12th September 2024
Share

TUMAKURU:SHAKTHIPEETA FOUNDATION

ರಾಜ್ಯದಲ್ಲಿ ಯಾವುದೇ ಪಕ್ಷ ಆಡಳಿತ ನಡೆಸಲಿ, ಕಳೆದ ಕೆಲವು ವರ್ಷಗಳಿಂದ ರಾಜ್ಯದ ಸಂಸದರನ್ನು ಆಳುವ ಸರ್ಕಾರಗಳು ಕಡೆಗಣಿಸಿವೆ ಎಂದರೆ ತಪ್ಪಾಗಲಾರದು.

ನಾನು ಕಳೆದ ಒಂದು ವಾರ ದೆಹಲಿಯಲ್ಲಿ ಇದ್ದೆ. ಈ ಸಂಸದರ ಸಭೆ ನಡೆದ ಹೋಟೆಲ್‍ಗೂ ಹೋಗಿ ಗಮನಿಸಿದೆ. ಹಲವು ಸಂಸದರೊಂದಿಗೆ ಸಮಾಲೋಚನೆ ನಡೆಸಿದೆ. ಶಾಶ್ವತ ಪರಿಹಾರವೆಂದರೆ

  1. ನೀರು ಸಂಗ್ರಹದ ಆಧಾರದ ಮೇಲೆ ಬಳಕೆಗಾಗಿ ಸಂಕಷ್ಟ ಸೂತ್ರ
  2. ಪ್ರವಾಹದ ನೀರಿನ ಸಂಗ್ರಹ ಮತ್ತು  ಬಳಕೆ.
  3. ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ ನದಿ ನೀರಿನ ಹಂಚಿಕೆ.  ಪ್ರತಿ ಜಿಲ್ಲೆಯಲ್ಲೂ ವಾಟರ್ ಬ್ಯಾಂಕ್/ಬಫರ್ ಡ್ಯಾಂ ನಿರ್ಮಾಣ.

ಈ ಮೂರು ಅಂಶಗಳ ಮೇಲೆ ನ್ಯಾಯಾಲಯಕ್ಕೆ ಮೊಕೊದ್ದಮೆ ಹೂಡುವುದೇ ಸರ್ಕಾರದ ಪ್ರಮುಖ ಅಜೆಂಡಾ ಆಗಬೇಕು.ಸರ್ವಪಕ್ಷಗಳು ಇದರ ಬಗ್ಗೆ ತಮ್ಮ ಸ್ಪಷ್ಟ ನಿಲುವುಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಬೇಕು.

ಇಲ್ಲದೇ ಇದ್ದಲ್ಲಿ ಇದೇ ರೀತಿ ನಾಟಕ ಆಡಿಕೊಂಡು, ಅವರು ಇವರನ್ನು, ಇವರು ಅವರನ್ನು ಟೀಕೆ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಲೇ ಇರಬೇಕು.