TUMAKURU:SHAKTHIPEETA FOUNDATION
ತುಮಕೂರು ಜಿಲ್ಲೆ, ಮಧುಗಿರಿ ತಾ. ಪುರವರ ಹೋಬಳಿ, ಕೊಡ್ಲಾಪುರ ಕ್ಲಸ್ಟರ್ ನ ಸುಮಾರು 14 ಶಾಲೆಗಳ ಮಕ್ಕಳೊಂದಿಗೆ, ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯ ನಿವಾಸಿಗಳ ಮಕ್ಕಳೊಂದಿಗೆ ಕಲ್ಚರಲ್ ಎಕ್ಸ್ ಚೇಂಜ್ ಸಭೆ ದಿನಾಂಕ:25.11.2023 ರಂದು ನಡೆದ ಸಭೆಯಲ್ಲಿ ಒಂದು ವಿಶಿಷ್ಟ ಅನುಭವವಾಯಿತು.
ಎಲ್ಲಾ ಶಾಲೆಗಳ ಸಭೆ ಮುಕ್ತಾಯದ ಹಂತದಲ್ಲಿ ಇತ್ತು. ಕೊಡ್ಲಾಪುರದ ಹೆಡ್ ಮಾಸ್ಟರ್, ಶ್ರೀ ಹೊನ್ನೇಶಪ್ಪನವರು ವಿದ್ಯಾಥಿಗಳನ್ನು ಮಾತನಾಡಲು ಕರೆದರೂ ಯಾವೊಬ್ಬ ವಿದ್ಯಾರ್ಥಿಯೂ ಮುಂದೆ ಬರಲಿಲ್ಲ.
ನಾನೇ ಒಬ್ಬ ವಿದ್ಯಾರ್ಥಿಯನ್ನು ಬಲವಂತವಾಗಿ ಎಬ್ಬಿಸಿ, ಕಿವಿಯಲ್ಲಿ ನೀನು ಮುಖ್ಯಂತ್ರಿಯಾದರೇ ಏನು ಮಾಡುತ್ತೀಯ ಹೇಳು ಎಂದೆ.
ಆತ ನಗುತ್ತಲೇ ರೈತರಿಗೆ ನೀರು ಕೊಡುತ್ತೇನೆ.
ಎಲ್ಲಾ ಶಾಲೆಗಳನ್ನು ಚೆನ್ನಾಗಿ ಮಾಡುತ್ತೇನೆ.
ಹೀಗೆ 5 ಯೋಜನೆಗಳ ಬಗ್ಗೆ ಹೇಳಿದ, ತಕ್ಷಣ ಶಾಲಾ ಮಕ್ಕಳು ತಪ್ಪಾಳೆ ತಟ್ಟುವ ಮೂಲಕ ಅವನಿಗೆ ಪ್ರೋತ್ಸಾಹ ನೀಡಲು ಸೂಚಿಸಿದೆ.
ನಂತರ ಸರದಿಯ ಮೇಲೆ ಎದ್ದು ಬಂದು ವಿದ್ಯಾರ್ಥಿ- ವಿದ್ಯಾನಿಯರು ಮಾತನಾಡಿದರು. ಹೊನ್ನೇಶಪ್ಪನವರಿಗೆ ನಿಜಕ್ಕೂ ತೃಪ್ತಿಯಾಯಿತು. ನಿಜಕ್ಕೂ ಮಕ್ಕಳ ಮನಸ್ಸು ಟ್ಯೂಬ್ ಲೈಟ್ ಎಂದು ಮಾತನಾಡಿಕೊಳ್ಳುತ್ತಿದ್ದೆವು.
ಇದ್ದಕ್ಕಿದ್ದ ಹಾಗೆ ನಾನು ಮೊದಲು ಬಲವಂತವಾಗಿ ಎಬ್ಬಿಸಿದ್ದ 4 ನೇ ತರಗತಿಯ ವಿದ್ಯಾರ್ಥಿ ಲಿಖಿತ್ ಬಂದು ನನ್ನ ಕಾಲಿಗೆ ಬಿದ್ದ, ನಾನು ಅವನನ್ನು ಎಬ್ಬಿಸಿ, ಅವನ ಹೆಸರು, ತಂದೆಯ ಮೊಬೈಲ್ ನಂಬರ್ ಸಂಗ್ರಹಿಸಿದೆ.
ಅವನು ಏಕೆ ನನ್ನ ಕಾಲಿಗೆ ಬಿದ್ದ ಎಂಬ ಕೂತೂಹಲ ನನ್ನನ್ನೂ ಇನ್ನೂ ಕಾಡುತ್ತಿದೆ. ಒಂದೆರಡು ದಿವಸ ಆದ ಮೇಲೆ ಅವನೊಂದಿಗೆ ಮಾತನಾಡಿ ವಿಚಾರ ತಿಳಿಯುವ ತವಕ ನನಗೆ ಇದೆ.