27th July 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆ ದಿನಾಂಕ:24.11.2023 ರಂದು ನಡೆಯಿತು.   ದಿಶಾ ಸಮಿತಿ ಅಧ್ಯಕ್ಷರಾದ ಕೇಂದ್ರ ಸಚಿವರಾದ ಶ್ರೀ ಎ.ನಾರಾಯಣಸ್ವಾಮಿರವರು ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರ ಸರ್ಕಾರ  ಭಧ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಶಿಸಲಿದೆ ಎಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾಗ, ರಾಷ್ಟ್ರೀಯ ಯೋಜನೆ ಆಗದಿದ್ದರೂ, ನಿರಾಸೆ ಮಾಡದೆ ರೂ 5000 ಕೋಟಿ ಮಂಜೂರು ಮಾಡುವುದಾಗಿ ಘೋಷಣೆ ಮಾಡಿತು.

ಆದರೇ ಇದೂವರೆಗೂ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ. ತುಮಕೂರು ದಿಶಾ ಸಮಿತಿಯಲ್ಲಿ ನಡೆದ ಭದ್ರಾ ಮೇಲ್ದಂಡೆ ಯೋಜನೆಯ ಬಗ್ಗೆ ಚರ್ಚೆ ಹೀಗಿತ್ತು.

ಕುಂದರನಹಳ್ಳಿ ರಮೇಶ್ ಪ್ರಶ್ನೆ: ಭದ್ರಾ ಮೇಲ್ದಂಡೆ ರೂ 5000 ಕೋಟಿ ಏನಾಯಿತು ಸ್ವಾಮಿ ?

.ನಾರಾಯಣಸ್ವಾಮಿರವರ ಉತ್ತರ: ರಾಜ್ಯ ಸರ್ಕಾರದವರು ರೂ 1800 ಕೋಟಿ ಸಾಲ ಮಾಡಿದ್ದಾರೆ. ನಾವು ಬಿಡುಗಡೆ ಮಾಡಿದರೆ, ಆ ಸಾಲ ತೀರಿಸಿಕೊಳ್ಳುತ್ತಾರೆ.

ಕುಂದರನಹಳ್ಳಿ ರಮೇಶ್ ಪ್ರಶ್ನೆ:  ಸಾಲ ತೀರಿಸಬಾರದು, ಕೇಂದ್ರ ಸರ್ಕಾರದ ಹಣದಲ್ಲಿ ಹೊಸ ಕಾಮಗಾರಿ ಮಾಡಬೇಕು ಎಂಬ ಷರತ್ತು ವಿಧಿಸಿ ಮಂಜೂರು ಮಾಡಬಹುದಲ್ಲಾ ಸಾರ್?

.ನಾರಾಯಣಸ್ವಾಮಿರವರ ಉತ್ತರ: ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡುವ ವರದಿ ನೀಡಿಲ್ಲ.

ಕುಂದರನಹಳ್ಳಿ ರಮೇಶ್ ಪ್ರಶ್ನೆ:  ಸಭೆಯಲ್ಲಿ ಹಾಜರಿದ್ದ ಎತ್ತಿನಹೊಳೆ ಎಸ್.ಇ ಶ್ರೀ ಶಿವಪ್ರಕಾಶ್ ರವರಿಗೆ, ರಾಜ್ಯ ಸರ್ಕಾರದ ವರದಿ ಏಕೆ ನೀಡಿಲ್ಲ.

ಎತ್ತಿನಹೊಳೆ ಎಸ್. ಶ್ರೀ ಶಿವಪ್ರಕಾಶ್: ವರದಿ ನೀಡುತ್ತೇವೆ ಸಾರ್.

ಕುಂದರನಹಳ್ಳಿ ರಮೇಶ್ ಪ್ರಶ್ನೆ: ಹಣ ಬಿಡುಗಡೆ ಮಾಡಿಸಲು ಏನು ಕ್ರಮಕೈಗೊಳ್ಳುವಿರಿ ಸಾರ್?

.ನಾರಾಯಣಸ್ವಾಮಿರವರ ಉತ್ತರ: ಚಳಿಗಾಲದ ಲೋಕಸಭಾ ಅಧಿವೇಶನದಲ್ಲಿ, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿರವರೊಂದಿಗೆ ನೀಯೋಗ ಹೋಗಿ, ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಚರ್ಚಿಸಿ ಹಣ ಬಿಡುಗಡೆ ಮಾಡಿಸಲಾಗುವುದು.

ಕುಂದರನಹಳ್ಳಿ ರಮೇಶ್ ಮನವಿ: ನಾನೂ ದೆಹಲಿಯಲ್ಲಿ ಕಡತದ ಅನುಸರಣೆ ಮಾಡುತಿದ್ದೇನೆ, ಅದರ ಹಿಂದಿರುವುದು ಬೇರೆ, ಅಭಿವೃದ್ಧಿಯಲ್ಲಿ ದಯವಿಟ್ಟು ರಾಜಕಾರಣ ಬೇಡಿ ಸಾರ್, ರೈತರ ಹಿತದೃಷ್ಠಿಯಿಂದ ಶೀಘ್ರವಾಗಿ ಹಣ ಬಿಡುಗಡೆ ಮಾಡಿಸಿ ಸಾರ್.

ಸಂಸದರು, ಶಾಸಕರು ಗೈರು ಹಾಜರಿ: ಒಂದು ಮಾದರಿನಾ?

  ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಂದ ಅನುದಾನದ ಪ್ರಗತಿ ಪರಿಶೀಲನೆ, ಮೌಲ್ಯಮಾಪನ, ವಿಶ್ಲೇಷಣೆ, ದುರುಪಯೋಗ ತಡೆಗಟ್ಟುವಿಕೆ, ಹೋಸ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ, ರಾಜ್ಯ ಮಟ್ಟದಲ್ಲಿ ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಲೋಕಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿಗಳನ್ನು ರಚಿಸಿದೆ.

ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆ ದಿನಾಂಕ:24.11.2023 ರಂದು ನಡೆಯಿತು.   ದಿಶಾ ಸಮಿತಿ ಅಧ್ಯಕ್ಷರಾದ ಕೇಂದ್ರ ಸಚಿವರಾದ ಶ್ರೀ ಎ.ನಾರಾಯಣಸ್ವಾಮಿರವರನ್ನು ಅಧ್ಯಕ್ಷತೆ ವಹಿಸಿದ್ದರು. ತುಮಕೂರು ಜಿಲ್ಲೆಯಲ್ಲಿ ಇರುವ ಇನ್ನೂ ಇಬ್ಬರು ಸಂಸದರು, 11 ಜನ ಶಾಸಕರು, 4 ಜನ ವಿಧಾನಪರಿಷತ್ ಸದಸ್ಯರು  ಇದ್ದಾರೆ. ಅವರೆಲ್ಲರೂ ಸಾಮೂಹಿಕವಾಗಿ ಗೈರು ಹಾಜರಾಗಿದ್ದು ಒಂದು ಮಾದರಿನಾ? ಎಂದು ಒಬ್ಬ, ಅಧಿಕಾರಿ ಸ್ನೇಹಿತರು ಈ ಪೋಟೋ ಹಾಕಿ ಪ್ರಶ್ನೆಸಿದ್ದಾರೆ.

ನನ್ನ ಉತ್ತರ: ಗೋವಿಂದಾ, ಗೋವಿಂದ?