27th July 2024
Share

TUMAKURU:SHAKTHIPEETA FOUNDATION

ದೆಹಲಿಯಲ್ಲಿ ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಹಾಸ್ಟೆಲ್ ಆರಂಭಿಸುವ ಕಡತವನ್ನು ದೆಹಲಿಯಲ್ಲಿ ಮತ್ತು ಕರ್ನಾಟಕ ರಾಜ್ಯದಲ್ಲಿ ಅನುಸರಣೆ ಮಾಡಲಾಯಿತು.

ಕರ್ನಾಟಕ ಭವನದ ರೆಸಿಂಡೆಂಟ್ ಕಮೀಷನರ್ ಶ್ರೀಮತಿ ಎಂ.ಇಮ್ ಕೊಂಗ್ಲ ಜಮೀರ್ ಐ.ಎ.ಎಸ್ ರವರನ್ನು ದಿನಾಂಕ:02.11.2023 ರಂದು ಭೇಟಿಯಾಗಿ ಸಮಾಲೋಚನೆ ನಡೆಸಿದಾಗ, ದೆಹಲಿ ಸರ್ಕಾರಕ್ಕೆ ಪತ್ರ ಬರೆದಿರುವ ಮಾಹಿತಿ ತಿಳಿಯಿತು.

 ದೆಹಲಿ ಡೆವಲಪ್‍ಮೆಂಟ್ ಅಥಾರಿಟಿಯ ಶ್ರೀ ರವಿಕುಮಾರ್ ಐ.ಎ.ಎಸ್ ಮತ್ತು ಶ್ರೀ ಸಂಜೀವ್ ಕುಮಾರ್ ಐ.ಎ.ಎಸ್ ರವರ ಕಚೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಲಾಯಿತು.

ಬೆಂಗಳೂರಿನಲ್ಲಿ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಶ್ರೀಮತಿ ತುಳಸಿಮದ್ದಿನೇನಿ ಐ.ಎ.ಎಸ್ ರವರನ್ನು ದಿನಾಂಕ:17.11.2023 ರಂದು ಭೇಟಿಯಾಗಿ ಸಮಾಲೋಚನೆ ನಡೆಸಲಾಯಿತು.

ಕರ್ನಾಟಕ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ನಿರ್ಣಯ ಮಾಡಿ, ಸ್ಪಷ್ಟ ರೂಪುರೇಷೆಗಳನ್ನು ಮಾಡಬೇಕಿದೆ.

  1. ಲೋಕೋಪಯೋಗಿ ಇಲಾಖೆ. ಕರ್ನಾಟಕ ಸರ್ಕಾರ.
  2. ಸಹಕಾರ ಇಲಾಖೆ. ಕರ್ನಾಟಕ ಸರ್ಕಾರ.
  3. ಸಮಾಜ ಕಲ್ಯಾಣ ಇಲಾಖೆ. ಕರ್ನಾಟಕ ಸರ್ಕಾರ.
  4. ಹಿಂದುಳಿದ ವರ್ಗಗಳ ಇಲಾಖೆ. ಕರ್ನಾಟಕ ಸರ್ಕಾರ.

ಈ ನಾಲ್ಕು ಇಲಾಖೆಗಳ ಸಭೆ ಆಯೋಜಿಸಿ, ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಹಿರಿಯ ಅಧಿಕಾರಿ ಶ್ರೀಮತಿ ಶಾಲಿನಿ ರಜನೀಶ್ ಐ.ಎ.ಎಸ್ ರವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಾಗಿದೆ.

ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರಕ್ಕೆ ಸುಮಾರು 30 ಗುಂಟೆಗೂ ಹೆಚ್ಚು ಜಮೀನನ್ನು 25,82,32,081.00 ರೂಗೆ ದ್ವಾರಕದಲ್ಲಿ ಮಂಜೂರು ಮಾಡಿದೆ.

ಕರ್ನಾಟಕ ರಾಜ್ಯದ ಲೋಕಸಭಾ ಸದಸ್ಯರು ಮತ್ತು ರಾಜ್ಯ ಸಭಾ ಸದಸ್ಯರುಗಳಿಗೆ ಇದು ಗೊತ್ತಿದೆಯೋ ಇಲ್ಲವೋ ದೇವರೇ ಬಲ್ಲ.