3rd December 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆ, ಮಧುಗಿರಿ ತಾ. ಪುರವರ ಹೋಬಳಿ, ಕೊಡ್ಲಾಪುರ ಕ್ಲಸ್ಟರ್ ನ ಸುಮಾರು 14 ಶಾಲೆಗಳ ಮಕ್ಕಳೊಂದಿಗೆ, ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯ ನಿವಾಸಿಗಳ ಮಕ್ಕಳೊಂದಿಗೆ ಕಲ್ಚರಲ್ ಎಕ್ಸ್ ಚೇಂಜ್ ಸಭೆ ದಿನಾಂಕ:25.11.2023 ರಂದು ನಡೆಯಿತು.

ನಿಜಕ್ಕೂ ಇದೊಂದು ಒಳ್ಳೆಯ ಅದ್ಭುತ ಅನುಭವ

  1. ಮಕ್ಕಳ ಪ್ರತಿಭೆ.
  2. ಶಾಲೆಗಳ ಶಿಸ್ತು.
  3. ಕೈತೋಟಗಳ ಮಾದರಿ.
  4. ಬಿಸಿಯೂಟದ ಅಡುಗೆ ಮನೆ.
  5. ಬಿಸಿಯೂಟದ ಸವಿ.
  6. ಶಾಲೆಗಳ ಮೂಲಭೂತ ಸೌಕರ್ಯ.
  7. ಮಾಸ್ಟರ್ ಗಳ ಅನಿಸಿಕೆ.
  8. ಪೋಷಕರ ಅಭಿಪ್ರಾಯ.
  9. ಗ್ರಾಮಗಳ ಸ್ಥಿತಿಗತಿ

ಈ ಎಲ್ಲಾ ಅಂಶಗಳ ಮನವರಿಕೆಗೆ ಒಳ್ಳೆಯ ಉತ್ತಮ ವೇದಿಕೆಯಾಗಿತ್ತು. ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ, ವಿಶ್ವದ ವಿವಿಧ ದೇಶಗಳ, ಭಾರತ ದೇಶದ ವಿವಿಧ ರಾಜ್ಯಗಳ ಜನ, ಕರ್ನಾಟಕದ ವಿವಿಧ ಜಿಲ್ಲೆಗಳ ಜನ ವಾಸಿಸುವ  ಒಂದು ಹಲವಾರು ಸಂಸ್ಕøತಿಗಳ ಕಣಜವಾಗಿದೆ.

 ಅನಾಥ ಮಕ್ಕಳಿಗೆ, ವೃದ್ಧಾಶ್ರಮದ ಹಿರಿಯರಿಗೆ ಅಗತ್ಯ ವಸ್ತುಗಳನ್ನು ನೀಡುವ ಆಲೋಚನೆ, ಇಂದು ಸುಮಾರು 14 ಶಾಲೆಗಳ ಮಕ್ಕಳಿಗೆ ಸ್ಕೂಲ್ ಬ್ಯಾಗ್, ಫೆನ್ಸಿಲ್, ಚಾಕ್ ಲೇಟ್ ಇತ್ಯಾದಿ ವಸ್ತುಗಳನ್ನು ನೀಡುವುದರ ಜೊತೆಗೆ ಮೇಲ್ಕಂಡ ವಿವಿಧ ಅಂಶಗಳ ಬಗ್ಗೆ ವಿಶೇಷ ಗಮನ ಹರಿಸಲಾಯಿತು.

ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಹರಿಯಾಣ, ರಾಜಸ್ಥಾನ ಮತ್ತು ಕರ್ನಾಟಕ ರಾಜ್ಯದ ಉಡುಪಿ, ದಾವಣಗೆರೆ, ತುಮಕೂರು ಜಿಲ್ಲೆಗಳ ನಿವಾಸಿಗಳ ಕುಟುಂಬದವರು, ತಮ್ಮ ಮಕ್ಕಳೊಂದಿಗೆ ಭಾಗವಹಿಸಿದ್ದರು.

ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವ ಬದಲು ಅದೇ ಹಣದಲ್ಲಿ, ಈ ರೀತಿ ನೀಡ್ ಬೇಸ್ಡ್ ವಸ್ತುಗಳನ್ನು ನೀಡಿದರೇ ಹೇಗೆ ಎಂಬ ಉತ್ತರ ಪ್ರದೇಶದ ಶ್ರೀ ರವೀಂದ್ರರವರ ಪರಿಕಲ್ಪನೆಗೆ ಸಹಾಯ ಹಸ್ತ ನೀಡಿದವರು ನೂರಾರು ಜನರು.

ಚುಂಚೇನಹಳ್ಳಿ, ಗಿರಿಗೌಡನಹಳ್ಳಿ, ಬಡಕನಹಳ್ಳಿ, ವೀರನಾಗೇನಹಳ್ಳಿ, ಇಮ್ಮಡಗೊಂಡನಹಳ್ಳಿ, ಗೋವಿಂದನಹಳ್ಳಿ, ಕೋಡ್ಲಾಪುರ,ಮುದ್ದೇನಹಳ್ಳಿ,ಕೃಷ್ಣಯ್ಯನ ಪಾಳ್ಯ, ಅರಳಾಪುರ, ಉಪ್ಪಾರಹಳ್ಳಿ, ಶ್ರೀ ರಾಮಪುರ, ಗಾಳಿಹಳ್ಳಿ, ಮತ್ತು ತಾಳಕೆರೆ ಗ್ರಾಮಗಳ ಪಾಠಶಾಲೆಗಳ ಮಕ್ಕಳೊಂದಿಗೆ 5 ಕಡೆ ಸಭೆ ಆಯೋಜಿಸಲಾಗಿತ್ತು

ಪಿಜೆಸಿಯ ನಿವಾಸಿ ಕೋಡ್ಲಾಪುರದ ಶ್ರೀ ರವೀಶ್ ರವರು ಮತ್ತು ಕುಟುಂಬದವರ ಸಲಹೆ ಮೇರೆಗೆ, ಮಧುಗಿರಿ ಡಿಡಿಪಿಐ, ಮಧುಗಿರಿ ತಾ, ಬಿಇಓ ಮತ್ತು ಕೋಡ್ಲಾಪುರ್ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಕೋಡ್ಲಾಪುರ ಹೆಚ್.ಹೆಮ್ ರವರೊಂದಿಗೆ ದೂರವಾಣಿ ಮೂಲಕ ಸಭೆ ನಿಗಧಿಯಾಗಿದ್ದರೂ, ಅತ್ಯಂತ ವ್ಯವಸ್ಥಿತವಾಗಿತ್ತು. ಶಿಕ್ಷಕರ ಮತ್ತು ಮಕ್ಕಳ ಶಿಸ್ತು ವಿಶೇಷ ಗಮನ ಸೆಳೆಯಿತು.