25th July 2024
Share

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಆರಂಭಿಸಲು ಉದ್ದೇಶಿರುವ ಕೆಳಕಂಡ 545 ಅಧ್ಯಯನ ಪೀಠಗಳಿಗೆ, ರಾಜ್ಯಾದ್ಯಾಂತ 545 ಅನಾಥ, ನಿರ್ಗತಿಕ ಅಥವಾ ಸ್ವಾಭಿಮಾನಿಯಾಗಿದ್ದು ತನ್ನ ಕಾಲ ಮೇಲೆ ತಾನು ನಿಂತು ಓದಬೇಕು ಎಂಬ ಛಲವಿರುವ, ಆರ್ಥಿಕ ನೆರವಿನ ಅಗತ್ಯ ಇರುವ 545 X 9 = 4905 ವಿದ್ಯಾರ್ಥಿಗಳನ್ನು ದತ್ತು ಪಡೆಯಲು ವೇದಿಕೆ ಸೃಷ್ಠಿಸುವ ಮಹತ್ಕಾರ್ಯಕ್ಕೆ ಚಾಲನೇ ನೀಡಿದೆ.

 ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ, ಕರಡು ವರದಿಯಲ್ಲಿ, ಸರ್ಕಾರಗಳಿಗೆ ಸಲಹೆ ನೀಡಲು ಉದ್ದೇಶಿರುವ 545 ಅಧ್ಯಯನ ಪೀಠಗಳ ಮಾಹಿತಿ

 ರಾಜ್ಯದ ಎಲ್ಲಾ ವರ್ಗದ ವಿಶ್ವ ವಿದ್ಯಾನಿಲಯಗಳಲ್ಲಿ ಹಾಲಿ ಇರುವ 111 ಅಧ್ಯಯನ ಪೀಠಗಳು ಸೇರಿದಂತೆ, 545 ಅಧ್ಯಯನ ಪೀಠಗಳ ರಚನೆಗೆ ಸರ್ಕಾರ ಚಿಂತಿಸಬೇಕಿದೆ. ರಾಜ್ಯದಲ್ಲಿರುವ ಎಲ್ಲಾ ವಿಶ್ವ ವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳು ಮತ್ತು ಸಂಶೋದನಾ ಸಂಸ್ಥೆಗಳು ಒಂದೊಂದು ಅಧ್ಯಯನ ಪೀಠದ ಹೆಚ್ಚುವರಿ ಹೊಣೆಗಾರಿಕೆ ಪಡೆಯಬಹುದಾಗಿದೆ.

1       ಕರ್ನಾಟಕ ರಾಜ್ಯದಲ್ಲಿರುವ ವಿಧಾನಸಭಾ ಸದಸ್ಯರು      225

2      ಕರ್ನಾಟಕ ರಾಜ್ಯದಲ್ಲಿರುವ ವಿಧಾನಪರಿಷತ್ ಸದಸ್ಯರು  75

3      ಕರ್ನಾಟಕ ರಾಜ್ಯದ ಲೋಕಸಭಾ ಸದಸ್ಯರು       28

4      ಕರ್ನಾಟಕ ರಾಜ್ಯದ ರಾಜ್ಯಸಭಾ ಸದಸ್ಯರು 12

5      ರಾಜ್ಯದ ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರು  1

6      ದೆಹಲಿ ಪ್ರತಿನಿಧಿ     1

7      31 ಜಿಲ್ಲೆಗಳ ಜಿಲ್ಲಾಧಿಕಾರಿಗಳು       31

8      31 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು  31

9      31 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು    31

10      ರಾಷ್ಟ್ರಪತಿಯವರ ಕಚೇರಿ   1

11       ಪ್ರಧಾನ ಮಂತ್ರಿಯವರ ಕಚೇರಿ    1

12      ರಾಜ್ಯಪಾಲರ ಕಚೇರಿ          1

13      ಮುಖ್ಯ ಮಂತ್ರಿಯವರ ಕಚೇರಿ      1

14      ವಿರೋಧ ಪಕ್ಷದ ನಾಯಕರ ಕಚೇರಿ          1

15      ಎಲ್ಲಾ ರಾಜಕೀಯ ಪಕ್ಷಗಳು        1

16      ಎಲ್ಲಾ ಜಾತಿ ಸಂಘಟನೆಗಳು 1

17      ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಚಿವಾಲಯಗಳ ಕ್ಲಸ್ಟರ್.   62

18      ವಿಶ್ವ ಸಂಸ್ಥೆ  1

20     ಭಾರತ ದೇಶದ ವಿವಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಯೋಜನೆಗಳು.        37

21      ಪ್ರಪಂಚದ ವಿವಿಧ ದೇಶಗಳ ಯೋಜನೆಗಳು.      1

22     ಅಭಿವೃದ್ಧಿ ನಾಲೇಡ್ಜ್ ಬ್ಯಾಂಕ್     1

23     ದಿಶಾ ಮಾನಿಟರಿಂಗ್ ಸೆಲ್ 1

ಮಾನದಂಡಗಳು.

  1. ವಿದ್ಯಾರ್ಥಿ- ವಿದ್ಯಾರ್ಥಿನಿಯರು ರಾಜ್ಯದ 224 ವಿಧಾನಸಭಾ ಕ್ಷೇತ್ರದವರಾಗಿರಬೇಕು.
  2. ರಾಜ್ಯದಲ್ಲಿ ವಾಸಿಸುವ ಪ್ರತಿಯೊಂದು ಧರ್ಮ, ಜಾತಿ/ಉಪಜಾತಿಗೂ ಆಧ್ಯತೆ.
  3. ಅಗತ್ಯವಿರುವ ಅನುದಾನವನ್ನು ನೇರವಾಗಿ ಡಿ.ಬಿ.ಟಿ ಮೂಲಕ ನೀಡ್ ಬೇಸ್ಡ್ ಆಧಾರದಲ್ಲಿ ನೀಡಲಾಗುವುದು.
  4. ಯಾವುದೇ ಕಾರಣಕ್ಕೂ ನಗದು ವ್ಯವಹಾರ ಇರುವುದಿಲ್ಲ.
  5. ಅಗತ್ಯ ಇರುವ ವಸ್ತುಗಳನ್ನು ನೇರವಾಗಿ ದಾನಿಗಳು, ಆಯಾ ನಿರ್ಧಿಷ್ಟ ಅಂಗಡಿಗಳ, ಕೈಗಾರಿಕೆಗಳ,  ಮಾಲೀಕರಿಗೆ ಪಾವತಿಸಿ, ವಸ್ತುವನ್ನು ವಿದ್ಯಾರ್ಥಿಗೆ ತಲುಪಿಸಲಿದ್ದಾರೆ,
  6. ಟ್ಯೂಷನ್ ಅಥವಾ ಫೀ ಹಣ ಬೇಕಾಗಿದ್ದಾರೆ, ನೇರವಾಗಿ ಶಾಲಾ-ಕಾಲೇಜಿಗೆ ಡಿ.ಬಿ.ಟಿ ಮೂಲಕ ಪಾವತಿಯಾಗಲಿದೆ.
  7. ಪ್ರವಾಸದ ಖರ್ಚು ವೆಚ್ಚಗಳನ್ನು, ಹೋಟೆಲ್, ಪ್ರವಾಸಿ ಮಂದಿರ, ಸಾರಿಗೆ, ರೈಲು ಮತ್ತು ಫೈಟ್ ಗಳಿಗೆ ನೇರವಾಗಿ ಡಿ.ಬಿ.ಟಿ ಮೂಲಕ ಪಾವತಿಯಾಗಲಿದೆ.
  8. ದಾನಿಗಳು ಮತ್ತು ವಿದ್ಯಾರ್ಥಿಗಳಿಗೆ ಒಂದು ಡಿಜಿಟಲ್ ಪ್ಲಾಟ್ ಫಾರಂ ಶಕ್ತಿಪೀಠ ಫೌಂಡೇಷನ್ ಆಗಲಿದೆ.
  9. ಓದಿನ ಜೊತೆಗೆ, ದುಡಿಯುವ ಮತ್ತು ಸಮಾಜ ಸೇವೆ ಮಾಡುವ ಮನಸ್ಥಿತಿ ಇರಬೇಕು.
  10. ವಿಶ್ವದ ಎಲ್ಲಾ ಬಾಷೆಗಳ ಅಭ್ಯಾಸ ಮಾಡ ಆಸಕ್ತಿ ಇರಬೇಕು.
  11. ಸೋಶಿಯಲ್ ಮೀಡಿಯಾದಲ್ಲಿ ಪ್ರವೀಣರಾಗಿgಲು ಆಸಕ್ತಿ ಇರÀಬೇಕು.
  12. 545 ಅಧ್ಯಯನ ಪೀಠಗಳ ಮ್ರಮುಖರೊಂದಿಗೆ ಸಮಾಲೋಚನೆ ಮಾಡುವ ಗಂಭೀರತೆ ಬೇಕು.
  13. 6 ನೇ ತರಗತಿಯಿಂದ ಮೇಲ್ಪಟ್ಟು ಯಾವುದೇ ಹಂತದ ವಿದ್ಯಾರ್ಥಿಯಾಗಿರ ಬಹುದು.
  14. ಡ್ರಾಪ್ ಔಟ್ ವಿದ್ಯಾರ್ಥಿಗಳು ಆಗಿರ ಬಹುದು.
  15. ಪ್ರತಿಯೊಬ್ಬ ವಿದ್ಯಾರ್ಥಿ- ವಿದ್ಯಾರ್ಥಿನಿಗೂ  ತನ್ನದೇ ಆದ ಒಂದೊಂದು ಮಾನದಂಡ ಇರಲಿದೆ.
  16. ವಿಶ್ವದ 108 ಶಕ್ತಿಪೀಠಗಳಲ್ಲಿ ನಂಬಿಕೆ ಇರಬೇಕು.
  17. ಅವರು ಇಚ್ಚಿಸುವ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ, ಈಗಿನಿಂದಲೇ ಸಿದ್ಧವಾಗಲು ಆಸಕ್ತ ಇರಬೇಕು.
  18. ಅವರವರ ಗ್ರಾಮ-ಬಡಾವಣೆಯಲ್ಲಿ ಇದ್ದುಕೊಂಡು ಓದಲು ಅವಕಾಶವಿದೆ.
  19. ಅಗತ್ಯ ಇರುವವರಿಗೆ ಹಾಸ್ಟೆಲ್ ಮಾಡಿ ಒಂದೇ ಕಡೆ ಇಟ್ಟುಕೊಳ್ಳುವ ಚಿಂತನೆಯೂ ಇದೆ.
  20. ವಿದೇಶಗಳಲ್ಲಿ ಓದಲು ಆಸಕ್ತಿ ಇರುವವರಿಗೂ ಅವಕಾಶವಿದೆ.

ಶೀಘ್ರದಲ್ಲಿ ಆಪ್ ಸಿದ್ಧವಾಗಲಿದೆ. ದಾನಿಗಳು ಮತ್ತು ವಿದ್ಯಾರ್ಥಿಗಳು ಡಿಜಿಟಲ್ ಮೂಲಕ ನೊಂದಣೆ ಮಾಡಿಕೊಳ್ಳಬೇಕು. ಈ ಬಗ್ಗೆ ಓದುಗರು ಜ್ಞಾನದಾನ ದಾನ ಮಾಡಿ.