22nd December 2024
Share

TUMAKURU:SHAKTHIPEETA FOUNDATION

ದಿನಾಂಕ:01.11.2023 ರಿಂದ 12.11.2023 ರವರೆಗೂ 12 ದಿವಸಗಳ ಕಾಲ ದೆಹಲಿ, ಜಮ್ಮು ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಶಕ್ತಿಪೀಠ ಫೌಂಡೇಷನ್ ನಿಯೋಗ ಪ್ರವಾಸ ಕೈಗೊಂಡಿದ್ದÀರಿಂದ 13 ದಿವಸಗಳ ಕಾಲ ಇ-ಪೇಪರ್ ಬರೆಯಲು ಸಾದ್ಯಾವಾಗಲಿಲ್ಲ. ಅರೋಗ್ಯ ಸರಿ ಇಲ್ಲವಾ, ಊರಲ್ಲಿ ಇಲ್ಲವಾ ಎಂಬ ಪ್ರಶ್ನೆಗಳ ಕಾಟ’ ಸಾಕಾಗಿದೆ. ದಯವಿಟ್ಟು ಕ್ಷಮಿಸಿ.

ಜ್ಯೋರ್ತಿಲಿಂಗಗಳುÀ, ಶಕ್ತಿಪೀಠಗಳು, ವಿವಿಧ ನದಿಗಳು, ಸ್ಮಾರ್ಟ್ ಸಿಟಿ ಯೋಜನೆಗಳು, ವಿವಿಧ ಜಿಲ್ಲೆಗಳ ದಿಶಾ ಸಮಿತಿಗಳ ಕಾರ್ಯ ನಿರ್ವಹಣೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಅಧ್ಯಯನ ಪ್ರಮುಖ ಉದ್ದೇಶವಾಗಿತ್ತು.

ಕೋಶ ಓದ ಬೇಕುದೇಶ ತಿರುಗಬೇಕು ಎಂಬ ಹಿರಿಯರ ಗಾದೆ ಮಾತು ನಿಜಕ್ಕೂ ಅಕ್ಷರಷಃ ಸತ್ಯ ಎಂಬ ಅರಿವು ನನಗೆ ಈಗ ಆಗುತ್ತಿದೆ. ಇಲ್ಲಿಯವರೆಗೂ ನಾನೊಬ್ಬ ಅವಿವಿಕೆಯಾಗಿದ್ದೆ, ಈಗ ವಿವೇಕದ ಕಡೆ ಗಮನ ಹರಿಸಿದ್ದೇನೆ ಎಂಬ ಮನವರಿಕೆಯೂ ಆಗುತ್ತಿದೆ.

ಕಳೆದ 33 ವರ್ಷದಿಂದ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಒಡನಾಟವೇ ನನ್ನ ಪ್ರಪಂಚವಾಗಿತ್ತು. ದಿನಕ್ಕೆ ಹತ್ತಾರು ಜನರಿಗೆ ನೇರವಾಗಿ ಸತ್ಯಹೇಳಿ ವಿರೋಧ ಕಟ್ಟಿ ಕೊಳ್ಳುವುದೇ  ನಮ್ಮ ಉದ್ಯೋಗವಾಗಿತ್ತು ಅನ್ನಿಸುತ್ತಿದೆ. ಇದರ ಮಧ್ಯೆ  ನೂರಾರು ಸಮಾಜಮುಖಿ ಕೆಲಸ ಮಾಡಿರುವ ಆತ್ಮ ತೃಪ್ತಿಯೂ ಇದೆ.

 ಈಗಲಾದರೂ ಕುಟುಂಬದ ಜೊತೆ, ವಿಷಯ ತಜ್ಞರೊಂದಿಗೆ/ಜ್ಞಾನಿಗಳೊಂದಿಗೆ, ನನಗೆ ಖುಷಿ ನೀಡುವ, ದೇಶಕ್ಕೆ ಅನೂಕೂಲವಾಗುವ ಕೆಲಸ ಆರಂಭಿಸಿದ ವಿಶಿಷ್ಠ  ಅನುಭವ ಆಗಲಾರಂಭಿಸಿದೆ.

 ಕೇಂದ್ರ ಸರ್ಕಾರದ ಕಲ್ಚರ್ ಸಚಿವಾಲಯದ, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆಟ್ರ್ಸ್ ಅಡಿಯಲ್ಲಿನ ನ್ಯಾಷನಲ್ ಮಿಷನ್ ಆನ್ ಕಲ್ಚರಲ್ ಮ್ಯಾಪಿಂಗ್  ನ ಮಿಷನ್ ಡೈರಕ್ಟರ್ ಮತ್ತು ಹೆಚ್.ಓ.ಡಿ ರವರಾದ ಶ್ರೀಮತಿ ಡಾ. ರಿಚಾ ನೇಗಿ ರವರೊಂದಿಗೆ ಸಮಾಲೋಚನೆ ನಡೆಸಲಾಯಿತು. ವಿವಿಧ ಅಧಿಕಾರಿಗಳು ಇದ್ದರು.

ಕೇಂದ್ರ ಸರ್ಕಾರ ಇಡೀ ದೇಶಾದ್ಯಾಂತ ಪ್ರತಿಯೊಂದು ಗ್ರಾಮಗಳ ಕಲ್ಚರಲ್ ಮ್ಯಾಪಿಂಗ್ ಬಗ್ಗೆ ಮಾಹಿತಿ ಸಂಗ್ರಹಿಸಿ ಪೋರ್ಟಲ್ ನಲ್ಲಿ ಪ್ರಕಟಿಸಿದೆಯಂತೆ. ಆ ವಿಷಯಗಳನ್ನು ಊರಿಗೊಂದು/ಬಡಾವಣೆಗೊಂದು  ಪುಸ್ತಕ ಅಥವಾ ಆಯಾ ವ್ಯಾಪ್ತಿಯ ವಿಷನ್ ಡಾಕ್ಯುಮೆಂಟ್2047 ನಲ್ಲಿ ಸೇರ್ಪಡೆ ಮಾಡಿ ವಿಶ್ಲೇಷಣೆ ಮಾಡುವ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಚರ್ಚೆ ಫಲ ಪ್ರದವಾಗಿತ್ತು.