21st December 2024
Share

TUMAKURU:SHAKTHIPEETA FOUNDATION

ನಿಜಕ್ಕೂ ನನಗೆ ಯಾವುದೇ ವಿಷಯದಲ್ಲಿ ಪಾರದರ್ಶಕ ಚರ್ಚೆ ತುಂಬಾ ಖುಷಿ ಕೊಡುತ್ತದೆ. ಅದು ವಿಷಯದ ಪರ ಇರಲಿ- ವಿರೋಧ ಇರಲಿ, ಯೋಜನೆಯನ್ನು ಗಟ್ಟಿಗೊಳಿಸಲು ಸ್ಟ್ರಾಂಗ್ ಫೌಂಡೇಷನ್ ಆಗಲಿದೆ.

ನಾನು ನನ್ನ 35 ವರ್ಷಗಳಲ್ಲಿ ಹಲವಾರು ಸಭೆಗಳಲ್ಲಿ ಸಮಾಲೋಚನೆ ನಡೆಸಿದ್ದೇನೆ.  ದಿನಾಂಕ:20.10.2023 ರಂದು ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ವಿಶ್ವ ವಿದ್ಯಾನಿಲಯದ ವ್ಯಾಪ್ತಿಯ ಕಾಲೇಜುಗಳ ಊರಿಗೊಂದು ಪುಸ್ತಕಡಾವಣೆಗೊಂದು ಪುಸ್ತಕ (ವಿಷನ್ ಡಾಕ್ಯುಮೆಂಟ್-2047) ಕೋಆರ್ಡಿನೇಟರ್ ಗಳ ಸಭೆಯಲ್ಲಿ ಒಂದು ಅರ್ಥಪೂರ್ಣ ಚರ್ಚೆ ನಡೆಯಿತು. ಆದರೆ ಸಮಯ ಸಾಕಾಗಲಿಲ್ಲ.ಅದು ಎಲ್ಲರ ಬಾವನೆಯಾಗಿತ್ತು.

ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀ ಎಂ.ವೇಖಟೇಶ್ವರಲುರವರು, ಪ್ರೋ: ಶ್ರೀಮತಿ ಮಂಗಳಗೌರಿರವರು ಮತ್ತು ಪ್ರೋ.ಶ್ರೀ ಪರುಶುರಾಮ್ ರವರು ಮಾತನಾಡಿದ ರೀತಿ ನೋಡಿದರೆ. ಈ ಯೋಜನೆಯ ಮಹತ್ವದ ಅರಿವು ನನಗಿಂತ ಅವರಿಗೆ ಹೆಚ್ಚಾಗಿ ಅರ್ಥವಾಗಿರುವÀ ಹಾಗೆ ಕಾಣಿಸುತ್ತದೆ.

  ಚರ್ಚೆಯಲ್ಲಿ ಭಾಗವಹಿಸಿದ ಕೋಆರ್ಡಿನೇಟರ್‍ಗಳ, ಪ್ರತಿಯೊಬ್ಬರ ಮಾತನ್ನು ನಾನು ಗಂಭೀರವಾಗಿ ಪರಿಗಣಿಸಿದೆ. ಅವರೆಲ್ಲರ ಮಾತು ಶೇ 99 ರಷ್ಟು ಯೋಜನೆಯ ಪರವಾಗಿತ್ತು. ಒಬ್ಬರು ಮಾತ್ರ ರೆವಿನ್ಯೂ ಇಲಾಖೆಯವರು ಮಾಡುವ ಕೆಲಸ ನಾವು ಏಕೆ ಮಾಡಬೇಕು ಎಂದು ಹೇಳುವ ಮುನ್ನ, ಪಕ್ಕದಲ್ಲಿ ಕುಳಿತಿದ್ದ ಇನ್ನೋಬ್ಬರು, ನೀನು ಇನ್ನೂ ಸರಿಯಾಗಿ ನೋಡಿಲ್ಲ, ಬಹಳ ಚೆನ್ನಾಗಿದೆ ಕುಳಿತುಕೋ, ನಾನೇ ಹೇಳುತ್ತೇನೆ ಎನ್ನುವ ಮೂಲಕ ಪಕ್ಕಾ ಅನುಭವ’ ದ ಮಾತನಾಡಿದ್ದು ಬಹಳ ಖುಷಿ ನೀಡಿತು.

ಎನ್..ಪಿ, ಇಂಟರ್ನ್ಷಿಪ್, ರೀಸರ್ಚ್ ಗೈಡೆನ್ಸ್ ಮತ್ತು ವರ್ಕ್ಲೋಡ್ ಬಗ್ಗೆ ನಡೆದ ಸಮಾಲೋಚನೆಯ ವಿಷಯಗಳು, ನನಗೆ ಪರಿಪೂರ್ಣವಾಗಿ ಇನ್ನೂ ಅರ್ಥವಾಗಲಿಲ್ಲ, ಮತ್ತೊಮ್ಮೆ ಬಗ್ಗೆ ಚರ್ಚೆ ನಡೆಸ ಬೇಕೆನಿಸಿತು.

ಊರಿಗೊಂದು ಪುಸ್ತಕಡಾವಣೆಗೊಂದು ಪುಸ್ತಕ (ವಿಷನ್ ಡಾಕ್ಯುಮೆಂಟ್-2047) ಟೆಂಪ್ಲೇಟ್’ ಅನ್ನು ಮಾನ್ಯ ಮುಖ್ಯ ಮಂತ್ರಿಯವರಿಗೆ ಮತ್ತು ಪ್ರಧಾನ ಮಂತ್ರಿಯವರಿಗೆ ಸಲ್ಲಿಸುವ ಮುನ್ನ, ನಾವು ಮತ್ತು ನಮ್ಮ ಡಿಜಿಟಲ್ ತಂಡ, ಎಲ್ಲಾ 94 ಕಾಲೇಜುಗಳಿಗೂ ಭೇಟಿ ನೀಡಿ, ಪ್ರಾಧ್ಯಾಪಕರು ಮತ್ತು  ವಿದ್ಯಾರ್ಥಿಗಳ ಜೊತೆ ಪಾಯಿಂಟ್ ಟು ಪಾಯಿಂಟ್ ಸಂವಾದ ನಡೆಸುವುದು ಸೂಕ್ತವೆನಿಸಿದೆ.

ಸಂವಾದದ ಸಾರಾಂಶದ ಅಂಶಗಳನ್ನು ಯೂ ಟ್ಯೂಬ್ ಚಾನಲ್ ನಲ್ಲಿ, ಪ್ರಸಾರ ಮಾಡುವ ಮೂಲಕ ಹಾಗೂ ಪ್ರಸ್ತಾವನೆಯಲ್ಲಿ ಸೇರ್ಪಡೆ ಮಾಡುವ ಮೂಲಕ, ಆಸಕ್ತರ ಬಾವನೆಗಳಿಗೂ ಅವಕಾಶ ನೀಡಲು ಚಿಂತನೆ ಮೂಡಿದೆ. ಶೀಘ್ರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಸಭೆಯಲ್ಲಿ ಚರ್ಚಿಸಿ, ನಂತರ ಸ್ಪಷ್ಟ ರೂಪುರೇಷೆ ಬಗ್ಗೆ ನಿರ್ಧರಿಸಲಾಗುವುದು.

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೋ. ಶ್ರೀಮತಿ ಪಲ್ಲವಿ ಕುಸುಗಲ್ ರವರು ಮತ್ತು ಮಾಜಿ ನಿರ್ದೇಶಕರಾದ ಪ್ರೋ.ಶ್ರೀ ಸಂಪತ್ ಕುಮಾರ್ ರವರ ಜೊತೆ ಸಮಾಲೋಚನೆ ನಡೆಸಿದ್ದು, ಅವರಿಬ್ಬರೂ ಈ ಬಗ್ಗೆ ಕುಲಪತಿಗಳ ಜೊತೆ ಚರ್ಚೆ ನಡೆಸಿದ್ದು ನನ್ನ ಮನಸ್ಸಿಗೆ ನೆಮ್ಮದಿ ತಂದಿದೆ.

ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆ ಮತ್ತು ಜಲಗ್ರಂಥ ದ ಯೋಜನೆಗೆಗೂ ಈ ಅಧ್ಯಯನ ಪೀಠ ಮತ್ತು ವಿದ್ಯಾರ್ಥಿಗಳ ಸಹಭಾಗಿತ್ವಕ್ಕೆ ಚಾಲನೆ ದೊರೆಯುವ ಆಶಾಭಾವನೆ ಮೂಡಿದೆ.