22nd December 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ  ಇಂದು ಸಂಜೆ ಬಿಹಾರ್, ಉತ್ತg Àಪ್ರದೇಶ, ಜಾರ್ಖಂಡ್ ಮತ್ತು ಇತರೆ ಆಸಕ್ತ ಭಕ್ತರಿಂದ CHHATH PUJA  ನಡೆಯಲಿದೆ. ಆಸಕ್ತ ಪಿಜೆಸಿ ನಿವಾಸಿಗಳು ಭಾಗವಹಿಸಿ, ದೇಶ-ವಿದೇಶಗಳ ಕಲ್ಚರಲ್ ಎಕ್ಸ್‍ಚೇಂಜ್ ಮಾಡಿಕೊಳ್ಳಿ.

ಈ ಹಬ್ಬವನ್ನು ಈ ರಾಜ್ಯದವರು ಆಚರಿಸುತ್ತಾರೆ, ಆ ಹಬ್ಬವನ್ನು ಇನ್ನೊಂದು ರಾಜ್ಯದವರು ಆಚರಿಸುತ್ತಾರೆ, ನಮಗೆ ಸಂಭಂದಿಸಿಲ್ಲ ಎಂದು ಹೇಳುವ ಬದಲು ಎಲ್ಲಾ ಹಬ್ಬಗಳಲ್ಲೂ ಭಾಗವಹಿಸಿ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದಲ್ಲವೇ?

ಯಾರಿಗೆ ಇದರಿಂದ ಅನೂಕಲವಾಗತ್ತೋ, ಬಿಡುತ್ತೋ ನನಗಂತೂ ಜ್ಞಾನ ಬೆಳೆಯಲಿದೆ. ನಾನಂತೂ ಎಲ್ಲಾ ಹಬ್ಬಗಳಲ್ಲಿಯೂ ಭಾಗವಹಿಸುತ್ತಿದ್ದೇನೆ.

ಶಕ್ತಿಪೀಠಗಳು 7 ದೇಶಗಳಲ್ಲಿ ಮತ್ತು ನಮ್ಮ ದೇಶದ ಸುಮಾರು 20 ರಾಜ್ಯಗಳಲ್ಲಿ ಇವೆ ಎಂದು ಹೇಳುತ್ತಿರುವುದರಿಂದ, ನನಗೆ ಈ ಮಾಹಿತಿಗಳ ಅವಶ್ಯಕತೆಯಿದೆ.

ಕ್ಷತ್ರೀಯ ಸಮಾಜದ ಶ್ರೀ ರಾಮನು, ವiಹಾ ಬ್ರಾಹ್ಮಣ  ಶ್ರೀ ರಾವಣನನ್ನು ಸಂಹಾರ ಮಾಡಿದಾಗ, ಶ್ರೀಮತಿ ಸೀತಾ ಮಾತೆಯು, ಬ್ರಾಹ್ಮಣರ ವಧೆ ಸರಿಯಲ್ಲ, ಗಂಗಾಮಾತೆಗೆ ಮತ್ತು ಸೂರ್ಯ ದೇವನಿಗೆ ಪೂಜೆ ಮಾಡೋಣ ಎಂದು ಹೇಳಿದ್ದರಿಂದ, ಈ ಹಬ್ಬ ಆಚರಣೆಗೆ ಬಂದಿದೆ ಎಂದು ಹಲವರು ಹೇಳುತ್ತಾರೆ.

ಸೂರ್ಯಪುತ್ರ ದಾನಶೂರ ಕರ್ಣನಿಗೂ ಈ ಹಬ್ಬಕ್ಕೂ ಸಂಬಂದವಿದೆ ಎಂದು ಕೆಲವರು ಹೇಳುತ್ತಾರೆ. ನಾನಂತೂ ಜೀವನದಲ್ಲಿ, ಇದೇ ಮೊದಲ ಭಾರಿಗೆ, ಈ ಹಬ್ಬದಲ್ಲಿ ಭಾಗವಹಿಸಿ, ಪೂರ್ಣ ಮಾಹಿತಿ ಪಡೆಯಲಿದ್ದೇನೆ.

ಇಂದು ಬೆಳಿಗ್ಗೆ ಪೂಜೆ ನಡೆಯುವ ಸ್ಥಳದಲ್ಲಿ ಸಮಾಲೋಚನೆ ನಡೆಸಲಾಯಿತು.

ನಿಖರವಾದ ಮಾಹಿತಿಗಳು ಇದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ.