27th July 2024
Share

TUMAKURU:SHAKTHIPEETA FOUNDATION

ನನ್ನ ಕನಸಿನ ಎಲ್ಲಾ ಯೋಜನೆಗಳನ್ನು ಡಿಜಿಟಿಲಿಕರಣ ಮಾಡಲು ಮತ್ತು ತನ್ನದೇ ಆದ ಸ್ಪಾಪ್ಟ್ ವೇರ್ ಅಭಿವೃದ್ಧಿ ಪಡಿಸಲು ಹಾಗೂ 2047 ರವರೆಗೆ ನಿರ್ವಹಣೆ ಮಾಡಲು, ಆಸಕ್ತ ಸಾಪ್ಟ್ ವೇರ್ ಕಂಪನಿಗಳೊಂದಿಗೆ, ನಿರ್ಧಿಷ್ಟ ಹೊಣೆಗಾರಿಕೆಗಳೊಂದಿಗೆ ಎಂ.ಓ.ಯು ಮಾಡಿಕೊಂಡು ಇಂದಿನಿಂದ ಚಾಲನೆ ನೀಡಲಾಗುವುದು ಎಂದು ತಿಳಿಸಲು ಹರ್ಷಿಸುತ್ತೇನೆ.

ತುಮಕೂರಿನ ಶಕ್ತಿಭವನ ದ ಕಟ್ಟಡದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಶಕ್ತಿಪೀಠ ಫೌಂಡೇಷನ್ ಗೆ 2047 ರವರೆಗೆ ಬಾಡಿಗೆ ಕರಾರು ಮಾಡಿಕೊಳ್ಳಲಾಗಿದೆ.

ಶಕ್ತಿಪೀಠ ಮ್ಯೂಸಿಯಂ, ಫಿಸಿಕಲ್ ಲೈಬ್ರರಿ, ಡಿಜಿಟಲ್ ಲೈಬ್ರರಿ, ಹ್ಯೂಮನ್ ಲೈಬ್ರರಿ ಮತ್ತು ನಾಲೇಡ್ಜ್ ಬ್ಯಾಂಕ್-2047 ಕ್ಕೆ  ಪೂರPವಾಗಿÀ ಇಂಟೀರಿಯರ್ ಕಾಮಗಾರಿ ಆರಂಭಿಸಲು, ಅಂತಿಮ ಹಂತದ ಕಸರತ್ತು ನಡೆಯುತ್ತಿದೆ.

ತುಮಕೂರು ಜಿಲ್ಲೆಯಲ್ಲಿ ಹಾಲಿ ಇವೆ ಎನ್ನಲಾದ 2735 ಗ್ರಾಮಗಳ ಮತ್ತು 11 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ, ಬಡಾವಣೆಗಳ ಅಭಿವೃದ್ಧಿ ಮಾಹಿತಿಗಳನ್ನೂ ಒಳಗೊಂಡ ‘ಸ್ಟೂಡೆಂಟ್ ಮಾಡೆಲ್’ ಸಿದ್ಧವಾಗಿದೆ. ಅಭಿವೃದ್ಧಿ ಪೀಠ, ಶಕ್ತಿಪೀಠ ಮತ್ತು ಜಲಪೀಠಗಳ ಪ್ರತ್ಯೇಕ ಆಪ್ ಗಳು ಸಿದ್ಧವಾಗುತ್ತಿವೆ.

ಸಂಪೂರ್ಣವಾಗಿ ಇ-ಆಫೀಸ್ ಮೂಲಕ ಕಚೇರಿಯ ಎಲ್ಲಾ ವ್ಯವಹಾರಗಳು ಆರಂಭವಾಗಲಿವೆ. 01.08.1988 ರಿಂದ ನಡೆದ ಎಲ್ಲಾ ಚಟುವಟಿಕೆಗಳನ್ನು ಡಿಜಿಟಲೀಕರಣ ಮಾಡಲಾಗುವುದು. ಅಂದಿನಿಂದ ವಿವಿಧ ಸಂಸ್ಥೆಗಳು/ವ್ಯಕ್ತಿಗಳು ನಮ್ಮ ಜೊತೆ ಸಹಕರಿಸಿರುವ ಎಲ್ಲಾ ಪರಿಣಿತರ ಅಭಿಪ್ರಾಯಗಳನ್ನು ಸಂಗ್ರಹ ಮಾಡಲಾಗುವುದು.

ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ಸ್ಥಾಪಿಸಿರುವ, ತುಮಕೂರು ರೀಸರ್ಚ್ ಫೌಂಡೇಷನ್- 2047 ವತಿಯಿಂದ ಡಿಸೆಂಬರ್‍ನಲ್ಲಿ ಬಿಡುಗಡೆ ಮಾಡಿಸಲು ಸಿದ್ಧತೆ ನಡೆದಿದೆ.

ಒಂದು ವರ್ಷ ಕೈಗೊಳ್ಳಬೇಕಾಗಿರುವ ಯೋಜನೆಗಳ ಪಟ್ಟಿಯೂ ಸಿದ್ಧವಾಗುತ್ತಿದೆ. ಮುಂದಿನ ಡೆಸೆಂಬರ್, ಜನವರಿ, ಫೆಬ್ರವರಿ ಮತ್ತು ಮಾರ್ಚ್ ಸೇರಿದಂತೆ ನಾಲ್ಕು ತಿಂಗಳಿನಲ್ಲಿ, 2047 ರವರೆಗಿನ ಎಲ್ಲಾ ಅಧ್ಯಯನ, ಸಂಶೋಧನೆ ಮತ್ತು ವಿಶ್ಲೇಷಣೆಗಳೊಂದಿಗೆ ಜಾಗೃತಿ ಅಧಿಕೃತವಾಗಿ ಆರಂಭವಾಗಲಿದೆ.

‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ಪ್ರತಿಯಲ್ಲಿನ ಪ್ರತಿಯೊಂದು ಅಂಶಗಳನ್ನು ಅನುಷ್ಠಾನ ಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಪತ್ರವ್ಯವಹಾರಗಳ, ಅನುಸರಣೆ ಮತ್ತು ಪಲಿತಾಂಶಗಳು ಡಿಜಿಟಿಲೀಕರಣ ವಾಗಲಿವೆ.

 ಅಂತಿಮ ವರದಿಯನ್ನು ಸರ್ಕಾರಕ್ಕೆ ನೀಡುವ ಮುನ್ನ, ತುಮಕೂರು ಜಿಲ್ಲೆಯ ಫೈಲಟ್ ಯೋಜನೆಗಳ ಸಾಧಕ-ಬಾಧಕಗಳ ಸಹಿತ ನೀಡಲಾಗುವುದು. ನನ್ನ ದೃಷ್ಠಿಯಲ್ಲಿ ಇದೊಂದು ಅಭಿವೃದ್ಧಿ ಯುದ್ಧ ವಾಗಲಿದೆ.ಸುಲಭದ ಮಾತಂತೂ ಅಲ್ಲ ಎಂಬ ಅರಿವೂ ನನಗೆ ಇದೆ.

ಆಸಕ್ತರು ಕೈ ಜೋಡಿಸ ಬಹುದಾಗಿದೆ.