22nd December 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಹಾಕಿರುವ ಪಂಚವಟಿಗಿಡಗಳಿಗೆ, ಪ್ರದಕ್ಷಿಣೆ ಹಾಕಲು ಆಕ್ಯುಪ್ರಷರ್ ಮಾದರಿಯ ವ್ಯವಸ್ಥೆ ಮಾಡಲು ಹಿರಿಯ ಜೀವಗಳು’ ಚರ್ಚೆ ಆರಂಭಿಸಿದ್ದಾರೆ.

ಜ್ಯೋತಿಷ್ಯ ತಜ್ಞರಾದ ರಾಮನಗರ ಜಿಲ್ಲೆಯ ಶ್ರೀ ನಾಗರಾಜ್ ಪಟೇಲ್ ರವರು ಪರಿಸರವೇ ದೇವರು ಎಂಬ ಘೋಷಣೆಯಡಿಯಲ್ಲಿ ಗಿಡಗಳಿಗೆ ದೀಕ್ಷೆ ಮಾಡಲು ಸೂಕ್ತ ಸಲಹೆಗಳನ್ನು ನೀಡಿದ್ದಾರೆ.

ಬೆಗಳೂರು ಜಿಲ್ಲೆಯ ಶ್ರೀ ರಾಮಣ್ಣ ಗೌqರು, ಹಾಸನ ಜಿಲ್ಲೆಯ ಶ್ರೀ ಕೃಷ್ನೇಗೌಡರು ಮತ್ತು ತುಮಕೂರು ಜಿಲ್ಲೆಯ ಶ್ರೀ ಸುರೇಶ್ ಗೌಡರು ದಾನದ ಮೂಲಕ ಸಿವಿಲ್ ಕಾಮಗಾರಿ ಆರಂಭಿಸಲು ಪಿಜೆಸಿ ಅಸೋಯೇಷನ್ ಅನುಮತಿಗಾಗಿ ಕಾಯುತ್ತಿದ್ದಾರೆ.

ಗುಲ್ಬರ್ಗ ಜಿಲ್ಲೆಯ ಶ್ರೀ ಶೇಕಪ್ಪನವರು, ಶಿವಮೊಗ್ಗ ಜಿಲ್ಲೆಯ ಶ್ರೀ ನಾಗರಾಜ್ ರವರು ಅನುಮತಿ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನ ರಾಜ್ಯದ ಶ್ರೀಮತಿ ಶಿಲ್ಪರವರು ಮತ್ತು ಅವರ ತಂಡ ಪ್ರತಿ ದಿವಸ ಸೂರ್ಯೋದಯ ಮತ್ತು ಸೂರ್ಯಮುಳುಗುವ ವೇಳೆ ಸರ್ವಧರ್ಮಗಳು ಇಚ್ಚಿಸುವ ಹಾಗೂ ವಾತವಾರವಣವನ್ನು ಶುಚಿಗೊಳಿಸುವ ಅಗ್ನಿಹೋತ್ರ ಹೋಮ ಮಾಡಲು ಮುಂದೆ ಬಂದಿದ್ದಾರೆ.

ಪ್ರದಕ್ಷಿಣೆ ಹಾಕುವಾಗ ಮಳೆಗೆ ನೆÀನೆಯದ ರೀತಿ, ಹಿರಿಯರು ಪ್ರದಕ್ಷಿಣೆ ಹಾಕುವಾಗ ಬೀಳದ ರೀತಿ ಗ್ರಿಲ್, ಈಶಾನ್ಯ ಮೂಲೆಯಲ್ಲಿ ನೀರು/ಗಂಗಾಮಾತೆ ನಿಲ್ಲುವ  ಸಂಪ್ ಮಾಡಲು ಹಲªರು ಸಲಹೆ ನೀಡಿದ್ದಾರೆ.

ಪಿಜೆಸಿಯಲ್ಲಿನ ನಿವಾಸಿಗಳಾದ ಸರ್ವಧರ್ಮದವರ ಪ್ರಕಾರ ನೀರು ಮತ್ತು ಪರಿಸರದ ಬಗ್ಗೆ ಅವರವರ ಗ್ರಂಥಗಳಲ್ಲಿ ಏನೇನು ಉಲ್ಲೇಖವಾಗಿದೆ ಎಂಬ ಬಗ್ಗೆ ಧಾರವಾಡ ಜಿಲ್ಲೆಯ ಶ್ರೀ ಶಕೀರ್ ರವರು ಅಧ್ಯಯನ ವರದಿ ನೀಡಲು ಮುಂದೆ ಬಂದಿದ್ದಾರೆ.

ಕೆಳಕಂಡ ಚಿತ್ರದಲ್ಲಿ ಇರುವ ತಂಡ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲು ಶ್ರಮಿಸುತ್ತಿದ್ದಾರೆ.