16th September 2024
Share

TUMAKURU:SHAKTHIPEETA FOUNDATION

  ತುಮಕೂರು ರೀಸರ್ಚ್ ಫೌಂಡೇಷóನ್-2047, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ, 330 ಗ್ರಾಮಪಂಚಾಯಿತಿಗಳು ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 253 ವಾರ್ಡ್‍ವಾರು ಸೇರಿದಂತೆ 583 ಜನರಿಗೆ ಹೊಣೆಗಾರಿಕೆ ನೀಡಲು ಮುಂದಾಗಿದೆ.

ಅವರು ತಮ್ಮ ಗ್ರಾಮಪಂಚಾಯಿತಿ ವ್ಯಾಪ್ತಿಯ ಊರಿಗೊಂದು  ಅಥವಾ ವಾರ್ಡ್‍ಗಳ ವ್ಯಾಪ್ತಿಯ ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ರಚಿಸಲು, ಆಯಾ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್ ರಚನೆ ಮಾಡಲು ಶ್ರಮಿಸಲಿದ್ದಾರೆ. ಆರಂಭದಿಂದಲೇ ಎಲ್ಲಾ ವ್ಯವಹಾರಗಳನ್ನು ಡಿಜಿಟಲ್ ಮೂಲಕ ವ್ಯವಹರಿಸಲು ಸಮಾಲೋಚನೆ ನಡೆಸಲಾಯಿತು.

ದಿನಾಂಕ:16.10.2023 ರೊಳಗೆ 583 ಜನರ ಪ್ರಥಮ ಕಾರ್ಯಾಗಾರ ನಡೆಸಲು ಚಿಂತನೆ ನಡೆಸಲಾಗಿದೆ. ಈ ಸಭೆಯಲ್ಲಿ ತುಮಕೂರು ವಿಶ್ವವಿದ್ಯಾನಿಯಲಯದ  ಉಪಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುರವರು, ಶ್ರೀ ಪರುಶುರಾಮ್‍ರವರು, ಶ್ರೀ ನಾಗರಾಜ್‍ರಾವ್‍ರವರು, ಶ್ರೀ ಕಾಂತ್ ರವರು, ಶ್ರೀ ಸತ್ಯಾನಂದ್‍ರವರು, ಶ್ರೀ ಪ್ರಮೋದ್‍ರವರು ಜೊತೆಯಲ್ಲಿ ಇದ್ದರು.

ಕೇಂದ್ರ ಸರ್ಕಾರ ರಚಿಸಿರುವ ಕಾಮನ್ ಸರ್ವೀಸ್ ಸೆಂಟರ್ ಬಳಸಿಕೊಳ್ಳುವ ಬಗ್ಗೆ ಚಿಂತನೆ ಇದೆ. ತುಮಕೂರು ಜಿಲ್ಲೆಯ ಎಲ್ಲಾ ಸಿ.ಎಸ್.ಸಿ ಗಳ ಒಂದು ದಿನದ ಕಾರ್ಯಾಗಾರ ನಡೆಸುವ ಆಲೋಚನೆಯಿದೆ.