22nd December 2024
Share

TUMAKURU:SHAKTHIPEETA FOUNDATION

ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಆರಂಭಿಸಿರುವ TUMAKURU RESEARCH FOUNDATION:2047  ಅಡಿಯಲ್ಲಿ ರಾಜ್ಯದ ನಿರುದ್ಯೋಗಿಗಳು, ಉದ್ಯೋಗ ಕೈಗೊಳ್ಳಲು ಅಗತ್ಯವಿರುವಂಥಹ ಕ್ಯಾಂಪಸ್ ಮಾಡಲು ಮುಂದಾಗಿದೆ.

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ತನ್ನ ಈ ಲೋಕಸಭಾ ಅವಧಿಯಲ್ಲಿ, ಈ ಯೋಜನೆಗೆ ಚಾಲನೆ ಕೊಡಿಸಲು ಹರಸಾಹಸ ಮಾಡುತ್ತಿದ್ದಾರೆ. ಅವರು ದಿನಾಂಕ:15.11.2023 ರಂದು ಸ್ಥಳ ವೀಕ್ಷಣೆ ಮಾಡಿದರು.

ವಸಂvನರಸಾಪುರದಲ್ಲಿನ, ತುಮಕೂರು ಇಂಡಸ್ಟ್ರಿಯಲ್ ಕಾರಿಡಾರ್ ನಲ್ಲಿ ತಿಮ್ಮರಾಜನಹಳ್ಳಿ ಅರಣ್ಯ ಪ್ರದೇಶವಿದ್ದು ಕರಿಗುಂಡು ಮಯವಾಗಿದೆ, ಅಲ್ಲಲ್ಲಿ ಕೆಲವು ನೀಲಗಿರಿ ಮರಗಳು ಇದ್ದು, ಈ ಪ್ರದೇಶ ಯೋಜನೆಗೆ ಉತ್ತಮವಾಗಿದೆ. ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿ, ಎಲ್ಲಾ ಜಾತಿಯ ಗಿಡಗಳನ್ನು ಹಾಕಿ, ಅವುಗಳ ಮಧ್ಯೆ ನಿರುದ್ಯೋಗಿಗಳಿಗೆ ಅನೂಕೂಲವಾಗುವ ಎಲ್ಲಾ ಮಾಹಿತಿಗಳ ‘ನಿರುದ್ಯೋಗಿ ಮ್ಯೂಸಿಯಂ’ ಮಾಡಬೇಕಿದೆ.

ನಿರ್ವಹಣೆಯನ್ನು ಮಾತ್ರ TUMAKURU RESEARCH FOUNDATION:2047  ಮಾಡಲಿದೆ. ಸುಮಾರು 13500 ಎಕರೆ ಪ್ರದೇಶದ ಕೈಗಾರಿಕಾ ಕಾರಿಡಾರ್ ನಿರುದ್ಯೋಗಿಗಳಿಗೆ ಪ್ರಾತ್ಯಾಕ್ಷಿಕೆಯಾಗಲಿದೆ. ಶಕ್ತಿಪೀಠ ಡಾಟಾ ಪಾರ್ಕ್  ಮತ್ತು ಶಕ್ತಿಪೀಠ ಪೌಂಡೇಷನ್ ಪಿಪಿಪಿ ಮಾದರಿಯಲ್ಲಿ ಈ ಯೋಜನೆ ಜಾರಿಗೆ ನಿಸ್ವಾರ್ಥವಾಗಿ ಶ್ರಮಿಸಲು ಆರಂಭಿಸಿದೆ.

ನವಂಬರ್ ತಿಂಗಳಿನಲ್ಲಿ ಶಕ್ತಿಪೀಠ ಡಾಟಾ ಪಾರ್ಕ್  ಶಂಕುಸ್ಥಾಪನೆ/ ಭೂಮಿ ಪೂಜೆ ಮಾಡಲು ಉದ್ದೇಶಿಸಲಾಗಿದೆ.

ರೂಪುರೇಷೆಗಳನ್ನು ಪರಿಣಿತರ ತಂಡ ಆರಂಭಿಸಿದೆ. ಶೀಘ್ರದಲ್ಲಿ ಈ ವ್ಯಾಪ್ತಿಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ್ ರವರು ಮತ್ತು ತುಮಕೂರು ಗ್ರಾಮಾಂತರ ಶಾಸಕರಾದ ಶ್ರೀ ಸುರೇಶ್ ಗೌಡರವರೊಂದಿಗೆ ಸಮಾಲೋಚನೆ ನಡೆಸಲಿದ್ದೇನೆ.

ಅರಣ್ಯ ಖಾತೆ ಸಚಿವರಾದ ಶ್ರೀ ಈಶ್ವರ್ ಖಂಡ್ರೆರವರು, ಕೈಗಾರಿಕಾ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ರವರೊಂದಿಗೂ ಸಮಾಲೋಚನೆ ಮಾಡಲಾಗುವುದು.