ್ಗದ ಚುನಾಯಿತ ಜನಪ್ರತಿನಿಧಿಗಳು, ಸರ್ವಪಕ್ಷಗಳ, ಸರ್ವ ಧರ್ಮಗಳ, ಸರ್ವ ಜಾತಿ ಉಪಜಾತಿಗಳವಾರು ಪ್ರತಿಯೊಂದು ಗ್ರಾಮ/ಬಡಾವಣೆ ಮಟ್ಟದ ವಿವಿಧ ವರ್ಗದ ಜನರು, ಸಂಘಸಂಸ್ಥೆಗಳು, ಜ್ಞಾನಿಗಳು ಗ್ರಾಮ ಮಟ್ಟದ ಅಧಿಕಾರಿಗಳು ಮತ್ತು ನೌಕರರು ಸೇರಿದಂತೆ 35000 ಕ್ಕೂ ಹೆಚ್ಚು ಜನ ಕೈಜೋಡಿಸಲಿದ್ದಾರೆ.

ನಮ್ಮೂರಿನ ಅಭಿವೃದ್ಧಿ, ನಮ್ಮ ಬಡಾವಣೆ ಅಭಿವೃದ್ಧಿ  ಆಯಾ ವ್ಯಾಪ್ತಿಯ  ಜನರಿಂದಲೇ ಎಂಬ ಮಾದರಿಯಲ್ಲಿ, ಸ್ವಾತಂತ್ರ್ಯ ಪೂರ್ವ ಹೇಗೆ ಇತ್ತು,  75 ವóರ್ಷಗಳಲ್ಲಿ ಹೇಗೆ ಅಭಿವೃದ್ಧಿ ಆಗಿದೆ ಮತ್ತು 2047 ಕ್ಕೆ ನಮ್ಮೂರು ಹೇಗಿರಬೇಕು ಎಂಬ ಸಂಶೋಧನೆ, ಮೌಲ್ಯಮಾಪನ ನಡೆಯಲಿದೆ.

ಇನ್ನೂ ಮುಂದೆ ತುಮಕೂರು ಜಿಲ್ಲೆಯ ಸುಮಾರು 350 ಕ್ಕೂ ಹೆಚ್ಚು ಗ್ರಂಥಾಲಯಗಳೇ ಆಯಾ ವ್ಯಾಪ್ತಿಯ ನಾಲೇಡ್ಜ್ ಬ್ಯಾಂಕ್-2047 ಆಗಲಿವೆ. ತುಮಕೂರು ನಗರ ಗ್ರಂಥಾಲಯ ಜಿಲ್ಲಾ ಮಟ್ಟದ ನಾಲೇಡ್ಜ್ ಬ್ಯಾಂಕ್-2047 ಆದರೇ, ವಿಶ್ವ ವಿದ್ಯಾನಿಲಯ ರಾಜ್ಯ ಮಟ್ಟದ ನಾಲೇಡ್ಜ್ ಬ್ಯಾಂಕ್-2047 ಕ್ಕೆ ಮುನ್ನುಡಿ ಬರೆಯಲಿದೆ.

ಸಭೆ ನಡೆಯುವಾಗ ಆಗಮಿಸಿದವರೊಂದಿಗೆ ತೆಗೆದ ಚಿತ್ರಗಳು.