23rd December 2024
Share

TUMAKURU:SHAKTHIPEETA FOUNDATION

ತುಮಕೂರು ವಿಶ್ವ ವಿದ್ಯಾನಿಲಯ

ತುಮಕೂರು ರೀಸರ್ಚ್ ಫೌಂಡೇಷನ್- 2047

ವಿವಿಧ ವಿಷಯವಾರು ಸಮಿತಿಗಳ ರಚನೆ ಆರಂಭ ಮಾಡಲಾಗಿದೆ. ಮೊದಲನೇ ಸಮಿತಿಯಾಗಿ ಗ್ರಂಥಾಲಯ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಪಧಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದಾಗ, ಅವರ ಅಭಿಪ್ರಾಯಗಳ ಮೇರೆಗೆ ವಿವಿಧ ಸಮಿತಿಗೆ ನಿರ್ಧಿಷ್ಠ ವಿಷಯಗಳ ಜೊತೆಗೆ ಕಾಲಮಿತಿ ನಿಗದಿಗೊಳಿಸುವುದು ಸೂಕ್ತವಾಗಿದೆ.

ಯಾವುದೇ ಸಮಿತಿ ರಚಿಸುವಾಗ, ಯಾರನ್ನು  ಸದಸ್ಯರನ್ನಾಗಿ ನೇಮಕ ಮಾಡಲು ಉದ್ದೇಶಿಸಲಾಗಿದೆಯೋ, ಆ ಸದಸ್ಯರ ಸಭೆ ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದು ನಂತರ ಸಮಿತಿ ರಚಿಸುವುದು ಅಗತ್ಯವಾಗಿದೆ.

ಒಂದು ಉಪಸಮಿತಿಯಲ್ಲಿ ಯಾರ್ಯಾರು ಇರಬೇಕು, ಪದಾಧಿಕಾರಿಗಳ ಕರ್ತವ್ಯ, ಇತ್ಯಾದಿ ವಿಚಾರಗಳ ಬಗ್ಗೆ ಒಂದು ನಿಯಮವನ್ನು ರೂಪಿಸಬೇಕು. ವಿವಿಧ ವರ್ಗದ ಸುಮಾರು 9 ಜನರ ಉಪ ಸಮಿತಿ ರಚಿಸುವುದು ಸೂಕ್ತವಾಗಿದೆ. 

ಪ್ರತಿಯೊಂದು ಸಭೆಯ ಮಾಹಿತಿ,  ಆರಂಭದಿಂದಲೇ ಡಿಜಿಟಲ್ ದಾಖಲೆ ಆಗಬೇಕಿದೆ.

ಆಸಕ್ತರು ಸಲಹೆ ನೀಡಲು ಮನವಿ ಮಾಡಲಾಗಿದೆ.