22nd December 2024
Share

TUMAKURU:SHAKTHIPEETA FOUNDATION

   ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯನ್ನು, ಕೇಂದ್ರ ಸಚಿವರಾದ ಶ್ರೀ ಎ.ನಾರಾಯಣಸ್ವಾಮಿರವರ ಅಧ್ಯಕ್ಷತೆಯಲ್ಲಿ ರಚಿಸಿದ ನಂತರ, ಮೊದಲ ಭಾರಿಗೆ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಸಭೆ ನಡೆಸುವುದಾಗಿ ಪತ್ರ ಬರೆದ ಹಿನ್ನಲೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ಲಿಂಗರಾಜುರವರು ಸಭೆಯನ್ನು ಆಯೋಜಿಸಿದ್ದರು.

  1. ಪಿ.ಎಂ.ವಿಶ್ವಕರ್ಮ
  2. ಎಂ.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್.
  3. ಆರ್ಟಿಸಾನ್ ಹಬ್.
  4. ಡಿಸ್ಟ್ರಿಕ್ಟ್ ಎಕ್ಸ್‍ಪೋರ್ಟ್ ಹಬ್
  5. ಸ್ಕಿಲ್ ಇಂಡಿಯಾ
  6. ಖಜಿಟಲ್ ಇಂಡಿಯಾ
  7. ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್ ಒನ್

   ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು,  ಭಾರತ ದೇಶದಲ್ಲಿಯೇ ಅತ್ಯುತ್ತಮವಾಗಿ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ, ಯೋಜನೆ ಜಾರಿಗೊಳಿಸಬೇಕಾದರೆ, ಯಾವ ಕ್ರಮಗಳನ್ನು ಅನುಸರಿಬೇಕು ಎಂಬ ಬಗ್ಗೆ, ಎಂ.ಎಸ್.ಎಂ ಇ ಟೆಕ್ನಾಲಜಿ ಸೆಂಟರ್ ಸೇರಿದಂತೆ, ಮೇಲ್ಕಂಡ ಎಲ್ಲಾ ಯೋಜನೆಗಳ ಬಗ್ಗೆ ಹಾಗೂ ತಾವು ಕೈಗೊಂಡಿರುವ ಯೋಜನೆಗಳ ಬಗ್ಗೆ,  ತುಮಕೂರು ಜಿಲ್ಲೆಯ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳ ಅಭಿಪ್ರಾಯದೊಂದಿಗೆ, ಆದಷ್ಟು ಶೀಘ್ರವಾಗಿ ವರದಿ ನೀಡಲು ತುಮಕೂರು ರೀಸರ್ಚ್ ಫೌಂಡೇಷನ್-2047 ಗೆ ಸೂಚಿಸಿದರು.

ಅವರಿಗೆ ಎಲ್ಲಾ ಇಲಾಖೆಗಳು ಅಗತ್ಯ ಮಾಹಿತಿಗಳನ್ನು, ಕಾಲಮಿತಿ ನಿಗದಿಯಲ್ಲಿ ನೀಡಲು ಸೂಚಿಸಿದರು. ಸಭೆಯಲ್ಲಿ ಹಾಜರಿದ್ದ 18 ಯೋಜನೆಗಳಿಗೆ ಸಂಬಂಧಿಸಿದ, ತುಮಕೂರು ಜಿಲ್ಲೆಯ ಎಲ್ಲಾ ಜನಾಂಗದ ಅಧ್ಯಕ್ಷರುಗಳಿಗೆ ಯೋಜನೆಯ ಬಗ್ಗೆ, ತಮ್ಮ, ತಮ್ಮ ಸಂಸ್ಥೆಗಳ ಸಲಹೆ ಸೂಚನೆಗಳು ಇದ್ದಲ್ಲಿ ಲಿಖಿತವಾಗಿ ನೀಡಿದಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು.

ತುಮಕೂರು ಜಿಲ್ಲೆಯಲ್ಲಿ ಎಷ್ಟು ಸಿ.ಎಸ್.ಸಿ ಕೇಂದ್ರಗಳು ಇವೆ, ಎಷ್ಟು ಆಕ್ಟೀವ್ ಆಗಿ ಕಾರ್ಯನಿರ್ವಹಿಸುತ್ತಿವೆ, ಜಿಲ್ಲೆಯ ಪ್ರತಿಯೊಂದು ಬಡಾವಣೆಯ ಮತ್ತು ಗ್ರಾಮಗಳಲ್ಲಿ ಸಿ.ಎಸ್.ಸಿಗಳ ಸ್ಥಾಪನೆ ಬಗ್ಗೆ ಮತ್ತು ತಾವೂ ನೀಡುತ್ತಿರುವ ಸೇವೆಗಳ ಬಗ್ಗೆ, ವಿವರವಾದ ವರದಿ ನೀಡಲು ಸೂಚಿಸಿದರು.

ಪಿಎಂ.ವಿಶ್ವ ಕರ್ಮ ಯೋಜನೆಯ ಅರ್ಜಿಗಳನ್ನು ಪಲಾನುಭವಿಗಳಿಗೆ ಪ್ರಿಂಟ್ ನೀಡಲು, ಹಣ ಪಡೆಯುತ್ತಾರೆ ಎಂಬ ಕುಶಲಕರ್ಮಿಗಳ ಮನವಿಗೆ ಸ್ಪಂಧಿಸಿದ ಸಂಸದರು, ಅರ್ಜಿಗಳನ್ನು ಪ್ರಿಂಟ್ ಮಾಡಲು ಅವರಿಗೆ ಯಾರು ಹಣ ನೀಡುತ್ತಿಲ್ಲ, ಕೇವಲ ಅರ್ಜಿ ನೊಂದಾವಣೆಗೆ ರೂ 63 ರೂಗಳನ್ನು ಕೇಂದ್ರ ಸರ್ಕಾರ ನೀಡಲಿದೆ.

ಅರ್ಜಿ ಪ್ರಿಂಟ್ ನೀಡಲು ಎಷ್ಟು ಹಣ ಖರ್ಚಾಗಲಿದೆ ಎಂಬ ಬಗ್ಗೆ ಪಕ್ಕಾ ಮಾಹಿತಿಯನ್ನು ನಿಮ್ಮ ಪ್ರಧಾನ ಕಚೇರಿಯಲ್ಲಿ ಸಮಾಲೋಚನೆ ನಡೆಸಿ, ಲಿಖಿತವಾಗಿ ನೀಡಲು ಸಿ.ಎಸ್.ಸಿ ವತಿಯಿಂದ ಭಾಗವಹಿಸಿದ್ದ ಮ್ಯಾನೇಜರ್ ರವರಿಗೆ ಸೂಚಿಸಿದರು.

ಪಿಎಂ ವಿಶ್ವ ಕರ್ಮ ಯೋಜನೆಗೆ, ಯಾವ ರೀತಿ ಸಾಲ ನೀಡಲಾಗುತ್ತಿದೆ, ಯೋಜನಾವರದಿ ಸಿದ್ಧಪಡಿಸುವರು ಯಾರು, ಯಾವ ಕಾಂಪೋನೆಂಟ್‍ಗೆ ಎಷ್ಟು ಸಾಲ ನೀಡಲಿದ್ದಾರೆ, ಸಿಬಿಲ್ ಗಣನೆಗೆ ತೆಗೆದುಕೊಳ್ಳಲಾಗುತ್ತದೆಯೇ, ಬ್ಯಾಂಕ್ ವಾರು, ಟಾರ್ಗೆಟ್ ಏನಾದರೂ ನಿಗದಿ ಮಾಡಲಾಗಿದೆಯೇ,  ಬ್ಯಾಂಕುಗಳ ಮನಸ್ಥಿತಿ ಹೇಗಿದೆ ಎಂಬ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ವರದಿ ನೀಡಲು ಸೂಚಿಸಿದರು.

ತರಭೇತಿ ನೀಡಲು ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರವಾರು ಯಾವ ಕ್ರಮಕೈಗೊಳ್ಳಲಾಗಿದೆ ಎಂಬ ವರದಿ ನೀಡಲು ಸ್ಕಿಲ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಎಂಪ್ಲಾಯ್‍ಮೆಂಟ್ ಅಧಿಕಾರಿಗಳಿಗೆ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿ ನಿರ್ಣಯ ಆಗಿರುವಂತೆ, ಪ್ರತಿ ಗ್ರಾಮ ಪಂಚಾಯಿತಿವಾರು, ಗ್ರಾಮವಾರು ಉದ್ಯೋಗಕ್ಕೆ ನೋಂದಾವಣೆ ಮಾಡಿರುವ ಪಟ್ಟಿಯನ್ನು ನೀಡಲು ಸೂಚಿಸಿದರು.

ಡಿಸ್ಟ್ರಿಕ್ಟ್ ಎಕ್ಸ್‍ಪೋರ್ಟ್ ಹಬ್ ಮತ್ತು ಡಿಸ್ಟ್ರಿಕ್ಟ್ ಒನ್ ಪ್ರಾಡಕ್ಟ್ ಒನ್ ಯೋಜನೆಯಡಿಯಲಿ,್ಲ  ದೇಶದ ಯಾವ ಜಿಲ್ಲೆಯಲ್ಲಿ ಉತ್ತಮ ಯೋಜನೆ ರೂಪಿಸಿದೆ, ನಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪ್ರಗತಿ ಹೇಗಿದೆ, ಎಂಬ ಬಗ್ಗೆ ವರದಿ ನೀಡಲು ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

  ಬೆಂಗಳೂರಿನಲ್ಲಿ ಬೇರೆ ಒಂದು ಸಭೆ ಇದ್ದುದರಿಂದ ಕಚೇರಿಯಲ್ಲಿ ಸಭೆ ನಡೆಸಿ ವಿರಮಿಸಿ, ಎಲ್ಲರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ, ಶೀಘ್ರವಾಗಿ ಮತ್ತೊಂದು ಸಭೆ ಆಯೋಜಿಸಲು ಸೂಚಿಸಿದರು

ಪ್ರತಿವಾರದ ಪ್ರಗತಿಯನ್ನು, ತಮ್ಮ ಕಚೇರಿಗೆ ನೀಡಲು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ತುಮಕೂರು ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ ನಾನೂ ಬಾಗವಹಿಸಿದ್ದೆ.