16th January 2026
Share

TUMAKURU:SHAKTHIPEETA FOUNDATION

ತುಮಕೂರು ರೀಸರ್ಚ್ ಫೌಂಡೇಷನ್-2047 ಗೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ತುಮಕೂರು ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಿರುವ ಹಲವಾರು ಕಟ್ಟಡಗಳ ಸಮರ್ಪಕ ಬಳಕೆ ಆಗಬೇಕಿದೆ. ಅವುಗಳನ್ನು ನಿರ್ವಹಣೆಗೆ ಪಡೆಯಲು ತುಮಕೂರು ವಿಶ್ವ ವಿದ್ಯಾನಿಲಯ ಸಜ್ಜಾಗುತ್ತಿದೆ.

ಸುಮಾರು 250 ಎಕರೆಯಲ್ಲಿ ಒಂದು ವಿಶಿಷ್ಠವಾದ ಕ್ಯಾಂಪಸ್ ನಿರ್ಮಾಣ ಮಾಡಲು ಗುರಿ ಹೊಂದಿದೆ. ಆರಂಭಿಕವಾಗಿ ಒಂದು ಸ್ವಂತ ಕಟ್ಟಡವನ್ನು ತುಮಕೂರು ಕ್ಯಾಂಪಸ್‍ನಲ್ಲಿ ನಿರ್ಮಾಣ ಮಾಡಬೇಕಿದೆ. ಈ ಹಿನ್ನಲೆಯಲ್ಲಿ ಆರಂಭಿಕ ಹೆಜ್ಜೆ ಇಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರ ಅಗತ್ಯವಾಗಿದೆ.

ರಾಜ್ಯ ಮಟ್ಟಕ್ಕೆ ವಿಸ್ತರಣೆ ಗುರಿ ಹೊಂದಿರುವ, ತುಮಕೂರು ರೀಸರ್ಚ್ ಫೌಂಡೇಷನ್-2047 ಒಂದು ಭದ್ರಬುನಾದಿ ಹಾಕಲು ಹೆಜ್ಜೆ ಹಾಕಿದೆ.