6th December 2024
Share

TUMAKURU:SHAKTHIPEETA FOUNDATION

ತುಮಕೂರು ನಗರದಲ್ಲಿ ವಾಸಿಸುವ ಪ್ರತಿಯೊಬ್ಬರಲ್ಲೂ, ತುಮಕೂರು ನಗರದ ಶಾಸಕನಾದ ಜಿ.ಬಿ.ಜ್ಯೋತಿಗಣೇಶ್ ಮನವಿ.

ನನಗೆ ಮೂರು ಭಾರಿ ಮತದಾನ ಮಾಡಿದ್ದೀರಿ, ಒಂದು ಭಾರಿ ಸೋಲು ಅನುಭವಿಸಿದರೂ, ಎರಡು ಭಾರಿ ಗೆಲುವು ತಂದು ಕೊಟ್ಟೀದ್ದೀರಿ.

ನನ್ನ ಕೈಲಾದಷ್ಟು ಕೆಲಸವನ್ನು ಕಳೆದ ಶಾಸಕನ ಅವಧಿಯಲ್ಲಿ ಪ್ರಾಮಾಣಿಕವಾಗಿ ಮಾಡಿದ್ದೇನೆ. ನನಗೆ ಕಳೆದ ಚುನಾವಣೆಯಲ್ಲಿ ಕೆಲವು ಕಹಿ ಅನುಭವವೂ ಆಗಿದೆ.

ಈಗ ನಾನು ಒಂದು ಅತ್ಯುತ್ತಮವಾದ ಯೋಜನೆ ರೂಪಿಸಲು ಯೋಚಿಸುತ್ತಿರುವಾಗಲೇ, ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ತುಮಕೂರಿನ ಶಕ್ತಿಪೀಠ ಪೌಂಡೇಷನ್ ಸಹಭಾಗಿತ್ವದಲ್ಲಿ ತುಮಕೂರು ರೀಸರ್ಚ್ ಫೌಂಡೇಷನ್ -2027 ಸ್ಥಾಪಿಸಿದ್ದಾರೆ. ಹೆಸರೇ ಹೇಳುವಂತೆ 2047 ಕ್ಕೆ ತುಮಕೂರು ನಗರ ಸೇರಿದಂತೆ, ಜಿಲ್ಲೆಯ ಪ್ರತಿಯೊಂದು ಬಡಾವಣೆ ಮತ್ತು ಗ್ರಾಮಗಳ ಅಭಿವೃದ್ಧಿ ಅಧ್ಯಯನದ ಗುರಿ ಹೊಂದಿದ್ದಾರೆ.

ದಿನಾಂಕ:02.10.2023 ರಂದು ತುಮಕೂರು ವಿಶ್ವ ವಿದ್ಯಾನಿಲಯದ ತುಮಕೂರು ನಗರದ ಕ್ಯಾಂಪಸ್‍ನಲ್ಲಿ ಬೆಳಿಗ್ಗೆ 8 ಘಂಟೆಗೆ ಅತ್ಯಂತ ಸರಳವಾಗಿ, ಉದ್ಘಾಟನೆ ಮಾಡಲಿದ್ದಾರೆ. ನನ್ನನ್ನು ಈ ಸಮಾರಂಭಕ್ಕೆ ವೈಯಕ್ತಿಕವಾಗಿ ಆಹ್ವಾನ ನೀಡಿಲ್ಲವಾದರೂ, ನಾನು ಭಾಗವಹಿಸುತ್ತೇನೆ.

ಅವರ ಪರಿಕಲ್ಪನೆ ಬಗ್ಗೆ ಓದಿದ್ದೇನೆ, ನನಗಂತೂ ಬಹಳ ಇಷ್ಟವಾಗಿದೆ. ಒಬ್ಬ ವ್ಯಕ್ತಿಯ, ಒಂದು ಕುಟುಂಬದ ಮತ್ತು ಒಂದಿಂಚು ಭೂಮಿಯ, ಅಂದರೆ ಸರ್ಕಾರದ್ದಾಗಿರಲಿ ಅಥವಾ ಖಾಸಗಿಯವರದಾಗಲಿ, ಈಗ ಸರ್ಕಾರದ ಬಳಿ ಸಂಗ್ರಹಿಸಿರುವ, ಪ್ರತಿಯೊಂದು ಮಾಹಿತಿ ಸರಿಯಾಗಿ ಇದೆಯೋ ಅಥವಾ ಸರಿಯಾಗಿ ಇಲ್ಲವೇ ಎಂಬ ಬಗ್ಗೆ, ನಮ್ಮ ವಿದ್ಯಾರ್ಥಿಗಳ ಮೂಲಕ ಡಾಟಾ ವಿಶ್ಲೇಷಣೆ ಮಾಡುವುದಲ್ಲದೆ, 1947 ಕ್ಕಿಂತ ಮೊದಲು ಹೆಗಿತ್ತು, 2023 ರವರೆಗೆ ಹೇಗೆ ಅಭಿವೃದ್ಧಿ ಹೊಂದಿದೆ, 2047 ಆ ವ್ಯಾಪ್ತಿಯ ಜನರ ಅನಿಸಿಕೆಯಂತೆ ಹೇಗೆ ಅಭಿವೃದ್ಧಿ ಹೊಂದಬೇಕು ಎಂಬ ಕರಾರು ವಕ್ಕಾದ ರಿಯಲ್ ಟೈಮ್ ಡಾಟಾ ಸಂಗ್ರಹ ಮಾಡಲಿದ್ದಾರೆ.

ಡಾಟಾಗಳನ್ನು  ಸರ್ಕಾರದ ಹಲವಾರು ಸಂಸ್ಥೆಗಳು ಅಂದರೆ, ಎನ್..ಸಿ, ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್, ಎನ್.ಆರ್.ಡಿ.ಎಂ.ಎಸ್, ಕೆ.ಎಂ.ಡಿ.ಎಸ್. ಕುಟುಂಬ, ಮಾಹಿತಿ ಕಣಜ, ಡಾಟಾ ಲೇಕ್, ಅಂಕಿ ಅಂಶಗಳ ಇಲಾಖೆ ಮತ್ತು ವಿವಿಧ ಇಲಾಖೆಗಳಲ್ಲಿ ಮನಸ್ಸಿಗೆ ಬಂದ ರೀತಿಯಲ್ಲಿ ಸಂಗ್ರಹಿಸಿದ್ದಾರೆ ಎಂಬುದು ಸರ್ಕಾರದ ಉನ್ನತ ಅಧಿಕಾರಿಗಳ ಮತ್ತು ಜನರ ಭಾವನೆ.

ಹೀಗೆ ಇರುವ ಡಾಟಾಗಳನ್ನು ಒಂದೇ ಡಾಟಾಒಂದೇ ನಕ್ಷೆ ಘೋಷಣೆಯಡಿಯಲ್ಲಿ ಸಿದ್ಧಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿದೆ. ಪ್ರಸ್ತಾವನೆ ಸಲ್ಲಿಸುವುದಕ್ಕಿಂತ ಮುಂಚೆ ತುಮಕೂರು ಜಿಲ್ಲೆಯ ಫೈಲಟ್ ಯೋಜನೆಯಾಗಿ ಕೈಗೊಂಡು, ಒಂದೆರಡು ಭಾಗವನ್ನು ಪೂರ್ಣಗೊಳಿಸಿದ ಅನುಭವವನ್ನೂ ಪಡೆಯಲಿದ್ದಾರೆ.

ಮೂಲ ತುಮಕೂರು ಗ್ರಾಮವನ್ನು ಆಯ್ಕೆ ಮಾಡಿಕೊಂಡಿರುವುದು ನನಗೂ ಹೆಮ್ಮ ಎನಿಸಿದೆ. ಈ ನಕ್ಷೆಯನ್ನು ಗಮನಿಸಿದಾಗ ತುಮಕೂರು-2288.98 ಎಕರೆ ಮತ್ತು ತುಮಕೂರು ಅಮಾನಿಕೆರೆ-1468.89 ಎಕರೆಯ ಎರಡು ಗ್ರಾಮಗಳ ನಕ್ಷೆ ಇವೆ.

ಇದರಲ್ಲಿ ಜನವಸತಿ ಪ್ರದೇಶ 258.85 ಎಕರೆ ಇದೆ. ಇದು ಯಾವ ಸಾಲಿನ ವಿಲೇಜ್ ಮ್ಯಾಪ್ ಎಂಬ ಬಗ್ಗೆಯೂ ಅಧ್ಯಯನ ನಡೆದಾಗ ಮಾತ್ರ 1947 ಕ್ಕಿಂತ ಮೊದಲು ಇದ್ಧ ನಿಖರವಾದ ಮಾಹಿತಿ ದೊರೆಯಲಿದೆ.

ಈಗ ಬಹುಷಃ 12500 ಎಕರೆಯಲ್ಲಿ ತುಮಕೂರು ಬೆಳೆದಿದೆ. ಈ ಎಲ್ಲಾ ಮಾಹಿತಿ ಅಧ್ಯಯನ ಮತ್ತು ಸಂಶೋಧನೆ ಮಾಡಲಿದ್ದಾರೆ. ಮೊದಲು ಇದ್ದ ಕುಟುಂಬಗಳು ಮತ್ತು ನಂತರ ತುಮಕೂರಿಗೆ ವಲಸೆ ಬಂದ ಕುಟುಂಬಗಳ ಮಾಹಿತಿಯೂ ಲಭ್ಯವಾಗಲಿದೆ.

ಅಷ್ಟೆ ಅಲ್ಲಾ ಪ್ರತಿಯೊಬ್ಬ ವ್ಯಕ್ತಿಯ, ಪ್ರತಿಯೊಂದು ಕುಟುಂಬ ಮನವಿಯನ್ನು, ಆಯಾ ವ್ಯಾಪ್ತಿಯ ಜನರ ಭಾವನೆಗಳನ್ನು ಸಂಗ್ರಹಿಸಿ, 2047 ರ ಅವಧಿಗೆ ಎಲ್ಲವನ್ನೂ ಪೂರ್ಣಗೊಳಿಸುವ ಅನುಷ್ಠಾನ ಸಮಿತಿಗಳು ಇರಲಿದೆ.

ಯೋಜನೆ ಆದರೇ ಹೇಗೆ ಆಯಿತು, ಸಾದ್ಯವಾಗದೇ ಇದ್ದರೆ ಏಕೆ ಆಗಲಿಲ್ಲ ಎಂಬ ಮಾಹಿತಿಯೂ ದೊರೆಯಲಿದೆ. ಇದಕ್ಕಿಂತ ‘ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ದೊರಕಿಸಲು ಬೇರೆ ಮಾರ್ಗಗಳು ಇದ್ದರೂ ಅದನ್ನು ಅಳವಳಿಡಿಸಿ ಕೊಳ್ಳಲಿದ್ದಾರೆ.

ನನ್ನ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಭಾಗಗಳಿಗೂ ನಾನು ಅಧಿಕಾರಿಗಳ ಸಮ್ಮುಖದಲ್ಲಿ ಬರಲಿದ್ದೇನೆ, ಎಲ್ಲಾ ಬಡಾವಣೆಗಳ ನಾಗರೀಕ ಸಮಿತಿಗಳ ಮೂಲಕ, ವಿದ್ಯಾರ್ಥಿಗಳ ನೇತೃತ್ವದಲ್ಲಿ ಪಕ್ಕಾ ತುಮಕೂರು ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಬೇಕಿದೆ.

ಇದಕ್ಕೆ ತಗಲುವ ವೆಚ್ಚವನ್ನು ಸ್ಥಳೀಯ ಸಂಸ್ಥೆಗಳಿಂದ ಅಥವಾ ಸರ್ಕಾರಗಳಿಂದ ಅಥವಾ ದಾನಿಗಳಿಂದ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಆದ್ದರಿಂದ ಗಾಂಧಿ ಜಯಂತಿಯಂದು ನಡೆಯುವ, ಸರಳ ಕಾರ್ಯಕ್ರಮಕ್ಕೆ ಆಸಕ್ತರು ಭಾಗವಹಿಸಲು ಮನವಿ. ಅಂದು ಬೆಳಿಗ್ಗೆ ನಾನೂ ಸಹ ವಿಶ್ವ ವಿದ್ಯಾನಿಲಯದ ಕ್ಯಾಂಪಸ್ನಲ್ಲಿ ವಾಕ್ ಮಾಡಿ, ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ.

ನಂತರ ತುಮಕೂರು ನಗರಾದ್ಯಾಂತ ಈ ಕಾರ್ಯಕ್ರಮ ಮುಂದುವರೆಯಲಿದೆ. ಇದಕ್ಕೆ ಒಂದು ಸ್ಪಷ್ಟ ರೂಪುರೇಷೆ ಸಿದ್ಧಪಡಿಸಲಾಗುವುದು.