27th July 2024
Share

TUMAKURU:SHAKTHIPEETA FOUNDATION

  ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಪರಿಕಲ್ಪನೆ 2047 ಕ್ಕೆ ಭಾರತ ವಿಶ್ವ ಗುರು’ ಆಗಬೇಕಂತೆ, ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಪರಿಕಲ್ಪನೆ ಕರ್ನಾಟಕ ರಾಜ್ಯ ಏಷ್ಯಾದಲ್ಲಿಯೇ ನಂಬರ್ ಒನ್ ರಾಜ್ಯ’ ವಾಗಬೇಕಂತೆ, ಉಪಮುಖ್ಯ ಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ‘ಬ್ರ್ಯಾಂಡ್ ಬೆಂಗಳೂರು’ ಮಾಡಬೇಕಂತೆ.

ನಿಕಟ ಪೂರ್ವ ಮುಖ್ಯಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಪ್ರಕಾರ ಮುಂದಿನ ಯುಗ ಜ್ಞಾನಯುಗ’ ಆಗಬೇಕಂತೆ. ಮಾಜಿ ಮುಖ್ಯಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ  ಪ್ರಕಾರ ಕರ್ನಾಟಕ ರಾಜ್ಯ ಸಮಗ್ರ ಅಭಿವೃದ್ಧಿ’ ಆಗಬೇಕಂತೆ, ಮಾಜಿ ಮುಖ್ಯಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರ ಪ್ರಕಾರ ಇಡೀ ರಾಜ್ಯವೇ ಐಟಿಬಿಟಿ ಹಬ್’ ಆಗಬೇಕಂತೆ, ಮಾಜಿ ಮುಖ್ಯಮಂತ್ರಿಯವರು ಮತ್ತು ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ.ದೇವೇಗೌಡರು ಮತ್ತು ಶ್ರೀ ಹೆಚ್.ಡಿ.ಕುಮಾರ ಸ್ವಾಮಿರವರ ಪ್ರಕಾರ ರಾಜ್ಯ ಸಮಗ್ರ ನೀರಾವರಿ’ ಆಗಬೇಕಂತೆ,

ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರ, ಪ್ರಕಾರ ಕರ್ನಾಟಕ ‘ರಾಜ್ಯ ಡ್ರಗ್ ಮುಕ್ತ ರಾಜ್ಯ’ ವಾಗಬೇಕಂತೆ, ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣವರ ಪ್ರಕಾರ ರಾಜ್ಯದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಹಾಸ್ಟೆಲ್ ನಿರ್ಮಾಣ’ ಮಾಡಬೇಕಂತೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಪ್ರಕಾರ ಇವರೆಲ್ಲರ ಅನಿಸಿಕೆ ಜೊತೆಗೆ, ಇಡೀ ರಾಜ್ಯ ನಿಖರವಾದ ಡಾಟಾ ರಾಜ್ಯ’ ವಾಗಬೇಕಂತೆ. ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ಪಡೆದ ರಾಜ್ಯವಾಗಬೇಕಂತೆ.

ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಪ್ರಕಾರ, ತುಮಕೂರು ನಗರ ವಿಧಾನಸಭಾ ಕ್ಷೇತ್ರವೂ ಸೇರಿದಂತೆ, ತುಮಕೂರು ಜಿಲ್ಲೆ ನಿರುದ್ಯೋಗ ರಹಿತರ ಜಿಲ್ಲೆ ಯಾಗಬೇಕಂತೆ. ಪೂರಕವಾಗಿ ತುಮಕೂರು ನಗರ ಗ್ರಂಥಾಲಯದಲ್ಲಿ ಯೋಜನೆ ರೂಪಿಸಬೇಕಂತೆ.

  ಅದೇ ರೀತಿ ರಾಜ್ಯದ ಎಲ್ಲಾ ಮಾಜಿ ಮುಖ್ಯಮಂತ್ರಿಯವರ, ಎಲ್ಲಾ ರಾಜಕೀಯ ಪಕ್ಷಗಳ. 28 ಜನ ಲೋಕಸಭಾ ಸದಸ್ಯರ, 13 ಜನ ರಾಜ್ಯಸಭಾ ಸದಸ್ಯರ, 225 ಜನ ವಿಧಾನಸಭಾ ಸದಸ್ಯರ, 75 ವಿಧಾನಪರಿಷತ್ ಸದಸ್ಯರ, ದೆಹಲಿ ವಿಶೇಷ ಪ್ರತಿ ನಿಧಿಯವರ ಹಾಗೂ ರಾಜ್ಯದಲ್ಲಿ ವಾಸವಿರುವ ಪ್ರತಿಯೊಂದು ಧರ್ಮ, ಜಾತಿ ಉಪಜಾತಿಯವರ ಜ್ಞಾನದಾನಿಗಳ ಮಾರ್ಗದರ್ಶನದಂತೆ. ರಾಜ್ಯದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಲು ಶಕ್ತಿಪೀಠ ಫೌಂಡೇಷನ್ ಕಟಿ ಬದ್ಧವಾಗಿದೆ.

ನಮ್ಮ ಮನವಿಗೆ ಸ್ಪಂಧಿಸಿದ ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಎಂ.ಓ.ಯು ಮಾಡಿಕೊಂಡು ಶ್ರಮಿಸಲು ಮಾತು ಕತೆ ನಡೆಯುತ್ತಿದೆ. ಶ್ರೀ ಜಿ.ಎಸ್.ಬಸವರಾಜ್ ರವರ ಪ್ರಕಾರ ಆರಂಭದಲ್ಲಿ ತುಮಕೂರು ಜಿಲ್ಲೆಯನ್ನು ಫೈಲಟ್ ಪ್ರಾಜೆಕ್ಟ್ ಆಗಿ ತೆಗೆದು ಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಭರದ ಸಿದ್ಧತೆ ಆರಂಭವಾಗಿದೆ.

ತುಮಕೂರು ನಗರ ವಿಧಾನ ಕ್ಷೇತ್ರ ನಮ್ಮ ಕನಸುಗಳ ಅನುಷ್ಠಾನಕ್ಕೆ  ಮೊದಲ ಕ್ಷೇತ್ರವಾಗಲಿದೆ. ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಪ್ರಸ್ತಾವನೆ ಹಾಗೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲು ಕಾರ್ಯತಂತ್ರಗಳ ಬಗ್ಗೆ ಸಿದ್ಧಪಡಿಸುತ್ತಿರುವ ಅಧ್ಯಯನ ವರದಿಗೂ ರಾಜ್ಯ ಸರ್ಕಾರದಿಂದ ಅನುದಾನ ಪಡೆಯುತ್ತಿಲ್ಲ.

ಸರ್ಕಾರದಿಂದÀ ಅನುದಾನ ಮಂಜೂರಾಗುವವರೆಗೂ, ಶಕ್ತಿಪೀಠ ಫೌಂಡೇಷನ್ ಕಚೇರಿ ಬಾಡಿಗೆ, ಸಾರಿಗೆ ವೆಚ್ಚ ಮತ್ತು ಪ್ರತಿ ದಿನದ ಖರ್ಚು ವೆಚ್ಚಗಳನ್ನು, ಪ್ರತಿ ತಿಂಗಳು ಶಕ್ತಿಪೀಠ ಫೌಂಡೇಷನ್ ಬ್ಯಾಂಕ್ ಖಾತೆಗೆ ಶಾಸಕರು ವೈಯಕ್ತಿಕವಾಗಿ ಅಥವಾ ಸಿ.ಎಸ್.ಆರ್ ಫಂಡ್‍ನಿಂದ ಅಥವಾ ದಾನಿಗಳಿಂದ ಅಥವಾ ಸ್ಥಳೀಯ ಸಂಸ್ಥೆಗಳಿಂದ ಪಾವತಿಸಲು ಎಂ.ಓ.ಯು ಮಾಡಿಕೊಳ್ಳಲು ಆಲೋಚನೆ ನಡೆಸುತ್ತಿದ್ದೇನೆ.

ಇನ್ನೂ ಮುಂದೆ ನನ್ನ ಕುಟುಂಬದ ಆರ್ಥಿಕ ಹೊಣೆಗಾರಿಕೆಯಿಂದ ಬಿಡುಗಡೆ ಆಗಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಫ್ತಿಗೂ, ಆಯಾ ವ್ಯಾಪ್ತಿಯ ವಿಶ್ವ ವಿದ್ಯಾನಿಲಯಗಳ ಸಹಭಾಗಿತ್ವದೊಂದಿಗೆ   ಪಕ್ಕಾ ಅಧ್ಯಯನ ವರದಿ ಸಿದ್ಧ ಪಡಿಸಲು ಮತ್ತು ಸರ್ಕಾರಗಳ ವರದಿ ವಿಶ್ಲೇಷಣೆ ಮಾಡಲು,  ಆಯಾ ಕ್ಷೇತ್ರದ ಶಾಸಕರೊಂದಿಗೆ ಎಂ.ಓ.ಯು ಮಾಡಿಕೊಳ್ಳಲು ಸಾದಕ-ಭಾದಕಗಳ ಬಗ್ಗೆ ಚರ್ಚೆ ಆರಂಭವಾಗಿದೆ.

ಪ್ರಾಯೋಗಿಕವಾಗಿ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು, ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ತ್ರಿಪಕ್ಷೀಯ ಒಪ್ಪಂದ’ ಮಾಡಿಕೊಳ್ಳಲು ಚಿಂತನೆ ನಡೆಯುತ್ತಿದೆ.

ಅಕ್ಟೋಬರ್ 2 ಗಾಂಧಿ ಜಯಂತಿ ದಿನದಿಂದ, ಪ್ರತಿ ತಿಂಗಳ ದಿನಚರಿ ಡೈರಿ ಮತ್ತು ಖರ್ಚು ವೆಚ್ಚಗಳನ್ನು ಪಾರದರ್ಶಕವಾಗಿ ಪೇಪರ್ನಲ್ಲಿ ಪ್ರಕಟಿಸಲಾಗುವುದು.

ಬಹುತೇಕ ಒಂದು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಲು ಆರಂಭವಾಗುವ ಪ್ರಥಮ ನಾಲೇಡ್ಜ್ ಬ್ಯಾಂಕ್-2047 ದಿನಾಂಕ:15.11.2023 ರಿಂದ ಇನ್ನೂ ನಿರ್ಮಾಣ ಹಂತದಲ್ಲಿ ಇರುವ ಶಕ್ತಿಭವನ  ಕಟ್ಟಡದಲ್ಲಿ ತುಮಕೂರಿನ ಅತ್ಯಂತ ಹಿರಿಯ ನಾಗರೀಕರ ನೇತೃತ್ವದಲ್ಲಿ ಆರಂಭವಾಗಲಿದೆ.

ಶಾಸಕರ ಅಧ್ಯಕ್ಷತೆಯ, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಪೀಠ’ ವೂ ಇದೇ ಕಟ್ಟಡದಲ್ಲಿ ಆರಂಭವಾಗಲಿದೆ. ಇದೂ 224 ವಿಧಾನ ಸಭಾ ಕ್ಷೇತ್ರಕ್ಕೂ ಫೈಲಟ್ ಯೋಜನೆ ಆಗಲಿದೆ.

ಎಲ್ಲವೂ ತುಮಕೂರು ವಿಶ್ವ ವಿದ್ಯಾನಿಲಯ ಆರಂಭಿಸುವ ತುಮಕೂರು ರೀಸರ್ಚ್ ಫೌಂಡೇಷನ್’ ಅಡಿಯಲ್ಲಿಯೇ ಕಾರ್ಯ ನಿರ್ವಹಿಸಲು ರೂಪು ರೇಷೆ ಸಿದ್ಧವಾಗುತ್ತಿದೆ. ಸರ್ಕಾರದ ಅನುಮತಿ ಪಡೆಯಯವರಿಗೂ ಕಾಯುವ ಬದಲು ಶಕ್ತಿಪೀಠ ಫೌಂಡೇಷನ್ ಮೊದಲ ನಾಲೇಡ್ಜ್ ಬ್ಯಾಂಕ್-2047 ಅನ್ನು ಆರಂಭಿಸಲಿದೆ.

ಈ ಹಿನ್ನಲೆಯಲ್ಲಿ ತಮ್ಮಗಳ ಸಲಹೆ, ಮಾರ್ಗದರ್ಶನ ನೀಡಲು ಬಹಿರಂಗ ಮನವಿ.