22nd June 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತ್ ಮತ್ತು ಪ್ರತಿ ಬಡಾವಣೆಯಲ್ಲಿ ಇರುವ ಅಂಗನವಾಡಿ, 1 ರಿಂದ 10 ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿನ, ಮೂಲಭೂತ ಸೌಕರ್ಯಗಳ ಜೊತೆಗೆ, ಮಾನವೀಯ ಮೌಲ್ಯಗಳ ವ್ಯವಸ್ಥೆ ಉತ್ತಮವಾಗಿ ಜಾರಿಯಾಗಬೇಕು ಎಂದು ತುಮಕೂರು ಜಿಲ್ಲಾ ಪಂಚಾಯತ್ ಸಿಇಓರವರು ಹಾಗೂ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ ಯವರಾದ ಶ್ರೀ ಜಿ.ಪ್ರಭುರವರು ತಮ್ಮ ಅಭಿಲಾಷೆ ವ್ಯಕ್ತ ಪಡಿಸಿದರು.

ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಅವರ ಸಾಧನೆಯ ಮಾಹಿತಿಗಳನ್ನು ಹಂಚಿಕೊಂಡರು, ನಿಜಕ್ಕೂ ಇದೊಂದು ಅತ್ಯುತ್ತಮವಾದ ಆಲೋಚನೆ. ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು ಎಂದು ಬಾಷಣದಲ್ಲಿ ಮಾತ್ರ ಹೇಳದೆ, ವಸ್ತು ಸ್ಥಿತಿ ಅರಿತು ಅಗತ್ಯಕ್ಕೆ ಕೆಲಸ ಮಾಡುವ ಮೂಲಕ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಶ್ರಮಿಸುವುದು ಅಗತ್ಯವಾಗಿದೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸರ್ವಶಿಕ್ಷ ಅಭಿಯಾನದ ಮೂಲಕ, ದಿ.ಅಟಲ್ ಬಿಹಾರಿ ವಾಜಪೇಯಿರವರ ಕಾಲದಲ್ಲಿ, ತುಮಕೂರು ಜಿಲ್ಲೆಗೆ ಸುಮಾರು 422 ಕೋಟಿಗೂ ಹೆಚ್ಚು ಅನುದಾನ ಮಂಜೂರು ಮಾಡಿಸಿದ್ದರ ಬಗ್ಗೆ ಮೆಲುಕು ಹಾಕಿದರು.

ಗ್ರಾಮೀಣ ಜ್ಞಾನ ಕೇಂದ್ರದ ಫೈಲಟ್ ಯೋಜನೆಯನ್ನು ಸಂಸದರ ಆದರ್ಶ ಗ್ರಾಮ ಯೋಜನೆಯ ಎಲ್ಲಾ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆರಂಭಿಸಲು ಸರ್ಕಾರದಿಂದ ಸೂಚನೆ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಲ್.ಐ.ಎಸ್ ಅಕಾಡೆಮಿಯ ಡಾ. ಕೊಣ್ಣೂರ್‍ರವರು, ಡಾ.ರಾಜೆಂದ್ರಕುಮಾರ್‍ರವರು, ಡಾ.ಕಾಂತರಾಜುರವರು, ಡಾ.ಎಸ್.ಎಲ್.ಕಾಡುದೇವರ ಮಠರವರು, ಡಾ.ರಾಘವೇಂದ್ರರವರ ತಂಡಕ್ಕೆ ಸಲಹೆ ನೀಡಿ, ಅವರ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ವರದಿ ಓದಿದ ನಂತರ ನಿಮ್ಮ ಜೊತೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು.

ಜೊತೆಯಲ್ಲಿ ಶ್ರೀ ಟಿ.ಆರ್.ರಘೊತ್ತಮರಾವ್ ರವರು, ಶ್ರೀ ಸತ್ಯಾನಂದ್ ರವರು, ಶ್ರೀ ವೇದಾನಂದಮೂರ್ತಿರವರು,  ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಪಿಡಿಓ ಶ್ರೀಮತಿ ತನುಜರವರು, ಜಿ.ಹೊಸಹಳ್ಳಿ ಗ್ರಾಮಪಂಚಾಯಿತಿ ಪಿಡಿಓ ಇನ್ನೂ ಮುಂತಾದವರು ಇದ್ದರು.