22nd December 2024
Share

TUMAKURU:SHAKTHIPEETA FOUNDATION  

ತುಮಕೂರು ಜಿಲ್ಲೆಯ ಕುಲಕಸುಬುಗಳ ಬಗ್ಗೆ ಜಿಲ್ಲೆಯ ಎಲ್ಲಾ ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಭಂದ ಸ್ಪರ್ಧೆ ನಡೆಸುವ ಮೂಲಕ, ವಿದ್ಯಾರ್ಥಿಗಳ ಗ್ರಾಮವಾರು ಮತ್ತು ಬಡಾವಣೆವಾರು, ಯಾವ ಜಾತಿಯ, ಯಾವ ಕುಲಕಸುಬುಗಳ ಜನರಿದ್ದಾರೆ ಅಥವಾ ಯಾವುದೇ ಜಾತಿಯವರಾಗಿದ್ದರೂ ಯಾವ ಕಸುಬನ್ನು ಮಾಡುತ್ತಿದ್ದಾರೆ, ಎಂಬ ಬಗ್ಗೆ ಪ್ರಭಂದ ಸ್ಪರ್ಧೆಯನ್ನು ನಡೆಸಲು, ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿಗಳು ಹಾಗೂ ತುಮಕೂರು ರೀಸರ್ಚ್ ಫೌಂಡೇಷನ್ ಅಧ್ಯಕ್ಷರು ಆದ ಶ್ರೀ ಎಂ.ವೆಂಕಟೇಶ್ವರಲು ರವರಿಗೆ ಸಲಹೆ ನೀಡಲಾಗಿದೆ.

ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿಯ ಎಲ್ಲಾ ಗ್ರಾಮಗಳ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಬಡಾವಣೆಗಳವಾರು ಪ್ರಭಂz ಬರೆಯುವ ಮೂಲಕ, ಪ್ರಧಾನ ಮಂತ್ರಿಯವರು ಘೋಶಿಸಿರುವ ಪಿ.ಎಂ. ವಿಶ್ವ ಕರ್ಮ ಯೋಜನೆಯ ಬಗ್ಗೆ ಜನಜಾಗೃತಿ ಮೂಡಿಸಬೇಕಿದೆ.

ವಿದ್ಯಾರ್ಥಿಗಳ ಪ್ರಭಂಧವನ್ನು ಆಯಾ ಗ್ರಾಮಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ರವಾನಿಸಿ, ಕುಲಕಸುಬುದಾರರ ಧೃಢಿಕರಣ ಪತ್ರ ನೀಡಲು ಸೂಚಿಸಬೇಕಿದೆ.

ಜೊತೆಗೆ ಆಯಾ ಗ್ರಾಮದ ವಿದ್ಯಾರ್ಥಿಗಳೇ, ಕುಲಕಸುಬುದಾರರನ್ನು  ಕಾಮನ್ ಸರ್ವಿಸ್ ಸೆಂಟರ್ ನಲ್ಲಿ ನೊಂದಾಯಿಸಲು ಸಹಕರಿಸಲು ಸೂಚಿಸಬೇಕಿದೆ. ಕುಲಕಸುಬುದಾರರ ಜೊತೆ ವಿದ್ಯಾರ್ಥಿಗಳ ಫೋಟೋಗಳನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸುವ ಮೂಲಕ, ಪ್ರೋತ್ಸಾಹ ಮತ್ತು ಇಂಟರ್ನ್‍ಷಿಪ್ ಗೆ ಪೂರಕವಾಗುವಂತಹ ವ್ಯವಸ್ಥೆ ಬಗ್ಗೆ ಸಮಾಲೋಚನೆ ನಡೆಸಲು ಸಲಹೆ ನೀಡಲಾಗಿದೆ.

ಸಂಸದರು ಸಭೆ ನಡೆಸುವ ವೇಳೆಗೆ ತಮ್ಮ ಸ್ಪಷ್ಠ ಅಭಿಪ್ರಾಯದೊಂದಿಗೆ ಸಭೆಯಲ್ಲಿ ವಿಷಯ ಮಂಡಿಸಬೇಕಿದೆ.

ತುಮಕೂರು ಜಿಲ್ಲೆಯ ಎಲ್ಲಾ ಜಾತಿಯ ಕುಲಕಸುಬುದಾರರ ಸಭೆಗಳನ್ನು, ಆಯಾ ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ನಡೆಸಿ, ಸಭೆ ನಡವಳಿಕೆ ಪಡೆಯುವುದು ಅಗತ್ಯವಾಗಿದೆ. ಸಭೆ ನಡವಳಿ ಬಗ್ಗೆ ಒಂದು ಟೆಂಪ್ಲೇಟ್ ಸಿದ್ಧಪಡಿಸಿ ಕಳುಹಿಸುವುದು ಸೂಕ್ತವಾಗಿದೆ.

ಆಸಕ್ತರ ಸಲಹೆ ಸೂಚನೆಗಳನ್ನು ಬಹಿರಂಗವಾಗಿ ಆಹ್ವಾನಿಸಲಾಗಿದೆ.

ತುಮಕೂರು ರೀಸರ್ಚ್ ಫೌಂಡೇಷನ್‍ನ ಎಲ್ಲಾ ಪದಾಧಿಕಾರಿಗಳು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾ ಮೂಲಕ ಸೂಚಿಸಲು ಮನವಿ.