14th July 2024
Share

TUMAKURU:SHAKTHIPEETA FOUNDATION

  ದೆಹಲಿಯಲ್ಲಿ ಕರ್ನಾಟಕ ರಾಜ್ಯದ ಸ್ಪರ್ಧಾತ್ಮಕ ಪರೀಕ್ಷೆಗ¼ನ್ನು ಬರೆಯುವ ವಿದ್ಯಾರ್ಥಿಗಳಿಗೆ, ಹಾಸ್ಟೆಲ್ ನಿರ್ಮಾಣ ಮಾಡಲು ಲೋಕೊಪಯೋಗಿ, ಹಿಂದುಳಿದ ವರ್ಗಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಹಕಾರ ಇಲಾಖೆ ಸೇರಿದಂತೆ ನಾಲ್ಕು ಇಲಾಖೆಗಳಲ್ಲಿ ಕಡತಗಳು ಕುಂಟುತ್ತಾ ಸಾಗಿವೆ.

 ಬೆಂಕಿಗೆ ಗಂಟೆ ಕಟ್ಟುವವರು ಯಾರು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ದಿನಾಂಕ:09.08.2023 ರಂದು ತುಮಕೂರು ಲೋಕಸಭಾ ಸದಸ್ಯರಿಂದ ಪತ್ರ ಬರೆಸಿ, ಪತ್ರಗಳನ್ನು ಅನುಸರಣೆ ಮಾಡುತ್ತಿದ್ದೇನೆ.

   ಹಾಸ್ಟೆಲ್ ಜೊತೆಗೆ, ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಶ್ರಮಿಸಲು ಒಂದು ಅಧ್ಯಯನ ಕೇಂದ್ರ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಒಂದು ಅಭಿವೃದ್ಧಿ ಮ್ಯೂಸಿಯಂ, ಅಂದರೆ 224 ವಿಧಾನಸಭಾ ಕ್ಷೇತ್ರಗಳಿಗೂ ಯಾವ ಯೋಜನೆ ಮಂಜೂರಾಗಿದೆ, ಯಾವ ಯೋಜನೆ ಮಂಜೂರು ಮಾಡಿಸಬಹುದು ಎಂಬ ಮಾಹಿತಿಯುಳ್ಳ ವ್ಯವಸ್ಥೆ.

ಈ ಪತ್ರ ಪ್ರವಾಸೋಧ್ಯಮ ಇಲಾಖೆ ಮತ್ತು ಯೋಜನಾ ಇಲಾಖೆಯಲ್ಲಿ ಅಳುತ್ತಿದೆ. ನಿನ್ನೆ ನಡೆದ ಉನ್ನತ ಅಧಿಕಾರಿಗಳ ಸಮಾಲೋಚನೆಯಲ್ಲಿ, ಈ ಎರಡು ಯೋಜನೆಗಳಿಗೆ, ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಸ್ಥಾಪಿಸಿರುವ,  ತುಮಕೂರು ರೀಸರ್ಚ್ ಫೌಂಡೇಷನ್- 2047 ರ ಮೂಲಕ ಪಿಪಿಪಿ ಮಾದರಿಯಲ್ಲಿ ಅಥವಾ ಬೇರೆ ಮಾದರಿಯಲ್ಲಿ ಪ್ರಸ್ತಾವನೆಗಳನ್ನು ಸಲ್ಲಿಸಲು ಸಲಹೆ ನೀಡಿದ್ದಾರೆ.

ತಮ್ಮ ಅಭಿಪ್ರಾಯಗಳನ್ನು ನೀಡುವಿರಾ?