9th October 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮತ್ತು ಭಾರತ ಸ್ವಾತಂತ್ರ್ಯ ಸೇನೆ-100(ಬಿ.ಎಸ್.ಎಸ್) ತನ್ನ ಆಡಳಿತ ಕಚೇರಿಗಳು, ಶಕ್ತಿಪೀಠ ಮ್ಯೂಸಿಯಂ, ನಾಲೇಡ್ಜ್ ಬ್ಯಾಂಕ್-2047, ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ  ಅಧಿಕೃತ ಕಚೇರಿಯಾಗಿ ‘ಶಕ್ತಿಭವನ’ ದಲ್ಲಿ ಆರಂಭಿಸಲು ಸಿದ್ಧತೆ ನಡೆಸಿದೆ. 

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಆರಂಭಿಸಿರುವ ತುಮಕೂರು ರೀಸರ್ಚ್ ಫೌಂಡೇಷನ್-2047 ಕಚೇರಿಯನ್ನು ಯಾವ ಕಟ್ಟಡದಲ್ಲಿ ಆರಂಭಿಸಬೇಕು ಎಂಬ ಚರ್ಚೆ ಆರಂಭವಾಗಿದೆ.

ಈ ಹಿನ್ನಲೆಯಲ್ಲಿ ತುಮಕೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಶ್ರೀ ಎಂ.ವೆಂಕಟೇಶ್ವರಲುರವರ ನೇತೃತ್ವದ ತಂಡ ಸ್ಥಳ ವೀಕ್ಷಣೆ ಮಾಡಿದರು.

ಎಡಕಲ್ಲು ಗುಡ್ಡದ ಪಾರ್ಕ್‍ನಲ್ಲಿ ವಿವಿಧ ಸಭೆಗಳನ್ನು ಆಯೋಜಿಸಲು ಸೌಲಭ್ಯದ ಬಗ್ಗೆ ಅವಲೋಕನ ಮಾಡಿದರು.

ಶಕ್ತಿಭವನವನ್ನು ‘ಸ್ಮಾರ್ಟ್ ಬಿಲ್ಡಿಂಗ್’ ಮಾಡುವ ಬಗ್ಗೆ UNIQUE-Q- TECH INDIA PVT LTD ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಎಂ.ಆರ್.ಪ್ರಶಾಂತ್ ರವರು ಮತ್ತುADYAPRAGNA TECHNOLOGIES PRIVATE LIMITED  ಅಧ್ಯಕ್ಷರಾದ ಶ್ರೀ ಎಂ.ಎಸ್.ಶ್ರೀಕಾಂತ್ ರವರು ವೀಕ್ಷಣೆ ಮಾಡಿದರು.

ಶಕ್ತಿಭವನ ಯೂ ಟ್ಯೂಬ್ ಚಾನಲ್ ಸೇರಿದಂತೆ, ಸಂಪೂರ್ಣವಾಗಿ ಡಿಜಿಟಲ್ ಸ್ಮಾರ್ಟ್ ಆಗಲಿದೆ. ಆಸಕ್ತರು ತಮ್ಮ ಪ್ರಾಡಕ್ಟ್ ವಿವರಗಳೊಂದಿಗೆ ಸಂಪರ್ಕಿಸಬಹುದು.

ವಿಶ್ವದ 108 ಶಕ್ತಿಪೀಠಗಳ ನೇತೃತ್ವದಲ್ಲಿ ಎಲ್ಲಾ ಕಾರ್ಯಗಳು ಶಕ್ತಿಭವನದಲ್ಲಿ ನಡೆಯಲಿವೆ.

ದಿನಾಂಕ:07.11.2022 ರಂದು ಜೆಸಿಬಿ ಕಾಮಗಾರಿ ಆರಂಭಿಸಿ, ಈ ಹಂತಕ್ಕೆ ಕಟ್ಟಡ ನಿರ್ಮಾಣವಾಗಿದೆ.

ನಮ್ಮ ಪ್ರಕಾರ ಶರನ್ನವರಾತ್ರಿ ಪೂಜೆಯನ್ನು, ಈ ನೂತನ ಕಟ್ಟಡದಲ್ಲಿ ಆಯೋಜಿಸಬೇಕಿತ್ತು. ಶಕ್ತಿದೇವತೆ ಅವಕಾಶ ನೀಡಲಿಲ್ಲ.

ನವಂಬರ್ ತಿಂಗಳಿನಲ್ಲಿ ಸಾಂಕೇತಿಕವಾಗಿ ಕಾರ್ಯಾರಂಭ ಮಾಡಲು ಯೋಚಿಸಲಾಗಿದೆ. ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿದ ನಂತರ ಪೂರ್ಣ ಪ್ರಮಾಣದಲ್ಲಿ ಲೋಕಾರ್ಪಣೆ ಮಾಡಲಾಗುವುದು.