12th September 2024
Share

TUMAKURU:SHAKTHIPEETA FOUNDATION

  ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ ಆರಂಭಿಸಿರುವ ತುಮಕೂರು ರೀಸರ್ಚ್ ಫೌಂಡೇಷನ್-2047 ನ ಪದಾಧಿಕಾರಿಗಳು, ತುಮಕೂರು ಸ್ಮಾರ್ಟ್ ಸಿಟಿ ಎಂ.ಡಿ. ಹಾಗೂ ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ಅಶ್ವಿಜ ರವರೊಂದಿಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರವನ್ನು ಪೈಲಟ್ ಯೋಜನೆಯಾಗಿ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಹಾಗೂ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣ ಮಾಡಿರುವ ವಿವಿಧ ಕಟ್ಟಡಗಳನ್ನು ಬಳಸಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಹಾಗೂ  ತುಮಕೂರು ರೀಸರ್ಚ್ ಫೌಂಡೇಷನ್-2047 ನ ಸಂಸ್ಥಾಪಕರಾದ ಶ್ರೀ ಎಂ.ವೆಂಕಟೇಶ್ವರಲು ರವರಿಗೆ, ನೀವೂ ಹೇಳುವುದು ನೋಡಿದರೆ ಇದೊಂದು ಬಹಳ ಅಗತ್ಯವಿರುವ ಯೋಜನೆ, ಪರಿಕಲ್ಪನಾ ವರದಿ ಎಲ್ಲಿ ಸಾರ್ ಎಂದು ಕೇಳುವ ಮೂಲಕ  ಶ್ರೀಮತಿ ಅಶ್ವಿಜರವರು ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು.

ನನ್ನ ಎರಡು ಇಲಾಖೆಗಳ ಅಧಿಕಾರಿಗಳು ಮತ್ತು ನೌಕರರು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದಾರೆ. ನಾವು ಏನು ಮಾಡಬೇಕು ಎಂದು ಕಾಲಮಿತಿಯೊಂದಿಗೆ, ಪರಿಕಲ್ಪನಾ ವರದಿಯೊಂದಿಗೆ ಬನ್ನಿ ಸಾರ್, ಅಗತ್ಯ ಕ್ರಮಕೈಗೊಳ್ಳೋಣ ಎಂ¨ ಭರವಸೆ ನೀಡಿದರು.

ಈಗಾಗಲೇ ಸಂಸದರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಸೂಚನೆ ಮೇರೆಗೆ, ತುಮಕೂರು ನಗರದ ಬಡಾವಣೆಯ ನಕ್ಷೆ ಗುರುತಿಸುವ ಯೋಜನೆಗೆ, ಟೆಂಡರ್ ಕರೆಯುವ ಹಂತದಲ್ಲಿ ನನೆಗುದಿಗೆ ಬಿದ್ದಿದೆ.  ‘ಬಡಾವಣೆಗೊಂದು ಪುಸ್ತಕ/ ವಿಷನ್ ಡಾಕ್ಯುಮೆಂಟ್-2047’ ಗೆ ಇದು ಅಗತ್ಯವಾಗಿದೆ ಎಂದು ತಿಳಿಸಿದಾಗ, ಅಧಿಕಾರಿಗಳಿಗೆ ತುರ್ತಾಗಿ ಕ್ರಮ ಕೈಗೊಳ್ಳಲು ಡಿಜಿಟಲ್ ಮೂಲಕ ಆದೇಶಿಸಿದರು.

ಚಿತ್ರದಲ್ಲಿ ಪ್ರೋ. ಶ್ರೀ ಪರುಶುರಾಮ್ ರವರು, ನಮ್ಮ ಜೊತೆ ಇದ್ದಾರೆ.