27th July 2024
Share

TUMAKURU:SHAKTHIPEETA FOUNDATION

   ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ ಆರಂಭಿಸಿರುವ ತುಮಕೂರು ರೀಸರ್ಚ್ ಫೌಂಡೇಷನ್-2047 ನ ಪದಾಧಿಕಾರಿಗಳು, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಮನವಿ ಸಲ್ಲಿಸಿ ಮಾತುಕತೆ ನಡೆಸಿದರು.

ಸಂಸದರು 100 ದಿವಸದಲ್ಲಿ ರಾಜ್ಯ ಸರ್ಕಾರದ ಮೂಲಕ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮಕೈಗೊಳ್ಳಿ, ನನ್ನ ಅಗತ್ಯವಿದ್ದಾಗ ಯಾವುದೇ ಸಭೆಗೆ, ಯಾವುದೇ ಇಲಾಖೆಗೆ ನಾನು ಬರಲು ಸಿದ್ದನಿದ್ದೇನೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಹಾಗೂ  ತುಮಕೂರು ರೀಸರ್ಚ್ ಫೌಂಡೇಷನ್-2047 ನ ಸಂಸ್ಥಾಪಕರಾದ ಶ್ರೀ ಎಂ.ವೆಂಕಟೇಶ್ವರಲು ರವರಿಗೆ ಸಲಹೆ ನೀಡಿದರು.

ಶ್ರೀ ಎಂ.ವೆಂಕಟೇಶ್ವರಲು ರವರು 60 ದಿವಸದಲ್ಲಿ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಿ, ಪ್ರಜಾಪ್ರಭುತ್ವದ ಹಾದಿಯಲ್ಲಿ ತುಮಕೂರು ಜಿಲ್ಲೆಯ ಮತ್ತು ರಾಜ್ಯದ ವಿವಿಧ ವರ್ಗದವರ, ಹಲವಾರು ಸಭೆ ನಡೆಸಿ   ಪ್ರಸ್ತಾವನೆಯನ್ನು, ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಸ್ವಯಂ ಕಾಲಮಿತಿ ನಿದಿಗೊಳಿಸಿ ಕೊಂಡು ಸಂಸದರಿಗೆ ಭರವಸೆ ನೀಡಿದರು.

ಈ ಯೋಜನೆ ನನ್ನ ಸಂಸದರ, ಈ ಅವಧಿಯ ವಿಶೇಷವಾದ ಕನಸಿನ ಯೋಜನೆ. ನಾನು ಅಧ್ಯಕ್ಷನಾಗಿ ನಡೆಸಿದ ದಿಶಾ ಸಮಿತಿ ನಡವಳಿಕೆ ಅಧ್ಯಯನ ಮಾಡಿ, ಎಲ್ಲಾ ವಿಚಾರಗಳನ್ನು ಈಗಾಗಲೇ ನಿರ್ಣಯ ಮಾಡಲಾಗಿದೆ, ಆದ್ದರಿಂದ ಪ್ರತಿವಾರವೂ ಸಭೆ ಆಯೋಜಿಸಿ, ಅಗತ್ಯ ಬಿದ್ದಾಗ ನಾನು ಆ ಸಭೆಗೆ ಬರುತ್ತೇನೆ ಎಂದು ಸಂಸದರು ತಿಳಿಸಿದರು.

ಚಿತ್ರದಲ್ಲಿ ಪ್ರೋ. ಶ್ರೀ ಪರುಶುರಾಮ್ ರವರು, ಇ.ಇ. ಶ್ರೀ ಸುರೇಶ್ ರವರು, ಶ್ರೀ ಉಮಾಶಂಕರ್ ರವರು,  ಇನ್ನೂ ಮುಂತಾದವರು ನನ್ನ ಜೊತೆ ಇದ್ದಾರೆ.