12th September 2024
Share

TUMAKURU: SHAKTHIPEETA FOUNDATION

ತುಮಕೂರು ವಿಶ್ವ ವಿದ್ಯಾನಿಲಯ

ತುಮಕೂರು ರೀಸರ್ಚ್ ಫೌಂಡೇಷನ್- 2047

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರು ತುಮಕೂರು ರೀಸರ್ಚ್ ಫೌಂಡೇಷನ್– 2047 ಕೈಗೊಳ್ಳುವ ಪ್ರತಿಯೊಂದು ಯೋಜನೆಗಳ ಬಗ್ಗೆ ವಿವಿಧ ಇಲಾಖೆಗಳಿಗೆ ಅವರೇ ಭೇಟಿ ನೀಡಿ ಸಮಾಲೋಚನೆ ನಡೆಸಲು ಸಹಕರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಥಮ ಸಭೆಯನ್ನು ನಗರಾಭಿವೃದ್ಧಿ ಕಾರ್ಯದರ್ಶಿಯವರೊಂದಿಗೆ ನಿಗಧಿ ಮಾಡಿಸಿದ್ದಾರೆ.

ಈ ಸಂಭಂದ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ದಿನಾಂಕ:13.10.2023 ರಂದು ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸಭೆ ಅಜೆಂಡಾ ಮಾಡಲಾಗಿದೆ. ಆಸಕ್ತರು ಸಲಹೆ ನೀಡಬಹುದು.

ದಿನಾಂಕ:16.10.2023 ರಂದು ನಗರಾಭಿವೃದ್ಧಿ ಕಾರ್ಯದರ್ಶಿಯವರಾದ ಶ್ರೀ ಅಜಯ್ ನಾಗಭೂಷಣ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಚರ್ಚಿಸುವ ವಿಷಯಗಳು.

ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ವರದಿಯ ಆಧಾರದ ಮೇಲೆ, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚಿನ ಅನುದಾನ ತರಲು ಸ್ಟ್ರಾಟಜಿ ಗೆ ಅನುಗುಣವಾಗಿ,  ಪ್ರಾಯೋಗಿಕವಾಗಿ ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ಆಯ್ಕೆ ಮಾಡಿಕೊಂಡು, ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್  ಫೌಂಡೇಷನ್ ಮತ್ತು ವಿವಿಧ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.  

 ಮೊದಲನೇ ಹಂತದಲ್ಲಿ, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪ್ರಸ್ತಾವನೆಯನ್ನು ತುಮಕೂರು ಜಿಲ್ಲಾಡಳಿತ, ತುಮಕೂರು ನಗರಾಡಳಿತ ಮತ್ತು ತುಮಕೂರು ಸ್ಮಾರ್ಟ್ ಸಿಟಿ ಸಹಭಾಗಿತ್ವದಲ್ಲಿ ಸಿದ್ಧಪಡಿಸಲಾಗುವುದು.

  1. ತುಮಕೂರು ನಗರ ಶಾಸಕರ ಅಧ್ಯಕ್ಷತೆಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರ ಅಧ್ಯಯನ ಪೀಠ ರಚಿಸುವುದು.
  2. ತುಮಕೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಇರುವ ನಿವೇಶನದಲ್ಲಿ, ತುಮಕೂರು ರೀಸರ್ಚ್ ಫೌಂಡೇಷನ್– 2047 ಕಟ್ಟಡಕ್ಕೆ ತುಮಕೂರು ಸ್ಮಾರ್ಟ್ ಸಿಟಿ ಉಳಿಕೆ ಹಣದಲ್ಲಿ ಅನುದಾನ ಮಂಜೂರು ಮಾಡುವುದು.

3.ಬಡಾವಣೆಗಳ ಘೋಷಣೆ ಬಗ್ಗೆ.

  1. ವಾರ್ಡ್‍ಗಳು ಜನಸಂಖ್ಯೆ ಆಧಾರದ ಮೇಲೆ ಬದಲಾಗುತ್ತವೆ, ಬೂತ್‍ಗಳು ಸಹ ಜನಸಂಖ್ಯೆ ಆಧಾರದ ಮೇಲೆ ಬದಲಾಗುತ್ತವೆ. ಬಡಾವಣೆಗಳು ನಿರ್ಧಿಷ್ಠ ಪ್ರದೇಶದ ವ್ಯಾಪ್ತಿ ಹೊಂದಿರುತ್ತವೆ. ಈ ಹಿನ್ನಲೆಯಲ್ಲಿ  ತುಮಕೂರು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಬಡಾವಣೆಗಳ ಗಡಿ ಗುರುತಿಸಿ, ಜಿ.ಐ.ಎಸ್. ನಕ್ಷೆ ಸಿದ್ಧಪಡಿಸಿ, ಬಡಾವಣೆಗಳನ್ನು ಘೋಷಣೆ ಮಾಡುವುದು.
  2. ಬಡಾವಣೆಗೊಂದು ಪುಸ್ತಕ/ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲು ನಾಗರೀಕ ಸಮಿತಿಗಳನ್ನು ಬಳಸಿಕೊಳ್ಳುವುದು.
  3. ಬಡಾವಣೆಗೊಂದು ಭೂ ಬಳಕೆಯ ಆಧಾರದ ಮೇಲೆ ಡೆವಲಪ್ ಮೆಂಟ್ ಡಿಜಿಟಲ್ ಜಿ..ಎಸ್.ಮ್ಯಾಪ್ ಸಿದ್ಧಪಡಿಸುವುದು.
  4. ಬಡಾವಣೆಗೊಂದು ಪುಸ್ತಕ/ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲು, ಶಾಲಾ ಕಾಲೇಜುವಾರು ವಿದ್ಯಾರ್ಥಿಗಳ ನೇತೃತ್ವದಲ್ಲಿ ಬಡಾವಣೆವಾರು ವ್ಯಾಪ್ತಿಯ ರೀಸರ್ಚ್ ಫೌಂಡೇಷನ್-2047 ರಚಿಸುವುದು.
  5. ಬಡಾವಣೆವಾರು ಆಯಾ ವ್ಯಾಪ್ತಿಯ ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ ನಾಗರೀಕ ಸಮಿತಿಗಳ, ವಿವಿಧ ಸಂಘಸಂಸ್ಥೆಗಳ, ಪರಿಣಿತರ, ಬಡಾವಣೆವಾರು ಅಧಿಕಾರಿಗಳ ಮತ್ತು ನೌಕರರ ವಿಷನ್ ಗ್ರೂಫ್-2047 ರಚಿಸುವುದು.
  6. ತುಮಕೂರು-1 ಮತ್ತು ಕಾಮನ್ ಸರ್ವಿಸ್ ಸೆಂಟರ್/ಡಾಟಾ ಮಿತ್ರಗಳ ಸೇವೆಗಳ ಬಗ್ಗೆ ಅಧ್ಯಯನ ಮಾಡುವುದು. ಬಡಾವಣೆಗೊಬ್ಬ ಡಾಟಾ ಮಿತ್ರ ನೇಮಕದ ಬಗ್ಗೆ ವರಧಿ ಸಿದ್ಧಪಡಿಸುವುದು.
  7. ಬಡಾವಣೆವಾರು ತುಮಕೂರು ನಗರದ ಪ್ರತಿಯೊಂದು ಸ್ವತ್ತಿನ, ಕಟ್ಟಡಗಳ ಮಾಲೀಕರ ಸಹಭಾಗಿತ್ವದಲ್ಲಿ ಸಮಗ್ರ ಮಾಹಿತಿಗಳ ಅಧ್ಯಯನ ವರದಿ ಸಿದ್ಧಪಡಿಸುವುದು. 
  8. ಬಡಾವಣೆಗೊಂದು ನಾಲೇಡ್ಜ್ ಬ್ಯಾಂಕ್- 2047 ಸ್ಥಾಪನೆಗೆ ಪೂರಕವಾಗಿ, ಬಡಾವಣೆವಾರು ಗ್ರಂಥಾಲಯ ಅಥವಾ ಬಯಲು ಗ್ರಂಥಾಲಯ ಸ್ಥಾಪಿಸುವ ಬಗ್ಗೆ ನಿವೇಶನ, ಕಟ್ಟಡ ಬಳಕೆ  ಬಗ್ಗೆ ಅಧ್ಯಯನ ವರದಿ ಸಿದ್ಧಪಡಿಸುವುದು.
  9. ವಿಶ್ವದಲ್ಲಿಯೇ ಬೆಸ್ಟ್ ಪ್ರಾಕ್ಟೀಸಸ್ ಮಾದರಿಯಲ್ಲಿ ತುಮಕೂರು ನಗರವನ್ನು ಅಭಿವೃದ್ಧಿ ಪಡಿಸಲು ಮತ್ತು ತುಮಕೂರು ಮಹಾನಗರ ಪಾಲಿಕೆಯ 10 ಕೀಮೀ ಸುತ್ತಳತೆಯ ಸರ್ಕಾರಿ ಜಮೀನನಲ್ಲಿ  ಮೂಲಭೂತ ಸೌಕರ್ಯ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವುದು. 

4.ತುಮಕೂರು ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಿರುವ ಮೂಲಭೂತ ಸೌಕರ್ಯಗಳನ್ನು ಈಗಾಗಲೇ ಸಂಸದರ ಅಧ್ಯಕ್ಷತೆಯಲ್ಲಿನ ದಿಶಾ ಸಮಿತಿ ನಿರ್ಣಯದಂತೆ  ಬಳಸಿಕೊಳ್ಳುವ ಬಗ್ಗೆ.

  1. ತುಮಕೂರು ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಿರುವ ಐ.ಸಿ.ಸಿ.ಸಿ ಯನ್ನು ತುಮಕೂರು ರೀಸರ್ಚ್ ಫೌಂಡೇಷನ್- 2047 ನ ಅಧ್ಯಯನ ವರದಿ ಸಿದ್ಧಪಡಿಸಲು ಬಳಸಿಕೊಳ್ಳುವುದು.
  2. ಮಹಾತ್ಮ ಗಾಂಧಿ ಸ್ಟೇಡಿಯಂನಲ್ಲಿ ನಿರ್ಮಾಣ ಮಾಡಿರುವ ಕಟ್ಟಡದ ಎರಡು ಅಂತಸ್ತುಗಳಲ್ಲಿ ಒಂದನೇ ಅಂತಸ್ತುವಿನಲ್ಲಿ  ರಾಜ್ಯದ ಯುವ ಜನರಿಗೆ ಸ್ವಯಂ ಉದ್ಯೋಗಕ್ಕೆ ಪೂರಕವಾದ  ಮ್ಯೂಸಿಯಂ ಸ್ಥಾಪಿಸಲು ನೀಡುವುದು. ನಂತರದಲ್ಲಿ ಸ್ಟೂಡೆಂಟ್ ಸ್ಪೆಷಲ್ ಎಕನಾಮಿಕ್ ಝೋನ್ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುವುದು.
  3. ಮಹಾತ್ಮ ಗಾಂಧಿ ಸ್ಟೇಡಿಯಂನಲ್ಲಿ ನಿರ್ಮಾಣ ಮಾಡಿರುವ ಕಟ್ಟಡದ ಎರಡು ಅಂತಸ್ತುಗಳಲ್ಲಿ ಎರಡನೇ ಅಂತಸ್ತುವಿನಲ್ಲಿ ಸೆಂಟರ್ ಆಪ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಫ್  ಇಂಡಿಯಾ ಫಂಡ್ಸ್ ಸ್ಥಾಪಿಸಲು  ನೀಡುವುದು.
  4. ತುಮಕೂರು ನಗರ ಗ್ರಂಥಾಲಯದಲ್ಲಿ, ಇನ್ ಕ್ಯುಬೇಷನ್ ಸೆಂಟರ್ ಸ್ಥಾಪಿಸಲು ನಿರ್ಮಾಣ ಮಾಡಿರುವ ಎರಡು ಅಂತಸ್ತುಗಳ ಕಟ್ಟಡವನ್ನು ಎಂ.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ಗೆ ಈಗಾಗಲೇ ಆದೇಶವಾಗಿರುವ ಮಾದರಿಯಲ್ಲಿ ಬಾಡಿಗೆಯನ್ನು ಎಂ.ಎಸ್.ಎಂ.ಇ ಇಲಾಖೆ, ಗ್ರಂಥಾಲಯ ಇಲಾಖೆಗೆ ನೀಡುವುದು. ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಅನುದಾನ ಮಂಜೂರು ಮಾಡಿಸಿಕೊಂಡು ತುಮಕೂರು ವಿಶ್ವ ವಿದ್ಯಾನಿಲಯ  ಇನ್ ಕ್ಯುಬೇಷನ್ ಸೆಂಟರ್ ಸ್ಥಾಪಿಸಲು ನೀಡುವುದು. ಟೆರ್ರೆಸ್‍ನಲ್ಲಿ ಸೋಲಾರ್ ಅಳವಡಿಸುವಾಗ, ಸ್ಮರ್ಧಾತ್ಮಕ ಪರೀಕ್ಷೆಗಳ ವಿದ್ಯಾರ್ಥಿಗಳಿಗೆ ಅನೂಕೂಲವಾಗುವ   ಮಾದರಿಯಲ್ಲಿ ರೂಪ್ ನಿರ್ಮಾಣ ಮಾಡುವುದು. ತುಮಕೂರು ಜಿಲ್ಲೆಯ ಪ್ರತಿಯೊಂದು ಗ್ರಾಮದ ಮತ್ತು ನಗರ ಪ್ರದೇಶಗಳ ಬಡಾವಣೆಗಳ ವ್ಯಾಪ್ತಿಯ ನಿರುದ್ಯೋಗಿಗಳ ಡಾಟಾ ಬೇಸ್  ಮಾಡಿ, ಅವರು ಒಂದು ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು ಸೂಕ್ತ ತರಬೇತಿ ನೀಡಲು ಬಳಸಿಕೊಳ್ಳುವುದು.
  5. ಮಹಾತ್ಮ ಗಾಂಧಿ ಕ್ರೀಡಾಂಗಣ, ತುಮಕೂರು ನಗರ ಗ್ರಂಥಾಲಯ ಮತ್ತು ಎಂಪ್ರೆಸ್ ಕಾಲೇಜಿನ ಸಭಾಂಗಣವನ್ನು ಅಗತ್ಯವಿದ್ದಾಗ ಉಚಿತವಾಗಿ ಬಳಸಿಕೊಳ್ಳಲು ಅನುಮತಿ ನೀಡುವುದು.
  6. ತುಮಕೂರು ಅಮಾನಿಕೆಯಲ್ಲಿ ನಿರ್ಮಾಣ ಮಾಡಿರುವ ಸ್ಮಾರ್ಟ್ ಲಾಂಜ್ ಅನ್ನು, ಕೇಂದ್ರ ಸರ್ಕಾರದ ಕಾಮನ್ ಸರ್ವಿಸ್ ಸೆಂಟರ್ ಕಚೇರಿಗೆ ನೀಡುವುದು ಮತ್ತು ತುಮಕೂರು ರೀಸರ್ಚ್ ಫೌಂಡೇಷನ್-2047 ಕ್ಕೆ ಅಗತ್ಯವಿದ್ದಾಗ ಬಳಸಿಕೊಳ್ಳಲು ಅನುಮತಿ ನೀಡುವುದು.
  7. ತುಮಕೂರು ನಗರದಲ್ಲಿ ಬಳಕೆ ಆಗದೇ ಇರುವ ಮೂಲಭೂತ ಸೌಕರ್ಯಗಳ ಪಟ್ಟಿ ಮಾಡಿ, ಅಗತ್ಯವಿದ್ದಾಗ ಬಳಸಿಕೊಳ್ಳಲು ಅಧ್ಯಯನ ವರದಿ ಸಿದ್ಧಪಡಿಸಲು ಅನುಮತಿ ನೀಡುವುದು.

5.ನಗರ ಪ್ರದೇಶಗಳಲ್ಲಿ ಸೂಕ್ತ ಜಮೀನು ದೊರೆಯದ ಕಾರಣ, ತುಮಕೂರು ಜಿಲ್ಲೆಯಲ್ಲಿ ಕನಿಷ್ಠ 100 ಎಕರೆಯಿಂದ 250 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಿಸಿಕೊಳ್ಳಲು, ಕೆಳಕಂಡ ಪ್ರತಿಯೊಂದು ಯೋಜನೆಗಳ ರೂಪುರೇಷೆಗಳನ್ನು ಸಿದ್ಧಪಡಿಸಿ, ಸಚಿವ ಸಂಪುಟದ ಅನುಮತಿ ಪಡೆಯಲು ಪ್ರಸ್ತಾವನೆ ಸಿದ್ಧಪಡಿಸುವುದು.

ಯೋಜನೆ

1. 545 ಅಧ್ಯಯನ ಪೀಠಗಳ ಪ್ರಸ್ತಾವನೆ.

2. ಸ್ಟೂಡೆಂಟ್ ಸ್ಪೆಷಲ್ ಎಕನಾಮಿಕ್ ಝೋನ್ ಪ್ರಸ್ತಾವನೆ.

3. ಸೆಂಟರ್ ಆಫ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಗೌರ್ವನಮೆಂಟ್ ಆಫ್ ಇಂಡಿಯಾ ಫಂಡ್ಸ್ ಪ್ರಸ್ತಾವನೆ.

4. ತುಮಕೂರು ಜಿಲ್ಲೆಯ ಫೈಲಟ್ ಯೋಜನೆ  ಪ್ರಸ್ತಾವನೆ.

5. ವಿವಿಧ ಮಟ್ಟದ ಅಭಿವೃದ್ಧಿ ಮ್ಯೂಸಿಯಂ ಪ್ರಸ್ತಾವನೆ.

6. ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಹಾಸ್ಟೆಲ್ ಪ್ರಸ್ತಾವನೆ.

7. ಇನ್‍ಕ್ಯುಬೇಷನ್ ಸೆಂಟರ್ ಪ್ರಸ್ತಾವನೆ.

8.ನಿರುದ್ಯೋಗಿಗಳಿಗೆ ಉದ್ಯೋಗಕ್ಕೆ ಮತ್ತು ರಫ್ತು ಮಾಡಲು ಅನೂಕೂಲವಾಗುವ ವಿವಿಧ ಭಾಷೆಗಳ ತರಬೇತಿ ಕೇಂದ್ರ ಪ್ರಸ್ತಾವನೆ.

9. ರಾಜ್ಯ ಮಟ್ಟದ ದಿಶಾ ಮಾನಿಟರಿಂಗ್ ಸೆಲ್ ಪ್ರಸ್ತಾವನೆ.

10. ರಾಜ್ಯ ಮಟ್ಟದ ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಮಾನಿಟರಿಂಗ್ ಸೆಲ್ ಪ್ರಸ್ತಾವನೆ.

11.ನಾಲೇಡ್ಜ್ ಬ್ಯಾಂಕ್-2047 ಪ್ರಸ್ತಾವನೆ.

12.ಊರಿಗೊಬ್ಬ/ಬಡಾವಣೆಗೊಬ್ಬ ಡಾಟಾ ಮಿತ್ರ ಪ್ರಸ್ತಾವನೆ

13.ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್-2047 ಪ್ರಸ್ತಾವನೆ.

14.ಊರಿಗೊಂದು/ಬಡಾವಣೆಗೊಂದು ‘ಡೆವಲಪ್ ಮೆಂಟ್ ಡಿಜಿಟಲ್ ಜಿ.ಐ.ಎಸ್.ಮ್ಯಾಪ್’ ಪ್ರಸ್ತಾವನೆ.

15.ಜ್ಞಾನ ದಾನಿಗಳು ನೀಡುವ ಇತರೆ ಪ್ರಸ್ತಾವನೆಗಳು.