27th July 2024
Share

TUMAKURU:SHAKTHIPEETA FOUNDATION

WORLD  RECORDS UNIVERSITY  ನೀಡುವ ಗಿನ್ನೀಸ್ ಅಥವಾ ಲಿಮ್ಕಾ’ ಅಥವಾ ಯಾವುದಾದ ರೂ ದಾಖಲೆ ಮಾಡುವ ಮೂಲಕ, ತುಮಕೂರು ರೀಸರ್ಚ್ ಫೌಂಡೇಷನ್’ ಕಾರ್ಯಾರಂಭ ಮಾಡಲು, ಶಕ್ತಿಪೀಠ ಫೌಂಡೇಷನ್, ತುಮಕೂರು ವಿಶ್ವವಿದ್ಯಾನಿಲಯಕ್ಕೆ ಸಲಹೆ ನೀಡಿದೆ. ಈ ದಾಖಲೆ ತುಮಕೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕ ವೃಂದ, ನೌಕರರಿಗೆ ಸಲ್ಲಬೇಕಿದೆ.

ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಗೆ 6 ನೇ ತರಗತಿಯಿಂದ ಎಲ್ಲಾ ವಿಧವಾದ ಪಿಜಿ ವರೆಗೂ ಶಾಲಾ-ಕಾಲೇಜುವಾರು ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ರಚಿಸುವ ಸದಸ್ಯರಾಗ ಬಹುದು.

ನಾವು ಇನ್ನೂ ಸ್ವಲ್ಪ ಮುಂದೆ ಹೋಗಿ, ಪ್ರತಿಯೊಂದು ಗ್ರಾಮ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಪ್ರತಿಯೊಂದು ಬಡಾವಣೆಗಳವಾರು ಅಥವಾ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಸರ್ಕಾರ 2014 ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ರಚಿಸಿರುವ,  ನಮೂನೆ-1 ರ ಬ್ಲಾಕ್ ಮತ್ತು ಉಪ ಬ್ಲಾಕ್ ವಾರು, ಆಯಾ ವ್ಯಾಪ್ತಿಯ ಎಲ್ಲಾ ಹಂತದ ವಿದ್ಯಾರ್ಥಿಗಳು, ಆಯಾ ವ್ಯಾಪ್ತಿಯ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ಸದಸ್ಯರಾಗಿ ಸೇವೆ ಸಲ್ಲಿಸ ಬಹುದಾಗಿದೆ.

ಬ್ಲಾಕ್/ಉಪಬ್ಲಾಕ್ ವ್ಯಾಪ್ತಿ ಬಹಳ ಪ್ರಮುಖವಾಗಲಿದೆ. ರಾಜ್ಯ ವಕ್ಕಲಿಗರ ಸಂಘ ಸೇರಿದಂತೆ ಹಲವಾರು ಜಾತಿಗಳ ಪ್ರಮುಖರು ಸಮೀಕ್ಷೆಗೆ ವಿರೋಧ ಮಾಡುತ್ತಿರುವ ಅಂಶಗಳಿಗೆ ನಿಖರವಾದ ಪಕ್ಕಾ ವಿಶ್ಲೇಷಣೆ ಮಾಡುವ ಮೂಲಕ ನಮ್ಮ ವಿದ್ಯಾರ್ಥಿಗಳೇ ನ್ಯಾಯ ಒದಗಿಸಬಹುದಾಗಿದೆ.

ಜೊತೆಗೆ 2047 ರವರೆಗೂ ಆಯಾ ವ್ಯಾಪ್ತಿಯ ವ್ಯಕ್ತಿಗಳ, ಕುಟುಂಬಗಳ ಮತ್ತು ಒಂದು ಇಂಚು ಭೂ ಮಿಯಲ್ಲಿ, ಯಾವ ಇಲಾಖೆಯ ಮೂಲಕ ಏನೇನು ಮಾಡಬೇಕು, ಎಂಬ ಬಗ್ಗೆ ಊರಿಗೊಂದು/ಬಡಾವಣೆಗೊಂದು ಪುಸ್ತಕದಲ್ಲಿ ರಚಿಸಿ, ಪ್ರಗತಿ ಪರಿಶೀಲನೆ ಮಾಡಲು ಸೂಕ್ತವಾಗಿರುತ್ತದೆ.

ಶ್ರೀ ನರೇಂದ್ರಮೋದಿಯವರು ದೆಹಲಿಯಲ್ಲಿ 2047 ಕ್ಕೆ ಭಾರತ ವಿಶ್ವ ಗುರು ಆಗಬೇಕು ಎಂತಲೂ, ಶ್ರೀ ಸಿದ್ಧರಾಮಯ್ಯನವರು ಬೆಂಗಳೂರಿನಲ್ಲಿ 2047 ಕ್ಕೆ ಏಷ್ಯಾದಲ್ಲೇ ಕರ್ನಾಟಕ ರಾಜ್ಯ ನಂಬರ್ ಆಗ ಬೇಕು ಎಂದು ಹೇಳಿದರೆ ಕೆಲಸ ಆಗುವುದಿಲ್ಲಾ.

ಅವರಿಬ್ಬರ ಕರೇ ಮೇರೆಗೆ, ದೇಶದ ಪ್ರತಿಯೊಬ್ಬ ವ್ಯಕ್ತಿ, ಕುಟುಂಬ ಮತ್ತು ಸಮುದಾಯದ ನೀಡ್ ಬೇಸ್ಡ್ ಅಭಿವೃದ್ಧಿ  ಚಿಂತನೆ ನಡೆಸುವ ಮತ್ತು ಅನುಷ್ಠಾನಕ್ಕೆ ಶ್ರಮಿಸಿದರೇ ಮಾತ್ರ ಅವರಿಬ್ಬರ ಪರಿಕಲ್ಪನೆ’ ಗೆ ಒಂದು ಅರ್ಥ ಬರಲಿದೆ.

 ಈ ಬ್ಲಾಕ್/ಉಪಬ್ಲಾಕ್ ವ್ಯಾಪ್ತಿಯ ಹೆಸರಿನಲ್ಲಿ ರೀಸರ್ಚ್ ಫೌಂಡೇಷನ್  ಸ್ಥಾಪಿಸಿ, 2047 ರವರೆಗೂ ತುಮಕೂರು ರೀಸರ್ಚ್ ಫೌಂಡೇಷನ್ ತಮ್ಮ ಮಕ್ಕಳಂತೆ ಪೋಶಿಸಬೇಕಿದೆ. ಸರ್ಕಾರಗಳ, ಚುನಾಯಿತ ಜನಪ್ರತಿನಿಧಿಗಳಿಗೆ, ಈ ವ್ಯಾಪ್ತಿಯ ಕೂಗೂ ಕೇಳಿಸಬೇಕಿದೆ.

ತುಮಕೂರು ಜಿಲ್ಲೆಯ ಇಷ್ಟು ಪ್ರದೇಶಗಳ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್ ಹಾಗೂ ಈ ವ್ಯಾಪ್ತಿಯ ಡಾಟಾ ಮಿತ್ರ ಸಮಿತಿಗಳ, ಒಂದೇ ದಿನ, ಏಕಕಾಲದಲ್ಲಿ,  ದೇಶದ ದೊರೆ ಶ್ರೀ ಮೋದಿಯವರು ಮತ್ತು ರಾಜ್ಯದ ದೊರೆ ಶ್ರೀ ಸಿದ್ಧರಾಮಯ್ಯನವರು ಉದ್ಘಾಟನೆ ಮಾಡುವುದೇ ಒಂದು ‘ವಿಶ್ವ ದಾಖಲೆ ಆಗಲೇ ಬೇಕು ಎಂಬುದು ಪ್ರಮುಖ ಗುರಿ. 

ಇದು ಮುಂದಿನ ನೂರು ದಿನದಲ್ಲಿ ಪೂರ್ಣಗೊಳ್ಳಲು, ಜಿಲ್ಲೆಯ ಶಾಲಾ ಕಾಲೇಜುಗಳ ಒಂದು ಲಕ್ಷ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದ, ನೌಕರ ವೃಂದ ಶ್ರಮಿಸಲು ಜಾಗೃತಿ ಮೂಡಿಸುವುದೇ ಶಕ್ತಿಪೀಠ ಫೌಂಡೇಷನ್ ಆಧ್ಯತೆ ಆಗಿದೆ.

ತುಮಕೂರು ವಿಶ್ವ ವಿದ್ಯಾನಿಲು ವಿಶ್ವ ದಾಖಲೆ ಒಂದು ಉಪಸಮಿತಿ ರಚಿಸಿ, ಶೀಘ್ರವಾಗಿ ರೂಪುರೇಷೆ ನಿರ್ಧರಿಸಲು ಮುಂದಾಗಬೇಕಿದೆ.