9th October 2024
Share

TUMAKURU:SHAKTHIPEETA FOUNDATION

  ತುಮಕೂರು ವಿಶ್ವವಿದ್ಯಾನಿಲಯ ಮತ್ತು ತುಮಕೂರಿನ ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ 100 ನೇ ವóರ್ಷದ ಸ್ವಾಂತತ್ರ್ಯ ಅಂದರೆ 2047 ನೇ ಇಸವಿ ವೇಳೆಗೆ, ತುಮಕೂರು ಜಿಲ್ಲೆ ಹೇಗೆ ಅಭಿವೃದ್ಧಿ ಹೊಂದಬೇಕು ಎಂಬ ಅಧ್ಯಯನ ಮಾಡಲು ತುಮಕೂರು ರೀಸರ್ಚ್ ಫೌಂಡೇಷನ್– 2047 ಸ್ಥಾಪಿಸಿರುವುದು ನಿಜಕ್ಕೂ ಹರ್ಷ ತಂದಿದೆ.

  ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸಂಭಂಧಿಸಿದ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ, ತಾವೂ ಕೈಗೊಳ್ಳಲಿರುವ ಎಲ್ಲಾ ಅಧ್ಯಯನ ವರದಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಮೊದಲು ನಾನು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷನಾಗಿ ಕೈಗೊಂಡಿರುವ, ದಿಶಾ ಸಮಿತಿ ನಿರ್ಣಯಗಳ ಅನುಪಾಲನಾ ವರದಿ ವಿಶ್ಲೇಷಣೆ’ ಮಾಡುವುದು ಮತ್ತು ಒಬ್ಬ ಲೋಕಸಭಾ ಸದಸ್ಯನಾಗಿ ಏನೇನು ಮಾಡಬಹುದು ಎಂಬ ಅಂಶಗಳ ವರದಿ’ ನೀಡುವ ಬಗ್ಗೆ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ’ ಸಲ್ಲಿಸುವ ಬಗ್ಗೆ, ಸಮಾಲೋಚನೆ ನಡೆಸಲು ಸೂಕ್ತ ಸಮಯ ನಿಗದಿ ಮಾಡಲು ಸೂಚಿಸಿದ್ದಾರೆ.

 ತುಮಕೂರು ರೀಸರ್ಚ್ ಫೌಂಡೇಷನ್– 2047 ಗೆ ನನ್ನ ಕಡೆಯಿಂದ ಏನೇನು, ಆಗಬೇಕು ಎಂಬ ಪಟ್ಟಿ ನೀಡಲು ಸೂಚಿಸಿದ್ದಾರೆ.

 ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುರವರು, ಶ್ರೀಮತಿ ಮಂಗಳಗೌರಿರವರು, ಶ್ರೀ ಪರಶುರಾಮ್ ರವರೊಂದಿಗೆ, ತುಮಕೂರು ಜಿಲ್ಲೆಯ ಜಿಲ್ಲಾ ಉಸ್ತವಾರಿ ಸಚಿವರು, ಸಚಿವರು, ಲೋಕಸಭಾ ಸದಸ್ಯರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರೊಂದಿಗೆ ಒನ್ಟುಒನ್  ಸಮಾಲೋಚನೆ ನಡೆಸಬೇಕೆ ಅಥವಾ ಒಟ್ಟಾಗಿ ಆಹ್ವಾನಿಸಿ ಸಮಾಲೋಚನೆ ನಡೆಸಬೇಕೆ ಎಂಬ ಬಗ್ಗೆ ಕುಳಿತು ಒಂದು ಸುತ್ತಿನ  ಮಾತು ಕತೆ ನಡೆಸಲಾಗಿದೆ.

ಓದುಗರು ತಮ್ಮ ಅಭಿಪ್ರಾಯ ತಿಳಿಸುವಿರಾ ?