24th July 2024
Share

TUMAKURU:SHAKTHIPEETA FOUNDATION

  ತುಮಕೂರು ರೀಸರ್ಚ್ ಫೌಂಡೇಷನ್-2047 ಪ್ರಥಮ ಗುರಿ, ತುಮಕೂರು ಜಿಲ್ಲೆಯಲ್ಲಿ ಯಾರೊಬ್ಬರೂ ನಿರುದ್ಯೋಗಿ ಇgಬಾರದು. ಅವರು ಸ್ವಯಂ ವೃತ್ತಿ ಆರಂಭಿಸಬಹುದು, ಖಾಸಗಿ ಕೆಲಸಕ್ಕೆ ಸೇರಬಹುದು ಅಥವಾ ಎಷ್ಟೇ ದಿವಸ ಆಗಲಿ ಸರ್ಕಾರಿ ಕೆಲಸ ಬೇಕು ಎಂದು ವಿವಿಧ ಸ್ಪರ್ಧಾತಕ ಪರೀಕ್ಷೆಗಳ ಪ್ರಯತ್ನ ಪಡಬಹುದು ಅಥವಾ ಹೊರದೇಶಗಳಲ್ಲಿ ಕೆಲಸಕ್ಕೆ ಹೋಗಬಹುದು.

ರೈತರ ಮೌಲ್ಯ ವರ್ಧೀತ ಉತ್ಪನ್ನಗಳನ್ನು ರಫ್ತು ಮಾಡಬಹುದು ಅಥವಾ ಯಾವುದಾದರೂ ಸಂಶೋಧನೆ ಮಾಡಬಹುದು.

ಅವರಿಗೆ ಅಗತ್ಯವಿರುವ ಎಲ್ಲಾ ಭಾಷೆಗಳ ಜ್ಞಾನ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ದೊರೆಯುವ ಆರ್ಥಿಕ ನೆರವು, ಟೆಕ್ನಾಲಜಿ, ತರಬೇತಿ ಇತ್ಯಾದಿ ಅಗತ್ಯ ವಿರುವ ಎಲ್ಲಾ ಒಂದೇ ರೂಪ್ ನಲ್ಲಿ ದೊರೆಯಲಿದೆ.

ವಿದ್ಯಾರ್ಥಿಗಳು ಓದುತ್ತಲೇ ದುಡಿಯಬಹುದು. ಹಿರಿಯ ನಾಗರೀಕರು ದುಡಿಯತ್ತಲೇ ಹೈಟೆಕ್ ವೃದ್ಧಾಶ್ರಮದಲ್ಲಿ ಇರಬಹುದು.ರೈತರು ರೈತರ ಕೆಲಸ ಮಾಡುತ್ತಲೇ ರಫ್ತು ಮಾಡಬಹುದು.

ವಿಶಿಷ್ಠ ಯೋಜನೆಗೆ ಚಾಲನೆ ನೀಡಲು. ತುಮಕೂರು ಸ್ಮಾರ್ಟ್ ಸಿಟಿ, ಅಮಾನಿಕೆರೆಯ ಪಕ್ಕ  ನಿರ್ಮಾಣ ಮಾಡಿರುವ ಸ್ಮಾರ್ಟ್ ಲಾಂಜ್ ಬಳಸಿಕೊಳ್ಳಲು ವೀಕ್ಷಣೆ ಮಾಡಲಾಯಿತು.

ಈ ಬಗ್ಗೆ ಜ್ಞಾನ ವಿರುವವರು ಜ್ಞಾನದಾನ ಮಾಡಲು ಬಹಿರಂಗ ಮನವಿ.

ಚಿತ್ರದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಹಾಗೂ  ತುಮಕೂರು ರೀಸರ್ಚ್ ಫೌಂಡೇಷನ್-2047 ನ ಸಂಸ್ಥಾಪಕರಾದ ಶ್ರೀ ಎಂ.ವೆಂಕಟೇಶ್ವರಲು ಪ್ರೋ. ಶ್ರೀ ಪರುಶುರಾಮ್ ರವರು  ಜೊತೆಯಲ್ಲಿ ಇದ್ದಾರೆ.