23rd April 2024
Share

TUMAKURU:SHAKTHIPEETA FOUNDATION

 ಈ ಲೋಕಸಭಾ ಅವಧಿಯಲ್ಲಿ, ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿಗೆ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸ್ವಲ್ಪ ಕಾಲ ಆದ್ಯಕ್ಷರಾಗಿದ್ದರು.

 ನಂತರ, ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ವಿಧಾನ ಸಭಾ ಕ್ಷೇತ್ರಗಳು ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಗುವುದರಿಂದ, ಚಿತ್ರದುರ್ಗ ಲೋಕಸಭಾ ಸದಸ್ಯರಾದ ಶ್ರೀ ಎ.ನಾರಾಯಣಸ್ವಾಮಿರವರು ಕೇಂದ್ರ ಸಚಿವರಾಗಿರುವುದರಿಂದ, ಯಾವುದೇ ಜಿಲ್ಲೆಯ ಎಷ್ಟೇ ಪ್ರಮಾಣದ ವ್ಯಾಪ್ತಿಗೆ ಸೇರಿದವರು ಕೇಂದ್ರ ಸಚಿವರಾಗಿದ್ದರೆ, ಅವರೇ ಆ ಜಿಲ್ಲಾ ಮಟ್ಟದ ದಿಶಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇದು ಕೇಂದ್ರ ಸರ್ಕಾರದ ದಿಶಾ ಮಾರ್ಗದರ್ಶಿ ಸೂತ್ರ.

ಈಗ ಕೇಂದ್ರ ಸಚಿವರೂ ಆಗಿರುವ ಶ್ರೀ ಎ.ನಾಯಣಸ್ವಾಮಿರವರು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷರಾಗಿದ್ದಾರೆ. ಕೇಂದ್ರ ಸಚಿವರು ಅಂದರೇ, ಭಾರತ ಸರ್ಕಾರ ಅಲ್ಲವೇ ? ಅವರು ದಿನಾಂಕ:24.11.2023 ರಂದು ನಡೆಯುವ ಸಭೆಯಲ್ಲಿ ಕೈಗೊಳ್ಳುವ ಒಂದು ನಿರ್ಣಯ ಭಾರತ ದೇಶದ, ಎಲ್ಲಾ ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ಮಾದರಿಯಾಗುವುದೇ ಕಾದು ನೋಡಬೇಕಿದೆ.

 ಆರಂಭದಿಂದಲೂ ವಿವಿದ ಪ್ರಯೋಗಗಳನ್ನು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಮಾಡುತ್ತಲೇ ಬಂದಿದೆ. ಈಗ ಕೊನೆಯ ಅವಧಿ, ಆದರೇ ಇದೂವರೆಗೂ ಕೈಗೊಂಡಿರುವ ನಿರ್ಣಯಗಳ ಪಕ್ಕಾ ಜಾರಿ ಮಾಡಲು ಇನ್ನೂ ಮುಂದಿನ ಅವಧಿಯೂ ಸಾಕಾಗುವುದಿಲ್ಲ.

 ಸಾಕಷ್ಟು ಮುಂದಾಲೋಚನೆಯಿಂದ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದರೂ, ವಿವಿಧ ಕಾರಣಗಳಿಂದ ಗುರಿ ಮುಟ್ಟಲೂ ಸಾದ್ಯಾವಾಗಿಲ್ಲವಾದರೂ, ಪ್ರಯತ್ನ ನಿಂತಿಲ್ಲ. ರಾಜ್ಯ ಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ ನಾನು ಸರ್ಕಾರದೊಂದಿಗೆ ಎಂ.ಓ.ಯು ಮಾಡಿಕೊಂಡು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಹೆಚ್ಚಿಗೆ ಅನುದಾನ ಪಡೆಯಲು ಕಾರ್ಯತಂತ್ರದ ವರದಿ ಸಿದ್ಧಪಡಿಸುತ್ತಿದ್ದು. ತುಮಕೂರು ಜಿಲ್ಲೆಯನ್ನು ಫೈಲಟ್ ಯೋಜನೆಯಾಗಿ ಕೈಗೊಳ್ಳಲು ಸಲಹೆ ನೀಡಲಾಗಿದೆ.

 ತುಮಕೂರು ವಿಶ್ವ ವಿದ್ಯಾನಿಲಯ ತುಮಕೂರು ರೀಸರ್ಚ್ ಫೌಂಡೇಷನ್-2047 ಸ್ಥಾಪಿಸಿ, ಯೋಜನೆಗಳ ಅನುಷ್ಠಾನದ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡುತ್ತಿದೆ.

ಈಗ ರಾಜ್ಯದ ಕೆಲವು ಉನ್ನತ ಅಧಿಕಾರಿಗಳು, ರಾಜ್ಯದ 31 ಜಿಲ್ಲೆಗಳಲ್ಲೂ ಏಕ ಕಾಲಕ್ಕೆ ಏಕೆ ಚಾಲನೆ ನೀಡಬಾರದು ಎಂಬ ಸಲಹೆ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸಹ ಇದೇ ಸಲಹೆ ನೀಡಿದ್ದಾರೆ.

ಊರಿಗೊಂದು/ಬಡಾವಣೆಗೊಂದು ಪುಸ್ತಕ ಅಂದರೆ, ಆಯಾ ವ್ಯಾಪ್ತಿಯ ವಿಷನ್ ಡಾಕ್ಯುಮೆಂಟ್-2047, ಒಂದು ಟೆಂಪ್ಲೇಟ್ ಸಿದ್ಧವಾಗುತ್ತಿದೆ. ತುಮಕೂರು ವಿಶ್ವ ವಿದ್ಯಾನಿಲಯ ಇಂಟರ್ನ್ ಶಿಪ್ ಮೂಲಕ ವಿದ್ಯಾರ್ಥಿಗಳಿಂದ ಸಿದ್ಧಪಡಿಸಲು ಪ್ರಥಮ ಹೆಜ್ಜೆ ಇಟ್ಟಿದೆ.

ಈ ಮೂಲಕ ಇದೂವರೆಗೂ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ನಿರ್ಣಯ ಕೈಗೊಂಡಿರುವ ಎಲ್ಲಾ ವಿಶೇಷ ಅಂಶಗಳ ಅನುಷ್ಠಾನಕ್ಕೆ ಮುನ್ನುಡಿ ಬರೆಯಲಾಗುವುದು.

ಮುಂದಿನ ಜಿಲ್ಲಾ ಮಟ್ಟದ ದಿಶಾ ಸಮಿತಿ ನಡೆಯುವ ವೇಳೆಗೆ, ನಾಲೇಡ್ಜ್ ಬ್ಯಾಂಕ್-2047 ಅನ್ನು ಲೋಕಾರ್ಪಣೆ ಮಾಡಲು, ಶಕ್ತಿಪೀಠ ಫೌಂಡೇಷನ್ ಭರದ ಸಿದ್ಧತೆ ನಡೆಸಿದೆ.

2019 ರಲ್ಲಿ ನಡೆದ ಮೊದಲ ಸಭೆಯಲ್ಲಿ, ನಾನು ಆಲೋಚನೆ ಮಾಡಿದ ವಿಷಯವನ್ನು, ಅನುಷ್ಠಾನ ಗೊಳಿಸಲು ಮೊದಲ ಹೆಜ್ಜೆ ಇಡಲು 5 ವರ್ಷ ಬೇಕಾಯಿತು.

ಈ ಲೋಕಸಭಾ ಅವಧಿಯ, ಹಿಂದಿನ ಜಿಲ್ಲಾಧಿಕಾರಿಗಳಾದ ಶ್ರೀ ರಾಕೇಶ್ ಕುಮಾರ್ ರವರು, ಶ್ರೀ ವೈ.ಎಸ್.ಪಾಟೀಲ್ ರವರು ಹಾಗೂ ಸದಸ್ಯ ಕಾರ್ಯದರ್ಶಿಯಾಗಿದ್ದ, ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಶುಭರವರು, ಶ್ರೀ ಗಂಗಾಧರ್ ಸ್ವಾಮಿಯವರು, ಶ್ರೀ ವಿದ್ಯಾಕುಮಾರಿರವರು ಮತ್ತು ಇತರ ಅಧಿಕಾರಿಗಳ ಸಹಕಾರ ನಿಜಕ್ಕೂ ಅವಿಸ್ಮರಣೀಯ.

ಈಗ ಇರುವ ಜಿಲ್ಲಾಧಿಕಾರಿ ಶ್ರೀ ಶ್ರೀನಿವಾಸ್ ರವರು ಮತ್ತು ಸಿ.ಇ.ಓ ಶ್ರೀ ಪ್ರಭುರವರ ಸಹಕಾರ ಪಡೆಯಲು ನನಗೆ ಸಮಯವೇ ಇಲ್ಲದಂತಾಗಿದೆ. ಶಕ್ತಿಭವನ ಕಟ್ಟಡ ನಿರ್ಮಾಣ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಡನಾಟ ನನ್ನ ಕೈ ಕಟ್ಟಿ ಹಾಕಿದೆ.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ರವರು, ಸಹಕಾರ ಸಚಿವರಾದ ಶ್ರೀ ಕೆ.ಎನ್.ರಾಜಣ್ಣನವರು ಮತ್ತು ದೆಹಲಿ ವಿಶೇಷ ಪ್ರತಿನಿಧಿಯವರಾದ ಶ್ರೀ ಟಿ.ಬಿ.ಜಯಚಂದ್ರವರು ಸೇರಿದಂತೆ, ತುಮಕೂರು ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳ ಸಹಕಾರದ ಅಗತ್ಯವೂ ಇದೆ.

ಶ್ರೀ ಜಿ.ಎಸ್.ಬಸವರಾಜ್ ರವರ ಅವಧಿಯಲ್ಲಿ ಬೀಜಹಾಕಿದ್ದಾರೆ, ಶ್ರೀ ಎ.ನಾಯಣಸ್ವಾಮಿರವರು ನೀರು ಹಾಕಿದರೆ, ಮುಂದಿನ ಅವಧಿಯ ಲೋಕಸಭಾ ಸದಸ್ಯರಾಗುವವರು ಗೊಬ್ಬರ ಹಾಕಿ ಪೋಶಿಸ ಬೇಕಿದೆ.

ತುಮಕೂರು ಜಿಲ್ಲೆ, ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ಸಹಕಾರ ನನಗೆ ತೃಪ್ತಿ ನೀಡಿದೆ.

ಪಲಿತಾಂಶ ಕಾದು ನೋಡೋಣ.