17th December 2024
Share

TUMAKURU:SHAKTHIPEETA FOUNDATION

ವಿಶ್ವದ 7 ದೇಶಗಳಲ್ಲಿ, ಕಳೆದ ಒಂಬತ್ತು ದಿನದಿಂದ ನವರಾತ್ರಿ ಪೂಜೆಯನ್ನು ವಿಶೇಷವಾಗಿ, ಜಾತಿ, ಧರ್ಮಬೇಧವಿಲ್ಲದೇ ಪೂಜಿಸುತ್ತಿದ್ದಾರೆ. ನಾಡದೇವತೆಗಳಾಗಿ ಹಲವಾರು ರಾಜ್ಯಗಳಲ್ಲಿ ಸರ್ಕಾರಗಳೇ ದಸರಾ ಆಚರಣೆ ಮಾಡುತ್ತಿವೆ.

ದಿನಾಂಕ:16.08.2019 ರಂದು ಶಕ್ತಿಪೀಠ ಫೌಂಡೇಷನ್ ಸ್ಥಾಪಿಸಿ, ಅಂದಿನಿಂದ ಶಕ್ತಿಪೀಠ ಮ್ಯೂಸಿಯಂ, ಶಕ್ತಿಪೀಠ ಡಾಟಾ ಪಾರ್ಕ್ ಮತ್ತು ಶಕ್ತಿಪೀಠ ಕ್ಯಾಂಪಸ್ ಮಾಡಲು ಹರ ಸಾಹಸ ಮಾÀಡುತ್ತಿದ್ದೇವೇ.

‘ಕಳೆದ 35 ವರ್ಷಗಳ ಕಾಲ ಅಂದರೆ, ದಿನಾಂಕ:01.08.1988 ರಿಂದ ಪ್ರತಿ ದಿವಸ, ನಿರಂತರವಾಗಿ ದೇವಿ ಪುಸ್ತಕ ಪಾರಾಯಣ, ಕಳೆದ 6-7 ವರ್ಷಗಳಿಂದ ನವರಾತ್ರಿ ವಿಶೇಷ ಪೂಜೆಯನ್ನು ಮನೆಯಲ್ಲಿಯೇ ಮಾಡುತ್ತಿದ್ದೇವೆ.

  ಶಕ್ತಿಪೀಠ ಕ್ಯಾಂಪಸ್ ನಲ್ಲಿ ಜಿ.ಐ.ಎಸ್ ಆಧಾರಿತ ನಕ್ಷೆಯನ್ನು ಭೂಮಿಯ ಮೇಲೆ ರಚಿಸಿ, ವಿಶ್ವದ 7 ದೇಶಗಳ 108 ಶಕ್ತಿಪೀoಗಳನ್ನು ಗುರುತು ಮಾಡುವಾಗ ನನಗೆ ಅನ್ನಿಸಿದ್ದು (ಶಕ್ತಿದೇವತೆ ಆದೇಶ), ಎಲ್ಲಾ 108 ಶಕ್ತಿಪೀಠಗಳಿಗೆ ಭೇಟಿ ನೀಡದೆ, ಸಂಪೂರ್ಣ ಮಾಹಿತಿ ತಿಳಿಯದೆ, ಪಕ್ಕಾ ಅಧ್ಯಯನ ಮಾಡದೇ ಗುರುತು ಮಾಡುವುದು ಸೂಕ್ತವಲ್ಲ ಎನಿಸಿತು.

2019 ರಿಂದ ಶಕ್ತಿಪೀಠ ಯಾತ್ರೆ ಮಾಡಲು ಆರಂಭಿಸಿದೆವು. ಕೊರೊನಾ ಅವಧಿಯಲ್ಲಿ ಯಾತ್ರೆ ಮಾಡಲು ಸಾದ್ಯವಾಗಲಿಲ್ಲ. ನಾನು ಮತ್ತು ನನ್ನ ಕುಟುಂಬ ಇದೂವರೆಗೂ 30 ಶಕ್ತಿಪೀಠಗಳ ಸ್ಥಳಗಳಿಗೆ ಭೇಟಿ ನೀಡಲಾಗಿದೆ.

ನವಂಬರ್ ಮೊದಲವಾರ ಜಮ್ಮು ಮತ್ತು ಕಾಶ್ಮೀರದ ಶ್ರೀ ವೈಷ್ಣವೀ ದೇವಿಗೆ ಭೇಟಿ ನೀಡಿ, ಅಲ್ಲಿಂದ ಬಂದ ನಂತರ ಶಕ್ತಿಪೀಠ ಮ್ಯೂಸಿಯಂನಲ್ಲಿ  ಮಾಹಿತಿ ಸಂಗ್ರಹ ಕಾರ್ಯವನ್ನು ಅಧಿಕೃತವಾಗಿ ಆರಂಭಿಸಲು ನಿರ್ಧರಿಸಲಾಗಿದೆ.

ವಿಶ್ವದ 108 ಶಕ್ತಿಪೀಠಗಳ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹ ಮಾಡುತ್ತಿದ್ದರೂ, ಇನ್ನೂ ಪಕ್ಕಾ ಅಧ್ಯಯನವನ್ನು ಆರಂಭಿಸಲು ತುಮಕೂರಿನಲ್ಲಿ ನಿರ್ಮಾಣ ಮಾಡುತ್ತಿರುವ, ಶಕ್ತಿಪೀಠ ಮ್ಯೂಸಿಯಂ’ ನ ‘ಶಕ್ತಿಭವನ’ ಕಟ್ಟಡ ಲೋಕಾರ್ಪಣೆಯಾಗಲೇಬೇಕು.

ಯಾವುದೇ ಶಕ್ತಿಪೀಠ ದಿಂದ ತಂದ ವಸ್ತುಗಳು ಆಯಾ ಶಕ್ತಿಪೀಠ ಲಾಕರ್ಸ್ ನಲ್ಲಿ ಇಡಬೇಕು.  ಭಾರತ ದೇಶದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮತ್ತು ವಿವಿಧ ದೇಶಗಳ ಸರ್ಕಾರಗಳ ಸಹಭಾಗಿತ್ವದಲ್ಲಿ ಸಂಶೋಧನೆ ಮತ್ತು ಅಧ್ಯಯನ ನಡೆಯ ಬೇಕೆನ್ನುವುದು ನನ್ನ ಅಭಿಲಾóಷೆ (ಶಕ್ತಿದೇವತೆ ಆದೇಶ).

ಸರ್ಕಾರಗಳ ಅಧಿಕೃತ ಮುದ್ರೆಯ ನಂತರ, ಶಕ್ತಿಪೀಠ ಕ್ಯಾಂಪಸ್ ನಲ್ಲಿ ಜಿ.ಐ.ಎಸ್ ಆಧಾರದಲ್ಲಿ ಗುರುತು ಮಾಡುವ ಕಾರ್ಯ ಆರಂಭವಾಗಬೇಕು ಎಂಬ ಮನದಾಸೆ ನನ್ನದಾಗಿದೆ (ಶಕ್ತಿದೇವತೆ ಆದೇಶ).

ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ, ಕೇಂದ್ರ ಸರ್ಕಾರದ ಕಲ್ಚರಲ್ ಇಲಾಖೆ, ಪ್ರವಾಸೋಧ್ಯಮ ಇಲಾಖೆ ಮತ್ತು ತುಮಕೂರು ವಿಶ್ವ ವಿದ್ಯಾನಿಲಯ ಅಥವಾ ಯಾವುದೇ ವಿಶ್ವ ವಿದ್ಯಾನಿಲಯದÀ ಸಹಭಾಗಿತ್ವದಲ್ಲಿ ಶಕ್ತಿಪೀಠ ಫೌಂಡೇಷನ್ ನ ಸಿ.ಇ.ಓ ಕೆ.ಆರ್.ಸೋಹನ್ ಸಂಶೋಧನಾ ವರದಿಯನ್ನು ಮಂಡಿಸಲು ಚಿಂತನೆ ನಡೆಸಲಾಗಿದೆ.

ಅಂತರ ರಾಷ್ಟ್ರೀಯ ಮಟ್ಟದ ಶಕ್ತಿಪೀಠಗಳ ಅಧ್ಯಯನ ಮತ್ತು ಸಂಶೋಧಕರ ಸಮ್ಮೇಳನವನ್ನು ತುಮಕೂರಿನಲ್ಲಿಯೇ ಆರಂಭಿಸಲು ಯೋಚಿಸಲಾಗಿದೆ. ಶಕ್ತಿಪೀಠ ಸಮ್ಮೇಳನದ ವೇಳೆಯಲ್ಲಿ, ಎಲ್ಲಾ ದೇಶಗಳ ಜನರು, ಸಮಿತಿಯ ಪಧಾಧಿಕಾರಿಗಳು, ಸಹ ಶಕ್ತಿಪೀಠ ಮ್ಯೂಸಿಯಂ ಮತ್ತು ಶಕ್ತಿಪೀಠ ಕ್ಯಾಂಪಸ್ ಗೆ ಭೇಟಿ ನೀಡಲಿ ಎಂಬುದು ಸಹ ಶಕ್ತಿದೇವತೆ ಆದೇಶ.

ನವಂಬರ್ ಮೊದಲ ವಾರ, ದೆಹಲಿಗೆ ನಿಯೋಗ ಹೋಗಿ, ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು. ನಿಧಾನವಾಗುತ್ತಿದ್ದರೂ, ಕ್ರಮಬದ್ಧವಾಗಿ ನಡೆಯುತ್ತಿದೆ ಎಂಬುದು ನನಗೆ ಖುಷಿ ಮತ್ತು ಸಂತೃÀಪ್ತಿ ಭಾವನೆ ನಮಗಿದೆ.

‘ಮಾತನಾಡಿದಷ್ಟು, ಬರವಣಿಗೆ ಮಾಡಿದಷ್ಟು, ಕನಸು ಕಾಣುವುಷ್ಟು, ಯಾವುದೂ ಸುಲಭವಲ್ಲ ಎನ್ನುವ ಸತ್ಯಾಂಶದ ಅರಿವು ನಮ್ಮ ಕುಟಂಬಕ್ಕೆ ಮತ್ತು ಶಕ್ತಿಪೀಠ ಫೌಂಡೇಷನ್ಗೆ ಆಗಿದೆ’.

ಆಸಕ್ತರು ಜ್ಞಾನದಾನ ಮಾಡಲು ಮನವಿ.