27th July 2024
Share

TUMAKURU:SHAKTHIPEETA FOUNDATION

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ವಿಶ್ವಗುರು ಭಾರತ-2047 ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರ ಏಷ್ಯಾದಲ್ಲಿಯೇ ಕರ್ನಾಟಕ ನಂಬರ್-1 ರಾಜ್ಯ-2047 ರ ಕನಸು ನನಸು ಮಾಡಲು, ನಿರಂತರವಾಗಿ ಶ್ರಮಿಸಲು, ‘ದೇಶದ ಪ್ರಥಮ KNOWLEDGE BANK-2047’   ನ್ನು ದಿನಾಂಕ:15.10.2023 ರಂದು ಲೋಕಾರ್ಪಣೆ ಮಾಡಬೇಕು, ಎಂಬ ನನ್ನ ಕನಸಿಗೆ ಶಕ್ತಿಭವನ ದ ಅಪೂರ್ಣ ಕಾಮಗಾರಿ ತಡೆಯೊಡ್ಡಿದೆ ಎಂದು ಹೇಳಲು ನೋವಾಗುತ್ತಿದೆ.

ಕಟ್ಟಡ ಅಪೂರ್ಣವಾದರೇನು? ಆರಂಭಿಕ ಚಟುವಟಿಕೆಗಳನ್ನು ದೇವಿ ಪುಸ್ತಕ ಪಾರಾಯಣ ಮಾಡುವ ಮೂಲಕ ಆರಂಭಿಸಲು ನಿರ್ಧರಿಸಿದ್ದೇನೆ.ನಂತರ ಎಲ್ಲಾ ಕಾಮಗಾರಿ ಪೂರ್ಣಗೊಂಡ ನಂತರ ಲೋಕಾರ್ಪಣೆ ಮಾಡಲಾಗುವುದು.

ಶಕ್ತಿಭವನ’‘ಪ್ರಂಟ್ ಎಲಿವೇಷನ್‍‘ ಗೆ ಇದಕ್ಕಿಂತ ಇನ್ನೇನು ಬೇಕು. ಬಂದವರೆಲ್ಲಾ ಮರ ಕಡಿಯಿರಿ ಎಂಬ ಸಲಹೆ ನೀಡುತ್ತಿದ್ದಾರೆ. ಅವರ ಸಲಹೆಗಳಿಗೆ ನನ್ನ ತಿರಸ್ಕಾರವಿದೆ. ನಾನೇ ಹಾಕಿ ಬೆಳೆಸಿದ ಮರಗಳನ್ನು ಕಡಿಯುವುದರಲ್ಲಿ ಅರ್ಥವಿಲ್ಲ. ಈ ಮರಗಳು ನನಗೆ ಯಾವುದೇ ರೀತಿ ಅಡ್ಡಬರುವುದಿಲ್ಲ.

ದಿನಾಂಕ:28.10.2022 ರಂದು ಭೂಮಿ ಪೂಜೆ ಮಾಡಿದ್ದರೂ, ನವೆಂಬರ್ 7 ರಂದು ಕಟ್ಟಡದ ಕಾಮಗಾರಿಯನ್ನು ಅಧಿಕೃತಕವಾಗಿ ಆರಂಭಿಸಲಾಯಿತು. ಕಟ್ಟಡದ ಆರಂಭದ ದಿವಸವೇ ದಿನಾಂಕ:15.10.2023 ರಂದು ಶರನ್ನವರಾತ್ರಿ ಪೂಜೆ ಮಾಡುವ ಮೂಲಕ ಶಕ್ತಿಭವನವನ್ನು ಲೋಕಾರ್ಪಣೆ’ ಮಾಡಬೇಕು ಎಂದು ತೀರ್ಮಾನ ಮಾಡಿಕೊಂಡಿದ್ದೇವು.

ಆದರೇ ನಾವು ಅಂದು ಕೊಂಡಂತೆ ಆದರೇ ನಮ್ಮನ್ನು ಹಿಡಿಯುವವರು ಯಾರು? ದೇವಿಯ ಕೃಪೆಗೆ ಬದ್ಧರಾಗಿರಲೇ ಬೇಕಲ್ಲವೇ?