16th September 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ಇದೂವರೆಗಿನ, ಎಲ್ಲಾ ವಿಧವಾದ ಡಾಟಾ ಮಾಹಿತಿಗಳ ಕ್ರೋಡೀಕರಣ ಅಥವಾ ಲಿಂಕ್ ಅನ್ನು ನಿಯಾಮುನುಸಾರ, ವಿವಿಧ ಇಲಾಖೆಗಳ ಮೂಲಕ ಪಡೆಯಲು ರಾಜ್ಯ ಸರ್ಕಾರ/ಕೇಂದ್ರ ಸರ್ಕಾರ ಆದೇಶ ಪಡೆಯವ ಮುನ್ನ  ತುಮಕೂರು ಡಾಟಾ ಹಬ್ಬ-2023 ಆಯೋಜಿಸಲು ಚಿಂತನೆ ನಡೆಸಲಾಗಿದೆ. ಪ್ರತಿ ವರ್ಷವೂ ಆಯಾ ವರ್ಷದ ಡಾಟಾ ಹಬ್ಬ ನಡೆಯಲಿದೆ.

  ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹಾಗೂ ಎಲ್ಲಾ ಇಲಾಖೆಗಳ ಸಹಭಾಗಿತ್ವದಲ್ಲಿ ನಡೆಸಲುವುದು ಸೂಕ್ತವಾಗಿದೆ. ಊರಿಗೊಂದು ಡಾಟಾಊರಿಗೊಂದು ಡಿಜಿಟಲ್ ನಕ್ಷೆ ಘೋಷಣೆಯಡಿ ಯೋಜನೆ ರೂಪಿಸ ಬೇಕಿದೆ. ಕೆಳಕಂಡ ಅಂಶಗಳ ಎಲ್ಲಾ ಮಾಹಿತಿಯ ಜಾತಕ ಊರಿಗೊಂದು ಪುಸ್ತಕಬಡಾವಣೆಗೊಂದು ಪುಸ್ತಕ (ವಿಷನ್ ಡಾಕ್ಯುಮೆಂಟ್-2047)  ಸಿದ್ಧಪಡಿಸಲು, ಆಯಾ ಗ್ರಾಮದ/ಬಡಾವಣೆಯ  ವಿದ್ಯಾರ್ಥಿಗಳಿಗೆ ಅಗತ್ಯವಿದೆ.

ಈ ಹಿನ್ನಲೆಯಲ್ಲಿ ಎಲ್ಲಾ ಇಲಾಖೆಗಳ ಡಾಟಾ ನಿಯಾಮುನುಸಾರ ಕನ್ವರ್ಜೆನ್ಸ್’ ಆಗಬೇಕಿದೆ. ಈ ಸರ್ಕಾರದ ಡಾಟಾ ಯಾವ ಪೋರ್ಟಲ್ ನಲ್ಲಿ ಸಂಗ್ರಹಿಸಬೇಕು ಎಂಬ ಬಗ್ಗೆಯೂ ಸರ್ಕಾರದಿಂದ ಅನುಮತಿ ಪಡೆಯಬೇಕಿದೆ.

  1. ಊರಿಗೊಂದುÀ ಅಭಿವೃದ್ಧಿ ಡಿಜಿಟಲ್ ಮ್ಯಾಪ್
  2. ಊರಿಗೊಬ್ಬ ಡಾಟಾ ಮಿತ್ರ-2047
  3. ಊರಿಗೊಂದು ಡಾಟಾ ಬ್ಯಾಂಕ್-2047
  4. ಊರಿಗೊಂದು ನಾಲೇಡ್ಜ್ ಬ್ಯಾಂಕ್-2047
  5. ಅಂಕಿ ಅಂಶಗಳ ಇಲಾಖೆಯಲ್ಲಿ ಇರುವ ಡಾಟಾ
  6. ಕುಟುಂಬ ಪೋರ್ಟಲ್ ನಲ್ಲಿ ಇರುವ ಡಾಟಾ
  7. ಎನ್.ಐ.ಸಿಯಲ್ಲಿ ಇರುವ ಡಾಟಾ
  8. ಡಾಟಾ ಲೇಕ್‍ನಲ್ಲಿ ಇರುವ ಡಾಟಾ
  9. ಮಾಹಿತಿ ಕಣಜದಲ್ಲಿ ಇರುವ ಡಾಟಾ
  10. ಎನ್.ಆರ್.ಡಿ.ಎಂ.ಎಸ್ ನಲ್ಲಿ ಇರುವ ಡಾಟಾ
  11. ಪ್ರತಿ ಇಲಾಖೆಯು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ನಮ್ಮೂರಿನ ಬಗ್ಗೆ ಸಂಗ್ರಹ ಮಾಡಿರುವ ದಾಖಲೆಗಳು.
  12. ಪ್ರತಿಯೊಂದು ಸರ್ವೆ ನಂಬರ್‍ವಾರು ದಾಖಲೆಗಳ ಮಾಹಿತಿ.
  13. ಗ್ರಾಮಠಾಣಗಳ ಪ್ರತಿ ಸ್ವತ್ತಿನ ದಾಖಲೆಗಳ ಮಾಹಿತಿ
  14. ಇಲಾಖಾವಾರು ಸಂಗ್ರಹ ಮಾಡಿರುವ ವ್ಯಕ್ತಿಗತ ಮಾಹಿತಿ
  15. ಇಲಾಖಾವಾರು ಸಂಗ್ರಹ ಮಾಡಿರುವ ಕುಟುಂಬವಾರು ಮಾಹಿತಿ.
  16. ಕೇಂದ್ರ ಸರ್ಕಾರದ ಎಲ್ಲಾ ವಿಧವಾದ ಸೆನ್ಸೆಸ್ ಡಾಟಾ
  17. ಜನಗಣತಿ ಸಮೀಕ್ಷೆ ಅಂಶಗಳು.
  18. ಸಾಮಾಜಿಕ ಮತ್ತು ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಅಂಶಗಳು
  19. ಸಂಸದರ ಆದರ್ಶ ಗ್ರಾಮ ಯೋಜನೆಗಳ ಪಟ್ಟಿ
  20. ರುರ್ಬನ್ ಯೋಜನೆಯ ಅಂಶಗಳ ಪಟ್ಟಿ.
  21. ಸ್ಮಾರ್ಟ್ ವಿಲೇಜ್ ಅಂಶಗಳು
  22. ಗ್ರಾಮ ಚರಿತ್ರೆ ಕೋಶದ ಅಂಶಗಳು
  23. ರಾಜ್ಯ ಸರ್ಕಾರದ ಎಲ್ಲಾ ವಿಧವಾದ ಸೆನ್ಸೆನ್ಸ್ ಡಾಟಾ
  24. ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನಲ್ಲಿ ಇರುವ ಡಾಟಾ
  25. ಗೂಗಲ್ ಇಮೇಜ್ ನಲ್ಲಿ ಬರುವ ಮಾಹಿತಿ
  26. ಟೋಪೋಶೀಟ್ ನಲ್ಲಿ ಇರುವ ಮಾಹಿತಿ.
  27. ರೆವಿನ್ಯೂ ಸರ್ವೇ ವಿಲೇಜ್ ಮ್ಯಾಪ್ ಮಾಹಿತಿ.
  28. ಗ್ರಾಮಠಾಣ ನಕ್ಷೆ ಮಾಹಿತಿ
  29. 1947 ಕ್ಕಿಂತ ಮೊದಲು ಕೈಗೊಂಡಿರುವ ಯೋಜನೆಗಳ ಜಿ.ಐ.ಎಸ್. ಲೇಯರ್
  30. 1947 ರಿಂದ 2022 ರವರೆಗೆ ಕೈಗೊಂಡಿರುವ ಯೋಜನೆಗಳ ಜಿ.ಐ.ಎಸ್. ಲೇಯರ್

ಈ ಎಲ್ಲಾ ಡಾಟಾಗಳನ್ನು  ವಿಷ್ಲೇಷಣೆ ಮಾಡಿದ ನಂತರ, 2024 ರಿಂದ 2047 ರವರೆಗೆ ಕೈಗೊಳ್ಳಬೇಕಾಗಿರುವ ಯೋಜನೆಗಳ ಜಿ..ಎಸ್. ಲೇಯರ್’ ಮಾಡಲು ನಮ್ಮ ವಿದ್ಯಾರ್ಥಿಗಳು ಸಿದ್ಧವಿದ್ದಾರೆ.

ಆಸಕ್ತರು ಸಲಹೆ ಸೂಚನೆ ನೀಡಲು ಕೋರಿದೆ. ತುಮಕೂರು ರೀಸರ್ಚ್ ಫೌಂಡೇಷನ್-2047 ಒಂದು ಉಪಸಮಿತಿ’ ಯನ್ನು ರಚಿಸಿ, ಕಾರ್ಯಕ್ರಮ ಆಯೋಜಿಸಲು ಸಲಹೆ ನೀಡಲಾಗಿದೆ.