21st December 2024
Share

TUMAKURU:SHAKTHIPEETA FOUNDATION

  ನಾವು ಇಂದು ಚಂದ್ರಲೋಕಕ್ಕೆ ಹೋಗಿದ್ದೇವೆ, ಸೂರ್ಯನ ಹತ್ತಿರ ಹೋಗುತ್ತಿದ್ದೇವೆ, ಪಾತಾಳ ಲೋಕಕ್ಕೆ ಹೋಗಲು ಪ್ರಯತ್ನಿಸುತ್ತೇದ್ದೇವೆ, ಆದರೆ ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ನಮ್ಮ ಇತಿಹಾಸ, ನಮ್ಮ ಕುಟುಂಬದ ಇತಿಹಾಸ, ನಮ್ಮ ಜಮೀನಿನ ಭೂಬಳಕೆ  ಇತಿಹಾಸ, ನಮ್ಮ ನಿವೇಶನ-ಮನೆಯ ಇತಿಹಾಸ, ನಮ್ಮೂರಿನ ಇತಿಹಾಸ, ನಮ್ಮೂರಿನ ಅಭಿವೃದ್ಧಿ ಮಾಹಿತಿ, ನಮ್ಮೂರಿನ ವಿಷನ್ ಡಾಕ್ಯುಮೆಂಟ್-2047 ನಮ್ಮೂರಿನ ಮನೆಗಳಲ್ಲಿ ಇಲ್ಲ.

 ಹೌದು ಹಲವಾರು ಇಲಾಖೆಗಳು ಹಲವಾರು ಮಾಹಿತಿ ಸಂಗ್ರಹಿಸಿವೆ, ಜಾತಕ ಹೇಳುವ ಹಾಗೆ, ನಮ್ಮೂರಿನ ಪ್ರತಿ ವ್ಯಕ್ತಿಯ, ಪ್ರತಿಕುಟುಂದ, ಪ್ರತಿ ಸರ್ವೇ ನಂಬರ್  ಭೂಳಕೆಯ ಮಾಹಿತಿ ಹಲವಾರು ಪೋರ್ಟಲ್‍ನಲ್ಲಿ ಇವೆ. ಅವು ಬೋಗಸ್ ಆಗಿರಬಹುದು, ಪಕ್ಕಾ ಆಗಿರಬಹುದು. ಆದರೇ ಆ ಮಾಹಿತಿಗಳು ನಮ್ಮೂರಿನ ಗ್ರಂಥಾಲಯದಲ್ಲಿ, ನಮ್ಮೂರಿನ ಪ್ರತಿಯೊಬ್ಬರ ಮನೆಗಳಲ್ಲಿ, ನಮ್ಮೂರಿನ ವ್ಯಕ್ತಿಗಳ ಬೆರಳ ತುದಿಯಲ್ಲಿ (ಮೊಬೈಲ್ ನಲ್ಲಿ) ಇರಬೇಡವೇ?

1947 ಕ್ಕಿಂತ ಮೊದಲು ನಮ್ಮೂರು ಹೇಗಿತ್ತು? ಸ್ವಾತಂತ್ರ್ಯ ಬಂದ ನಂತರ 76 ವರ್ಷಗಳಲ್ಲಿ ಹೇಗೆ ಬದಲಾಗಿದೆ? ಮುಂದೆ 2047 ಕ್ಕೆ ಹೇಗೆ ಆಗಬೇಕು ಎಂಬ ಕನಸು ನಮ್ಮೂರಿನ ಜನರಿಗೆ ಬೇಡವೇ?

ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಭಾರತ-2047 ಕ್ಕೆ ವಿಶ್ವ ಗುರು ಆಗ ಬೇಕು ಎಂಬ ಕನಸು ಹೊತ್ತಿದ್ದಾರೆ, ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು 2047 ಕ್ಕೆ ಕರ್ನಾಟಕ ಏಷ್ಯಾದಲ್ಲೇ ನಂಬರ್ ಆಗಬೇಕು ಎಂಬ ಕನಸು ಹೊತ್ತಿದ್ದಾರೆ. ಉಪಮುಖ್ಯಮಂತ್ರಿಯವರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಬ್ರ್ಯಾಂಡ್ ಬೆಂಗಳೂರು ಆಗಬೇಕು ಎನ್ನುತ್ತಿದ್ದಾರೆ.

ಸರಿ ನಮ್ಮೂರಿನ ಬ್ರ್ಯಾಂಡ್ ಬಗ್ಗೆ ಯಾರು ಕನಸು ಕಾಣಬೇಕು?

ನಮ್ಮೂರಿನ ಪಿ.ಹೆಚ್.ಡಿ. ವಿದ್ಯಾರ್ಥಿಗಳು ಯಾವೊದೋ ಕಟ್ ಅಂಡ್ ಪೇಸ್ಟ್ ಪ್ರಾಜೆಕ್ಟ್ ಮಾಡದೇ, ನಮ್ಮೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಆಕ್ಟಿವಿಟಿ ಪಾಯಿಂಟ್ಸ್ ನಲ್ಲಿ ಯಾವೊದೋ ಕಟ್ ಅಂಡ್ ಪೇಸ್ಟ್ ಪ್ರಾಜೆಕ್ಟ್ ಮಾಡದೇ, ನಮ್ಮೂರಿನ ವಿದ್ಯಾರ್ಥಿಗಳು ಇಂಟರ್ನ್ ಷಿಪ್ ನಲ್ಲಿ ಯಾವೊದೋ ಕಟ್ ಅಂಡ್ ಪೇಸ್ಟ್ ಪ್ರಾಜೆಕ್ಟ್ ಮಾಡದೇ, ನಮ್ಮೂರಿನ ರಿಯಲ್ ಟೈಮ್ ಡಾಟಾ ದೊಂದಿಗೆ ಸಿದ್ಧಪಡಿಸುವ ಪುಸ್ತಕವೇ ಊರಿಗೊಂದು ಪುಸ್ತಕ/ ಬಡಾವಣೆಗೊಂದು ಪುಸ್ತಕ ಅಥವಾ ‘ನಮ್ಮೂರಿನ ವಿಷನ್ ಡಾಕ್ಯುಮೆಂಟ್ 2047

‘ಇಂತಹ ಮಹತ್ವÀ ಕೆಲಸಕ್ಕೆ ತುಮಕೂರು ವಿಶ್ವ ವಿದ್ಯಾನಿಲಯ ಹೆಜ್ಜೆ ಇಡುತ್ತಿದೆ ಎಂದರೆ? ಅದೊಂದು ಇತಿಹಾಸ ಸೃಸ್ಠಿಸುವ ಸಭೆಯಲ್ಲವೇ?

ಒಂದು ಭಾರಿ ಪುಸ್ತಕ ರಚಿಸಿ ಇಡುವುದು ನಮ್ಮ ವಿದ್ಯಾರ್ಥಿಗಳ ಗುರಿ ಅಲ್ಲ್ಲ. 2047 ರವರೆಗೂ ಪ್ರತಿ ವರ್ಷದ ನಮ್ಮೂರಿನ ವಿದ್ಯಾರ್ಥಿಗಳು, ವಿಶ್ವದ ಯಾವುದೇ ಶಾಲಾ- ಕಾಲೇಜಿನಲ್ಲಿ ಓದುತ್ತಿದ್ದರೂ, ನಮ್ಮೂರಿನ ಅಭಿವೃದ್ಧಿ ಮಾಹಿತಿ ಅಪ್ ಡೇಟ್ ಮಾಡಿ, ನಮ್ಮೂರಿನ ಅಭಿವೃದ್ಧಿ RANKING’ ಮಾಹಿತಿ ಬಗ್ಗೆ ಗ್ರಾಮಪಂಚಾಯತ್ ಸದಸ್ಯರ, ತಾಲ್ಲೋಕು ಪಂಚಾಯತ್ ಸದಸ್ಯರ, ಜಿಲ್ಲಾ ಪಂಚಾಯತ್ ಸದಸ್ಯರ, ವಿಧಾನ ಸಭಾ ಸದಸ್ಯರ, ವಿಧಾನ ಪರಿಷತ್ ಸದಸ್ಯರ, ಲೋಕಸಭಾ ಸದಸ್ಯರ, ರಾಜ್ಯ ಸಭಾ ಸದಸ್ಯರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ, ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿಗಳ ಗಮನ ಸೆಳೆಯ ಬೇಕಲ್ಲವೇ?

ಒಂದು ವೇಳೆ ನಮ್ಮೂರಿನಲ್ಲಿ ವಿದ್ಯಾರ್ಥಿಗಳೇ ಇಲ್ಲವೆಂದಲ್ಲಿ ಅಕ್ಕಪಕ್ಕದ ಊರಿನ ವಿದ್ಯಾರ್ಥಿಗಳು ಶ್ರಮಿಸ ಬಹುದಲ್ಲವೇ?

  ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಸುಮಾರು 1000 ಜನ ಅಧ್ಯಾಪಕರು, ನೌಕರರು ಇದ್ದಾರಂತೆ, £ಮ್ಮ ಜಿಲ್ಲೆಯಲ್ಲಿ ಇರುವ ಸುಮಾರು 2775 ಗ್ರಾಮಗಳನ್ನು ತಲಾ 3 ಗ್ರಾಮಗಳ ಹೊಣೆಗಾರಿಕೆ ಹೊರಬಹುದಲ್ಲವೇ? ಸುಮಾರು 45000 ವಿದ್ಯಾರ್ಥಿಗಳು ಇದ್ದಾರಂತೆ, ಅವರೆಲ್ಲರೂ ಎಲ್ಲಾ ಗ್ರಾಮಗಳನ್ನು ಹಂಚಿಕೆ ಮಾಡಿಕೊಳ್ಳಬಹುದು ಅಲ್ಲವೇ? ಜೊತೆಗೆ 6 ನೇ ತರಗತಿಯಿಂದ ಯಾವುದೇ ಮಾಸ್ಟರ್ ಡಿಗ್ರಿ, ಇಂಜಿನಿಯರಿಯಂಗ್, ಮೆಡಿಕಲ್, ವಿವಿಧ ತರಭೇತಿ, ಹೀಗೆ ಎಲ್ಲಾ ವಿದ್ಯಾರ್ಥಿಗಳು ಕೈ ಜೋಡಿಸಲಿದ್ದಾರೆ.

ಊರಿಗೊಂದು/ಬಡಾವಣೆಗೊಂದು ಪುಸ್ತಕದ ಟೆಂಪ್ಲೇಟ್ ಅನ್ನು ತುಮಕೂರು ರೀಸರ್ಚ್ ಫೌಂಡೇಷನ್-2047 ಸಿದ್ಧಪಡಿಸುತ್ತಿದೆ. ಸರ್ಕಾರದ ಬಳಿ ಇರುವ ಡಾಟಾಗಳನ್ನು ಗ್ರಾಮ ಮಟ್ಟಕ್ಕೆ ರವಾನಿಸುವ ಕೆಲಸವನ್ನು ಸರ್ಕಾರಗಳ ಮೂಲಕ ಮಾಡಿಸಲು ಶ್ರಮಿಸಲಿದೆ.

ಅಷ್ಟೆ ಅಲ್ಲಾ ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್  ಮುಂದಿನ 5 ವರ್ಷಗಳಿಗೆ ಮೀಸಲಿಟ್ಟಿರುವ ರೂ 50000 ಕೋಟಿ ಹಣದಲ್ಲಿ, ಶ್ರಮಿಸುವ ನಮ್ಮೂರಿನ ವಿದ್ಯಾರ್ಥಿಗಳಿಗೆ ಮತ್ತು ನಮ್ಮ ವಿಶ್ವವಿದ್ಯಾನಿಲಯದ ಅಧ್ಯಾಪಕರು ಮತ್ತು ನೌಕರರಿಗೂ, ಸಹಕರಿಸುವ ನಮ್ಮೂರಿನ ನಾಲೇಡ್ಜ್ ಬ್ಯಾಂಕ್- 2047 ರ ಸದಸ್ಯರಿಗೆ ಹಾಗೂ ದೇಶ ವಿದೇಶದ ಜ್ಞಾನಿಗಳಿಗೂ ನೇರವಾಗಿ ಅವರÀವರÀ ‘ಬ್ಯಾಂಕ್ ಖಾತೆಗೆ ಡಿ.ಬಿ.ಟಿ.’ ಮೂಲಕ ರಾವಾನಿಸಲು ಶ್ರಮಿಸಲಿದೆ.

ತುಮಕೂರು ಜಿಲ್ಲೆ ಫೈಲಟ್ ಯೋಜನೆಯದರೆ, ಜೊತೆ, ಜೊತೆಯಲ್ಲಿಯೇ ರಾಜ್ಯ ಮಟ್ಟಕ್ಕೂ ವಿಸ್ತರಣೆಗೂ ಶ್ರಮಿಸಲಿದೆ ತುಮಕೂರು ರೀಸರ್ಚ್ ಫೌಂಡೇಷನ್-2047. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ, ಎಲ್ಲಾ ಗ್ರಾಮಗಳ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಕಾತುರದಿಂದ ಶ್ರಮಿಸಲಿದೆ.

ಯಾವ, ಯಾವದಕ್ಕೋ ಸಿ.ಎಸ್.ಆರ್ ಫಂಡ್ ನೀಡುವವರು, ಈ ಕೆಲಸ ಮಾಡುವ ನಮ್ಮೂರಿನ ವಿದ್ಯಾರ್ಥಿಗಳಿಗೂ ನೀಡಲು ಮನವಿ ಮಾಡುತ್ತೇವೆ. ಜೊತೆಗೆ ಪ್ರತಿ ಗ್ರಾಮದ ಲೋಕಲ್ ಇನ್ವೆಸ್ಟರ್ ಮತ್ತು ದಾನಿಗಳು ನಮ್ಮೂರಿನ ವಿದ್ಯಾರ್ಥಿಗಳಿಗೆ ಸೈಫಂಡ್ ನೀಡಲು ಮನವಿ ಮಾಡುತ್ತೇವೆ. 

ಶಕ್ತಿಪೀಠ ಫೌಂಡೇಷನ್ ಇಡೀ ಯೋಜನೆಗೆ ಮೆಂಟರ್’ ಆದರೆ, ತುಮಕೂರು ವಿಶ್ವ ವಿದ್ಯಾನಿಲಯ ಹಾಗೂ ರಾಜ್ಯದ ಇತರೆ ವಿಶ್ವ ವಿದ್ಯಾನಿಲಯಗಳು ನೋಡೆಲ್ ಕಚೇರಿ/ ಆಫೀಸರ್ ಆಗಿ ಕಾರ್ಯ ನಿರ್ವಹಿಸಿÀದರೆ, ನಮ್ಮ ರಾಜ್ಯದ ವಿದ್ಯಾರ್ಥಿಗಳು ಅಭಿವೃದ್ಧಿ ಸೈನಿಕರಾಗಿ ಸೇವೆ ಸಲ್ಲಿಸಲು ಜಾಗೃತಿ ಮೂಡಿಸುವುದೇ ನಮ್ಮ ಪರಿಕಲ್ಪನೆ.

ನಿಮ್ಮ ಸಲಹೆ ಮಾರ್ಗದರ್ಶನ ನೀಡುವಿರಾ?